Friday, October 18, 2024

Latest Posts

ಪತಿ- ಪತ್ನಿಯಲ್ಲಿ ಈ ಗುಣವಿದ್ದಾಗಲೇ ಹೆಚ್ಚು ಜಗಳವಾಗೋದು..

- Advertisement -

ಪತಿ-ಪತ್ನಿ ಅಂದಮೇಲೆ ಅಲ್ಲಿ ಜಗಳವಾಗುವುದು ಸಾಮಾನ್ಯ. ಗಂಡ ಹೆಂಡ್ತಿ ಜಗಳ ಉಂಡು ಮಲಗೋತನಕ, ಅನ್ನುವಂತೆ, ಮಲಗುವಾಗ ಜಗಳ ಸರಿಹೋಗಬೇಕು. ಅದು ಮುಂದುವರಿದಲ್ಲಿ, ಜೀವನದ ನೆಮ್ಮದಿಯೇ ಹಾಳಾಗುತ್ತದೆ. ಹಾಗಾದರೆ, ಪತಿ-ಪತ್ನಿ ಹೇಗಿದ್ದಲ್ಲಿ, ಹೆಚ್ಚು ಜಗಳವಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯ ವಿಷಯ: ನಾನ್ಯಾಕೆ ಮೊದಲು ಪ್ರೀತಿ ತೋರಿಸಲಿ..? ಮೊದಲು ಅವನೇ ಪ್ರೀತಿ ತೋರಿಸಲಿ. ನಂತರ ನಾನು ಪ್ರೀತಿಸುತ್ತೇನೆ ಅನ್ನೋ ಅಹಂ ಇರುವಲ್ಲಿವರೆಗೆ, ಪತಿ-ಪತ್ನಿ ಜೀವನ ಸರಿಯಾಗಿರಲು ಸಾಧ್ಯವಿಲ್ಲ. ಮದುವೆಯಾದ ಬಳಿಕ, ನೀವು ಎರಡು ದೇಹ ಒಂದೇ ಪ್ರಾಣ ಎಂಬ ಹಾಗೇ ಇರಬೇಕು. ಹಾಗಾಗಿ ಪ್ರೀತಿ ತೋರಿಸಲು ಹಿಂಜರಿಯಬಾರದು. ಆದರೆ ಅದೇ ಪ್ರೀತಿ, ಅತಿಯಾಗಿ, ಕಿರಿಕಿರಿಯೂ ಆಗಬಾರದು. ಹಾಗಾಗಿ ಪ್ರೀತಿ ಮಿತವಾಗಿ ತೋರಿದರೂ, ಎದುರಿನವರಿಗೆ ಇಷ್ಟವಾಗುವ ಹಾಗಿರಿ. ನಿಮ್ಮ ಪ್ರೀತಿ ಅವರಿಗೆ ಇಷ್ಟವಾದಲ್ಲಿ, ಮುಂದೆ ಅವರಾಗಿಯೇ ನಿಮ್ಮಲ್ಲಿ ಪ್ರೀತಿ ತೋರಿಸುತ್ತಾರೆ.

ಎರಡನೇಯ ವಿಷಯ: ಒಬ್ಬರನ್ನೊಬ್ಬರು ಗೌರವಿಸಿ. ನಿಮ್ಮಲ್ಲಿ ಪದೇ ಪದೇ ಜಗಳವಾಗಬಾರದು ಅಂದರೆ, ನೀವು ಪರಸ್ಪರ ಗೌರವಿಸಬೇಕು. ಸಣ್ಣ ವಿಷಯಕ್ಕೆ ಛೇಡಿಸುವುದು, ಕೊಂಕು ಮಾತನಾಡುವುದು, ಚುಚ್ಚಿ ಮಾತನಾಡುವುದು, ತಪ್ಪು ಕಂಡು ಹಿಡಿಯುವುದೆಲ್ಲ ಮಾಡಿದರೆ, ಸಂಬಂಧದಲ್ಲಿ ಕಿರಿ ಕಿರಿಯುಂಟಾಗುತ್ತದೆ. ಹಾಗಾಗಿ ಒಬ್ಬರನ್ನೊಬ್ಬರು ಗೌರವಿಸುತ್ತ, ಹೊಂದಿಕೊಂಡು ಹೋಗಬೇಕು.

ಮೂರನೇಯ ವಿಷಯ: ಪತಿ ಅಥವಾ ಪತ್ನಿಯನ್ನಷ್ಟೇ ಅಲ್ಲ, ಅವರ ಮನೆಯವರನ್ನೂ ನೀವು ಗೌರವಿಸಬೇಕು. ಕೆಲ ಸಂಬಂಧಗಳು ಮುರಿಯುವುದೇ, ಇಂಥ ಮಾತುಗಳಿಂದ. ನಿಮ್ಮ ಅಪ್ಪ ಹಾಗೆ, ನಿಮ್ಮ ಅಮ್ಮ ಹಾಗೆ, ನಿಮ್ಮ ಮನೆಯವರು ಹೀಗೆ. ಈ ರೀತಿ, ಸಂಗಾತಿಯ ಮನೆ ಮಂದಿಯ ಬಗ್‌ಗೆ ಕೆಟ್ಟದಾಗಿ, ಅವಮಾನಕರವಾಗಿ ಮಾತನಾಡಿದಾಗ, ನಿಮ್ಮ ಸಂಗಾತಿಗೆ ಅದನ್ನು ಸಹಿಸಲು ಆಗುವುದಿಲ್ಲ. ಆಗ ಆಕೆಗೆ ನಿಮ್ಮ ಮೇಲಿನ ಗೌರವ ಹೊರಟು ಹೋಗುತ್ತದೆ. ಹಾಗಾಗಿ ಬರೀ ಸಂಗಾತಿಗಷ್ಟೇ ಅಲ್ಲ. ಸಂಗಾತಿಯ ಮನೆಜನರಿಗೂ ಗೌರವ ಕೊಡುವುದು ಮುಖ್ಯ.

ನಾಲ್ಕನೇಯ ವಿಷಯ: ನಿಮ್ಮಿಬ್ಬರ ಮಧ್ಯೆ ಏನೇ ಜಗಳವಾದರೂ, ಅದು ನಿಮ್ಮೊಳಗೇ ಇರಲಿ. ನಾಲ್ಕು ಗೋಡೆಗಳ ಮಧ್ಯೆಯೇ ಇರಲಿ. ಆ ಜಗಳದ ವಿಷಯ ಮೂರನೇಯವರ ಕಿವಿಗೆ ಬೀಳದಂತೆ ನೋಡಿಕೊಳ್ಳಿ. ಆ ಮೂರನೇಯವರು ಅಪ್ಪ, ಅಮ್ಮ, ಅಣ್ಣ,ತಮ್ಮ, ಅಕ್ಕಿ, ತಂಗಿ ಯಾರೇ ಆಗಿರಲಿ. ಮನೆಜನರಿಗೂ ನಿಮ್ಮ ಜಗಳ ಯಾಕೆ ಗೊತ್ತಾಗಬಾರದು ಅಂದರೆ, ಅವರು ಮುಂದೊಂದು ದಿನ ಈ ವಿಷಯವನ್ನೇ ಇಟ್ಟುಕೊಂಡು ನಿಮ್ಮನ್ನು ಹಂಗಿಸಬಹುದು. ಅಲ್ಲದೇ, ಪತಿ-ಪತ್ನಿ ಇಬ್ಬರೂ ಒಬ್ಬರ ಗೌರವ ಇನ್ನೊಬ್ಬರು ಕಾಪಾಡುವಂತಿರಬೇಕು. ಆಗ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.

ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅನ್ನೋದು ಯಾಕೆ ಗೊತ್ತಾ..?

ಮಹಾಭಾರತ ಯುದ್ಧದ ಸೂಚನೆ ಇದ್ದರೂ, ಪಾಂಡವರು ಜೂಜಾಡದಂತೆ ಕೃಷ್ಣನೇಕೆ ತಡೆಯಲಿಲ್ಲ..?

ಹನುಮಂತ ತನ್ನ ಎದೆಸೀಳಿ ರಾಮ ಸೀತೆಯ ಭಕ್ತಿ ತೋರಿಸಲು ಕಾರಣವೇನು..?

- Advertisement -

Latest Posts

Don't Miss