Spiritual: ಜೀವನದ ಸಕಲ ಖುಷಿಗಳನ್ನು ತ್ಯಜಿಸಿ, ಪರಮಾತ್ಮನ ಭಕ್ತಿಯಲ್ಲಿ ಲೀನವಾಗುವುದೇ ಸಾಧುಗಳ ಜೀವನ. ಪುರುಷರನ್ನು ಸಾಧುಗಳು ಅಂತಾ ಕರೆದರೆ, ಸ್ತ್ರೀಯರನ್ನು ಸಾಧ್ವಿಗಳು ಎಂದು ಕರೆಯುತ್ತಾರೆ. ಇಂದು ನಾವು ಸಾಧ್ವಿಗಳ ಜೀವನ ಹೇಗಿರುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಭಾರತದಲ್ಲಿ ಸಾಧುಗಳಿರುವಷ್ಟು ಸಂಖ್ಯೆಯಲ್ಲಿ ಸಾಧ್ವಿಗಳಿಲ್ಲ. ಆದರೆ ಇರುವ ಸಾಧ್ವಿಗಳಲ್ಲಿ ಒಂದೆರಡು ಸಾಧ್ವಿಗಳು ಪ್ರಸಿದ್ಧರಿದ್ದಾರೆ. ಲೌಕಿಕ ಜೀವನವನ್ನು ತ್ಯಜಿಸಿ, ಪರಮಾತ್ಮನ ಭಕ್ತಿಯಲ್ಲಿ ಲೀನವಾಗುವ ಸಾಧ್ವಿಗಳು ಮೊದಲು ದೀಕ್ಷೆ ತೆಗೆದುಕೊಳ್ಳುತ್ತಾರೆ. ಒಮ್ಮೆ ದೀಕ್ಷೆ ತೆಗೆದುಕೊಂಡ ಮೇಲೆ, ಅವರಿಗೆ ಸಂಬಂಧ, ವಸ್ತು, ಆಹಾರಗಳ ಬಗ್ಗೆ ಪ್ರೀತಿ, ಮೋಹ ಇರಬಾರದು.
ಉತ್ತರ ಭಾರತದಲ್ಲಿ ದೀಕ್ಷೆ ತೆಗೆದುಕೊಳ್ಳುವ ಸಮಾರಂಭ ಎಷ್ಟು ಅದ್ಧೂರಿಯಾಗಿರುತ್ತದೆ ಎಂದರೆ, ಮದುವೆ ಮಾಡಿದ ಹಾಗೆ ದೀಕ್ಷಾ ಸಮಾರಂಭ ಮಾಡುತ್ತಾರೆ. ಇತ್ತೀಚೆಗೆ ಜೈನರಲ್ಲಿ ಶ್ರೀಮಂತರ ಮಕ್ಕಳೆಲ್ಲ ದೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ಅದೆಷ್ಟು ಪುಟ್ಟ ಮಕ್ಕಳೆಂದರೆ, ಅವರಿಗಿನ್ನು ಯವ್ವನವೇ ಬಂದಿರುವುದಿಲ್ಲ. ಆಗಲೇ, ಲೌಕಿಕ ಸುಖಗಳನ್ನೆಲ್ಲಾ ತ್ಯಜಿಸಿ, ಸನ್ಯಾಸಿಯಾಗಿ ಬಿಡುತ್ತಾರೆ. ಜೈನರಲ್ಲಿ ದೀಕ್ಷೆ ತೆಗೆದುಕೊಳ್ಳುವ ಸಮಾರಂಭವನ್ನು ಕೂಡ ಅದ್ಧೂರಿಯಾಗಿ ಮಾಡಲಾಗುತ್ತದೆ. ನಂತರ ನಗುತ್ತ, ಸಂತೋಷದಿಂದ, ಸನ್ಯಾಸತ್ವ ಸ್ವೀಕರಿಸಲು ಅನುವು ಮಾಡಿಕೊಡಲಾಗುತ್ತದೆ.
ದೇವರಲ್ಲಿ ಲೀನವಾಗುವುದು. ಮೋಕ್ಷ ಪಡೆಯುವುದೇ ಸಾಧ್ವಿಗಳ ಗುರಿಯಾಗಿರುತ್ತದೆ. ಧ್ಯಾನ, ದೇವರ ಪೂಜೆ, ಜಪ ತಪಗಳೇ ಸಾಧ್ವಿಗಳ ಜೀವನವಾಗಿರುತ್ತದೆ. ಪ್ರಸಿದ್ಧ ಸಾಧ್ವಿಗಳಲ್ಲಿ ಮೀರಾಬಾಯಿ ಕೂಡ ಒಬ್ಬಳು. ಈಕೆ ಶ್ರೀಕೃಷ್ಣನ ಭಜನೆಯಲ್ಲೇ, ಆರಾಧನೆಯಲ್ಲೇ ತನ್ನ ಜೀವನವನ್ನು ಕೊನೆಗೊಳಿಸಿದರು.
ಪತ್ನಿ ಇಂಥ ಕೆಲಸಗಳನ್ನು ಮಾಡಿದ್ರೆ, ಪತಿ ಜೀವನದಲ್ಲಿ ಸಫಲನಾಗುತ್ತಾನೆ..
ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?