Spiritual Story: ಮನೆಗೆ ಅತಿಥಿಗಳು ಬರುವುದೆಂದರೆ ಸಾಮಾನ್ಯ ವಿಷಯವಲ್ಲ. ಅವರನ್ನು ಸತ್ಕರಿಸಿ, ಉಣ ಬಡಿಸಿ, ಮಾತನಾಡಿಸಿ, ಕಳಿಸುವ ಯೋಗ್ಯತೆ ಇರುವವರ ಮನೆಗೆ ಮಾತ್ರ ಅತಿಥಿಗಳು ಬರುತ್ತಾರೆ. ಅದರಲ್ಲೂ ಶಿಕ್ಷಕರು, ಮಂಗಳಮುಖಿಯರು, ಸಹೋದರಿಯರು, ಮಗಳು ಇಂಥವರೆಲ್ಲ ಮನೆಗೆ ಬರಬೇಕು ಅಂದರೆ, ಅದಕ್ಕೆಲ್ಲ ಪುಣ್ಯ ಬೇಕಾಗುತ್ತದೆ. ಮದುವೆ ಮಾಡಿ ಕೊಟ್ಟ ಮಗಳನ್ನು ಮನೆಗೆ ಬರ ಮಾಡಿಕೊಂಡು, ಆಕೆಯನ್ನು ಪ್ರೀತಿಯಿಂದ ಕಾಣುವುದಕ್ಕೂ ಕೂಡ ಅಪ್ಪ ಅಮ್ಮ, ಸಹೋದರ ಸಹೋದರಿಯರು ಪುಣ್ಯ ಮಾಡಿರಬೇಕಾಗುತ್ತದೆ. ಎಲ್ಲರ ಹಣೆ ಬರಹದಲ್ಲೂ ಆ ಸುಖವಿರುವುದಿಲ್ಲ. ಹಾಗಾಗಿ ಇಂದು ನಾವು ಮನೆಗೆ ಕೆಲ ಅತಿಥಿಗಳು ಬಂದಾಗ, ಅವರಿಗೆ ಯಾವ ರೀತಿ ಸತ್ಕರಿಸಬೇಕು ಅಂತಾ ಹೇಳಲಿದ್ದೇವೆ.
ಶಿಕ್ಷಕರು: ಶಿಕ್ಷಕರು ಮನೆಗೆ ಬರುವುದು ಸಾಮಾನ್ಯ ವಿಷಯವಲ್ಲ. ನಿಮಗೆ ವಿದ್ಯೆ ಕೊಡುವ ಶಿಕ್ಷಕರು ಮನೆಗೆ ಬಂದಾಗ, ಅವರನ್ನು ಪ್ರೀತಿಯಿಂದ ಆದರಿಸಿ, ಊಟ ಬಡಿಸಿ, ಏನಾದರೂ ಉಡುಗೊರೆ ನೀಡಿ, ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆದು ಕಳಿಸಬೇಕು.
ಮಂಗಳಮುಖಿಯರು: ಮಂಗಳಮುಖಿಯರ ಬಂದಾಗ, ಅವರಿಗೆ ಬಟ್ಟೆ, ಅಥವಾ ದುಡ್ಡು ನೀಡಿ ಕಳಿಸಬೇಕು. ಮಂಗಳಮುಖಿಯರನ್ನು ಅರ್ಧ ನಾರೇಶ್ವರ ರೂಪ ಎಂದು ಕರೆಯಲಾಗುತ್ತದೆ. ಹಾಗಾಗಿ ಮಂಗಳಮುಖಿ ನಿಮ್ಮ ಮನೆಗೆ ಬಂದರೆ, ಅವರಿಗೆ ಏನಾದರೂ ಕೊಟ್ಟು ಕಳಿಸಿ.
ಭಿಕ್ಷುಕರು: ಕೆಲವರು ಕೈ ಕಾಲು ಗಟ್ಟಿ ಇದ್ದು, ದುಡಿಯಲು ಸಾಧ್ಯವಿದ್ದರೂ ಭಿಕ್ಷೆ ಬೇಡುತ್ತಾರೆ. ಅಂಥವರಿಗೆ ನೀವು ಬೆಲೆ ನೀಡಬೇಕೆಂದೇನಿಲ್ಲ. ಆದರೆ ನಡೆಯಲು ಆಗದೇ, ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಇರುವವರಿಗೆ ನೀವು ಸಹಾಯ ಮಾಡಬಹುದು. ನಿರ್ಗತಿಕರು ಮನೆಯ ಬಳಿ ಬಂದಾಗ, ಅವರಿಗೆ ಆಹಾರವನ್ನು ಸಹ ನೀಡಬಹುದು.
ಸಹೋದರಿ ಅಥವಾ ಮಗಳು: ಸಹೋದರಿ ಅಥವಾ ಮಗಳು ಗಂಡನ ಮನೆಯಿಂದ ತವರು ಮನೆಗೆ ಕಲ ದಿನಗಳ ಕಾಲ ಉಳಿಯಲು ಬಂದರೆ, ಅಂಥ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಏನಾದರೂ ಉಡುಗೊರೆ ಕೊಡಿ. ಅವರ ಖರ್ಚಿಗೆ ದುಡ್ಡು ಸಹ ಕೊಡಬಹುದು. ಕೆಲವರು ದುಡ್ಡಿಲ್ಲವೆಂದು ಬಾಯಿ ಬಿಟ್ಟು ಕಷ್ಟವನ್ನು ಹೇಳಿಕೊಳ್ಳುವುದಿಲ್ಲ. ಹಾಗಾಗಿ ಸಹೋದರಿ ಅಥವಾ ಮಗಳಿಗೆ ಖರ್ಚಿಗಾಗಿ ದುಡ್ಡು ಕೊಡುವುದು ಉತ್ತಮ.
ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..