Health Tips: ನಾವು ಕ್ಯಾನ್ಸರ್ ಬಗ್ಗೆ ನಿಮಗೆ ಈಗಾಗಲೇ ಹಲವು ಮಾಹಿತಿಗಳನ್ನು ಕೊಟ್ಟಿದ್ದೇವೆ. ಸ್ತನ ಕ್ಯಾನ್ಸರ್ ಲಕ್ಷಣಗಳು, ಕ್ಯಾನ್ಸರ್‌ನಲ್ಲಿರುವ ವಿಧಗಳು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಸ್ತನ ಕ್ಯಾನ್ಸರ್ ಯಾವ ವಯಸ್ಸಿಗೆ ಬರುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಸ್ತನ ಕ್ಯಾನ್ಸರ್ ಯಾವ ವಯಸ್ಸಿನಲ್ಲಿ ಬರುತ್ತದೆ ಎಂಬ ಬಗ್ಗೆ ವಿವರಿಸಿದ್ದಾರೆ. ಹೆಚ್ಚಾಗಿ 40 ವರ್ಷ ದಾಟಿದ ಬಳಿಕ, ಸ್ತನ ಕ್ಯಾನ್ಸರ್ ಬರುತ್ತದೆ. ಇನ್ನು ಕುಟುಂಬದಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದಾಗ ಮಾತ್ರ, ಚಿಕ್ಕ ವಯಸ್ಸಿಗೆ ಸ್ತನ ಕ್ಯಾನ್ಸರ್ ಬರುತ್ತದೆ.
ಇನ್ನು ಸ್ತನ ಕ್ಯಾನ್ಸರ್ ಬಂದಾಗ, ಚಿಕಿತ್ಸೆ ಕೊಡುವುದಕ್ಕಿಂತ ಮುಂಚೆ ವೈದ್ಯರು, ಕ್ಯಾನ್ಸರ್ ಕಂಕುಳವರೆಗೂ ಹರಡಿದೆಯಾ ಎಂದು ಪರೀಕ್ಷಿಸಿ ನೋಡುತ್ತಾರೆ. ಆಯಾ ಸ್ಟೇಜ್‌ಗೆ ತಕ್ಕಂತೆ ಚಿಕಿತ್ಸೆ ನೀಡಲಾಗುತ್ತದೆ. ಸ್ಟೇಜ್ 1 ಅಂದ್ರೆ ಬರೀ ಸ್ತನದ ಬಳಿ ಚಿಕ್ಕ ಗಡ್ಡೆಯಾಗಿರುತ್ತದೆ. ಸ್ಟೇಜ್ 2 ಅಂದ್ರೆ, ಗಡ್ಡೆ ಸ್ವಲ್ಪ ಪ್ರಮಾಣದಲ್ಲಿ ಕಂಕುಳ ಬಳಿ ಹರಡಿರುತ್ತದೆ. ಇನ್ನು ಸ್ಟೇಜ್ 3 ಅಂದ್ರೆ ಗಡ್ಡೆ ದೊಡ್ಡದಾಗಿ, ಕಂಕುಳಿಗೂ ಹರಡಿರುತ್ತದೆ.
ಇನ್ನು 4ನೇಯ ಸ್ಟೇಜ್ ಅಂದ್ರೆ, ಸ್ತನದಲ್ಲಿರುವ ಗಡ್ಡೆ ದೊಡ್ಡದಾಗಿ, ಕ್ಯಾನ್ಸರ್ ಕಂಕುಳ, ಲಿವರ್, ಶ್ವಾಸಕೋಶ ಎಲ್ಲೆಡೆ ಹರಡಿರುತ್ತದೆ. ಹೀಗೆ ಯಾವ ಸ್ಟೇಜ್‌ನಲ್ಲಿ ಕ್ಯಾನ್ಸರ್ ಇರುತ್ತದೆಯೋ, ಆ ಸ್ಟೇಜ್ ಪ್ರಕಾರವಾಗಿ, ಪರೀಕ್ಷಿಸಿ, ಚಿಕಿತ್ಸೆ ನೀಡಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..
ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?
ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..
ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?

