ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯವನ್ನ ಕಾಪಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಹಾಗೆ ತಯಾರಿಸುವ ಆಹಾರಕ್ಕೆ ಬಳಸುವ ಎಣ್ಣೆ, ಅಕ್ಕಿ-ಬೇಳೆ, ತರಕಾರಿ ಎಲ್ಲವೂ ಕೂಡ ಆರೋಗ್ಯಕರವಾಗಿಯೇ ಇರಬೇಕು. ಹಾಗಾಗಿ ನಾವಿಂದು ಅಡುಗೆಗೆ ಯಾವ ಎಣ್ಣೆ ಬಳಸಬೇಕು..? ಯಾವ ಎಣ್ಣೆ ಆರೋಗ್ಯಕ್ಕೆ ಉತ್ತಮ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಾವು ಎಲ್ಲ ರೀತಿಯ ಎಣ್ಣೆಯನ್ನ ಕೊಂಚ ಕೊಂಚವಾಗಿ ಬಳಸಬೇಕು. ಕೆಲವು ದಿನ ತೆಂಗಿನ ಎಣ್ಣೆಯಿಂದ, ಇನ್ನು ಕೆಲವು ದಿನ, ಶೇಂಗಾ ಎಣ್ಣೆಯಿಂದ, ಮತ್ತೆ ಕೆಲವು ದಿನ ಸಾಸಿವೆ ಎಣ್ಣೆ ಹೀಗೆ ಎಲ್ಲ ರೀತಿಯ ಎಣ್ಣೆಯನ್ನ ಬಳಸಬೇಕು. ಶೇಂಗಾ ಎಣ್ಣೆ ಮತ್ತು ತೆಂಗಿನ ಎಣ್ಣೆಯನ್ನ ಎಲ್ಲ ಸೀಸನ್‌ನಲ್ಲೂ ಬಳಸಬಹುದು. ಸಾಸಿವೆ ಎಣ್ಣೆ ಮಾತ್ರ ಚಳಿಗಾಲದಲ್ಲಷ್ಟೇ ಬಳಸಿದರೆ ಉತ್ತಮ. ಯಾಕಂದ್ರೆ ಇದು ಉಷ್ಣ ಹೆಚ್ಚಿರುವ ಎಣ್ಣೆಯಾಗಿದ್ದು, ಚಳಿಗಾಲದದಲ್ಲಿ ಇದರ ಬಳಕೆ ಮಾಡುವುದು, ಆರೋಗ್ಯಕ್ಕೆ ಒಳ್ಳೆಯದು.
ಇನ್ನು ನೀವು ಯಾವುದೇ ಎಣ್ಣೆಯಿಂದ ಅಡುಗೆ ತಯಾರಿಸಿದರೂ, ಊಟ ಮಾಡುವಾಗ, ಕೊಂಚ ತುಪ್ಪ ಬಳಸಿ. ಇದರಿಂದ ನಿಮ್ಮ ಮೂಳೆ ಬಲಗೊಳ್ಳುತ್ತದೆ. ಸೌಂದರ್ಯ ಉತ್ತಮವಾಗಿರುತ್ತದೆ. ಆರೋಗ್ಯವೂ ಸರಿಯಾಗಿ ಇರುತ್ತದೆ. ಅಡುಗೆ ಮಾಡುವಾಗಲೂ ತುಪ್ಪ ಬಳಸುವಷ್ಟು ಯೋಗ್ಯರಾಗಿದ್ದಲ್ಲಿ, ಇನ್ನೂ ಉತ್ತಮ. ಆದರೆ ಅಗತ್ಯವಿದ್ದಷ್ಟು ಮಾತ್ರ ಬಳಸಿ. ಅಮೃತ ಹೆಚ್ಚಾದರೂ ವಿಷ ಎಂಬಂತೆ, ಯಾವುದೇ ಆರೋಗ್ಯಕರ ಪದಾರ್ಥ ಹೆಚ್ಚು ಸೇವಿಸಿದರೂ, ಅದು ನಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಸಲಾಡ್ ಮಾಡಿದಾಗ, ಅದರ ಮೇಲೆ ಎರಡು ಸ್ಪೂನ್ ಆಲಿವ್ ಎಣ್ಣೆ ಹಾಕಿ ಸೇವಿಸಿ. ಇದರಿಂದ ನಿಮ್ಮ ಹೊಟ್ಟೆ ಕ್ಲೀನ್ ಆಗುತ್ತದೆ. ನಿಮ್ಮ ತ್ವಚೆಯೂ ಆರೋಗ್ಯಕರವಾಗಿ ಇರುತ್ತದೆ. ಇನ್ನು ನಿಮ್ಮ ಸೌಂದರ್ಯ ಇಮ್ಮಡಿಯಾಗಬೇಕು. ನಿಮ್ಮ ಕೂದಲಿನ ಸೌಂದರ್ಯ ಚೆನ್ನಾಗಿರಬೇಕು ಎಂದಲ್ಲಿ, ರಾತ್ರಿ ಮಲಗುವಾಗ, ಬೆಚ್ಚಗಿನ ಹಾಲಿಗೆ, ಒಂದೇ ಒಂದು ಡ್ರಾಪ್ಸ್, ಪ್ಯೂರ್ ಬಾದಾಮಿ ಎಣ್ಣೆಯನ್ನು ಹಾಕಿ ಕುಡಿಯಿರಿ.