Thursday, December 12, 2024

Latest Posts

ಮಕ್ಕಳ ಈ ಹುಚ್ಚಿಗೆ ಕಾರಣ ಯಾರು?

- Advertisement -

Health Tips: ಮೊದಲೆಲ್ಲ ಅಮ್ಮಂದಿರು ತಮ್ಮ ಮಕ್ಕಳು ಊಟ ಮಾಡುತ್ತಿಲ್ಲವೆಂದಲ್ಲಿ, ಕಥೆಗಳನ್ನು ಹೇಳಿ, ಅಥವಾ ಚಂದಮಾಮನನ್ನು ತೋರಿಸಿ, ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಮಕ್ಕಳು ಮೊಬೈಲ್, ಟಿವಿ ನೋಡದೇ, ಊಟ ಮಾಡೋದೇ ಇಲ್ಲ. ಅದರಲ್ಲೂ ಕಾರ್ಟೂನ್ ಇದ್ದರೆ, ಆ ಊಟ ತಿಂಡಿ, ನಿದ್ದೆ ಏನೂ ಬೇಡವೆಂಬಂತೆ ಇರುತ್ತಾರೆ. ಹಾಗಾದ್ರೆ ಮಕ್ಕಳ ಈ ಕಾರ್ಟೂನ್ ಹುಚ್ಚಿಗೆ ಕಾರಣರು ಯಾರು..? ವೈದ್ಯರು ಈ ಬಗ್ಗೆ ಏನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮಕ್ಕಳ ಕಾರ್ಟೂನ್ ಹುಚ್ಚಿಗೆ, ದೊಡ್ಡವರೇ ಕಾರಣ ಅಂತಾರೆ ವೈದ್ಯೆಯಾದ ಡಾ.ಎ.ಮೈತ್ರಿ. ಊಟ, ತಿಂಡಿ ಮಾಡುವಾಗ, ದೊಡ್ಡವರೇ ಕಾರ್ಟೂನ್ ಹಾಕಿ ಕೊಡುತ್ತಾರೆ. ಬಳಿಕ ಮಕ್ಕಳಿಗೆ ಕನ್ನಡಕ ಬಂದಾಗ, ಕಣ್ಣು ನೋವು ಬಂದಾಗ, ಟಿವಿ, ಮೊಬೈಲ್ ನೋಡುವುದನ್ನು ನಿಲ್ಲಿಸಲು ಹೇಳುತ್ತಾರೆ. ಆದರೆ ಅದಾಗಲೇ ಮಕ್ಕಳಿಗೆ ಟಿವಿ, ಮೊಬೈಲ್ ಅಭ್ಯಾಸವಾಗಿಬಿಟ್ಟಿರುತ್ತದೆ. ಕೊನೆಗೆ ಮಕ್ಕಳ ಮೇಲೆ ದೊಡ್ಡವರು ರೇಗಾಡುತ್ತಾರೆ. ಆದರೆ ಇಲ್ಲಿ ತಪ್ಪು ದೊಡ್ಡವರದ್ದೇ ಎನ್ನುತ್ತಾರೆ, ಡಾ.ಮೈತ್ರಿ.

ಇದಕ್ಕೆ ಪರಿಹಾರವೆಂದರೆ, ದೊಡ್ಡವರು ಮಕ್ಕಳಿಗೆ ಮೊಬೈಲ್ ಮತ್ತು ಟಿವಿ ನೋಡಲು ಬಿಡುವುದನ್ನು ಕಡಿಮೆ ಮಾಡಬೇಕು. ಅಂದ್ರೆ ಸ್ಕ್ರೀನ್ ಟೈಮ್ ಕಡಿಮೆ ಮಾಡಬೇಕು. ಅಲ್ಲದೇ, ದೊಡ್ಡವರು ಕೂಡ, ಟಿವಿ, ಮೊಬೈಲ್ ನೋಡುವುದನ್ನು ಕಡಿಮೆ ಮಾಡಬೇಕು. ಕೆಲವರ ಮನೆಯಲ್ಲಿ ಟಿವಿ ನೋಡಿಕೊಂಡೇ ಊಟ, ತಿಂಡಿ ಮಾಡುತ್ತಾರೆ. ಈ ಅಭ್ಯಾಸವೇ ಮಕ್ಕಳಿಗೆ ಮಾರಕವಾಗುತ್ತದೆ ಎನ್ನುತ್ತಾರೆ ವೈದ್ಯರು.

ಇನ್ನು ಮಕ್ಕಳಿಗೆ 1, 3 ಮತ್ತು 5 ವರ್ಷದೊಳಗೆ ಪೂರ್ತಿಯಾಗಿ ಕಣ್ಣಿನ ಟೆಸ್ಟ್ ಮಾಡಿಸಿರಬೇಕು. ಹೀಗೆ ಮಾಡುವುದರಿಂದ ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ಪೋಷಕರಿಗೆ ಅಂದಾಜು ಸಿಗುತ್ತದೆ. ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಯಲು ಈ ಮಾಹಿತಿ ನೋಡಿ..

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

‘ಕಣ್ಣಿನ ದೃಷ್ಟಿಯನ್ನೂ ಹೆಚ್ಚಿಸಿದೆ ಜೀನಿ’

ಬ್ರೈಡಲ್ ಲೆಹೆಂಗಾ ಖರೀದಿಸುವುದಿದ್ದರೆ, ಈ ಶಾಪ್‌ಗೆ ಬನ್ನಿ..

- Advertisement -

Latest Posts

Don't Miss