Saturday, April 19, 2025

Latest Posts

ಮನೆ ಬಳಿ ತೆಂಗಿನ ಮರವನ್ನು ಎಲ್ಲಿ ಬೆಳೆಸಬೇಕು..?

- Advertisement -

Spiritual: ಯಾವ ಮನೆಯಲ್ಲಿ ತೆಂಗಿನ ಮರ ಸಮೃದ್ಧವಾಗಿರುತ್ತದೆೋ, ಎಷ್ಟು ಎತ್ತರಕ್ಕೆ ಇರುತ್ತದೆಯೋ, ಅಷ್ಟು ಆ ಮನೆಯ ನೆಮ್ಮದೆ, ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಏಕೆಂದರೆ, ತೆಂಗಿನ ಮರ, ಪವಿತ್ರವಾದ ಸ್ಥಾನ ಹೊಂದಿರುವ ಮರ. ಇದನ್ನು ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ಆದರೆ, ನಾವು ತೆಂಗಿನ ಮರವನ್ನು ಮನೆಯ ಸರಿಯಾದ ಭಾಗದಲ್ಲಿಯೇ ಬೆಳೆಸಬೇಕು. ಹಾಗಾದ್ರೆ ತಂಗಿನ ಮರವನ್ನು ಎಲ್ಲಿ ಬೆಳೆಸಬೇಕು ಅಂತಾ ತಿಳಿಯೋಣ ಬನ್ನಿ..

ತೆಂಗಿನ ಮರ ಮನೆಯ ಎದುರಿಗೆ ಇರಬೇಕು ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಏಕೆಂದರೆ, ನಿಮ್ಮ ಮನೆಗೆ ಆಗಮಿಸುವ ನಕಾರಾತ್ಮಕ ಶಕ್ತಿಯನ್ನು ತೆಂಗಿನ ಮರ ತಡೆಯುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಮನೆಯ ಮುಂದೆ ತೆಂಗಿನ ಗಿಡ ಸಮೃದ್ಧವಾಗಿ ಬೆಳೆದಷ್ಟು ನಿಮ್ಮ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುತ್ತದೆ. ಹಣಕಾಸಿನ ಸಮಸ್ಯೆಯೂ ದೂರವಾಗುತ್ತದೆ.

ಇನ್ನು ತೆಂಗಿನ ಮರ ಮನೆಯಲ್ಲಿ ಏಕೆ ಇರಬೇಕು ಎಂದರೆ, ತೆಂಗಿನ ಮರದಲ್ಲಿ ಲಕ್ಷ್ಮೀಯ ವಾಸವಿದೆ. ಹಾಗಾಗಿ ಇದು ಹಣಕಾಸಿನ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ನೀವು ತೆಂಗಿನ ಮರದ ಬುಡಕ್ಕೆ, ಕಸ ಕಡ್ಡಿ, ಮುಸುರೆಗಳನ್ನು ಹಾಕಬೇಡಿ. ಆ ಸ್ಥಳವನ್ನು ಸ್ವಚ್ಛವಾಗಿ ಇರಿಸಿ. ಮರ ಚೆನ್ನಾಗಿ ಬೆಳೆಯಲು ಏನು ಬೇಕೋ, ಅದನ್ನು ಹಾಕಿ. ಇದರಲ್ಲಿ ಲಕ್ಷ್ಮೀಯ ವಾಸವಿರುವ ಕಾರಣಕ್ಕೆ, ನೀವು ಮರವನ್ನು ಭಕ್ತಿಯಿಂದ ನೋಡಿಕೊಳ್ಳುವುದು ಮುಖ್ಯ.

ಇಷ್ಟೇ ಅಲ್ಲದೇ, ಇಂದಿನ ದಿನಗಳಲ್ಲಿ ತೆಂಗು ಬೆಳೆಸುವವರು ಇಲ್ಲದೇ, ತೆಂಗಿನ ಬೆಲೆ ಏರುತ್ತಲೇ ಹೋಗುತ್ತಿದೆ. ನಿಮ್ಮ ಮನೆಯಲ್ಲಿ ತೆಂಗಿನ ಮರವಿದ್ದರೆ, ನೀವು ಅದರಿಂದ ಬರುವ ತೆಂಗನ್ನೇ ಬಳಸಿ, ಆ ಮೂಲಕವೂ ಲಾಭ ಪಡೆಯಬಹುದು. ಹೀಗೆ ತೆಂಗಿನ ಮರ ಎಲ್ಲ ರೀತಿಯಿಂದಲೂ ಸಹಕಾರಿಯಾಗಿದೆ. ಹಾಗಾಗಿಯೇ ಇದನ್ನು ಕಲ್ಪವೃಕ್ಷವೆಂದು ಕರೆಯಲಾಗುತ್ತದೆ.

ಶ್ರೀಮಂತಿಕೆ ಇದ್ದಾಗ ನಾವು ಯಾವ ಕೆಲಸ ಮಾಡಬೇಕು ಅಂತಾರೆ ಚಾಣಕ್ಯರು..

ಮಹಿಳೆಯರು ಕುಂಬಳಕಾಯಿ ಕತ್ತರಿಸಬಾರದಂತೆ.. ಯಾಕೆ ಗೊತ್ತಾ..?

ಜೀವನದಲ್ಲಿ ಈ 4 ಜನರ ಮಾತನ್ನು ಎಂದಿಗೂ ಕಡೆಗಣಿಸಬೇಡಿ.

- Advertisement -

Latest Posts

Don't Miss