Monday, May 12, 2025

Latest Posts

Health Tips: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ದೂರವಾಗ್ತಿರೋದು ಯಾಕೆ? ಮನೋಶಾಸ್ತ್ರರು ಹೇಳೋದೇನು?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಬರೀ ಸೆಲೆಬ್ರೆಷನ್ ಆಗಿದೆ. ಇನ್‌ಸ್ಟಾಗ್ರಾಮಿಗೆ ಹಾಕಲು ರೀಲ್ಸ್, ಫೋಟೋಗಾಗಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆನೋ ಅನ್ನೋ ರೀತಿ ಇಂದಿನ ಕೆಲ ಕಪಲ್ಸ್ ತಿಳಿದಿದ್ದಾರೆ. ಮೂವಿ ರೇಂಜಿಗೆ ಫೋಟೋ ಶೂಟ್, ಮದುವೆ, ಸಂಂಗೀತ್, ರಿಸೆಪ್ಶನ್ ಎಲ್ಲ ಮಾಡಿಕೊಂಡು, ಹನಿಮೂನ್‌ಗಾಗಿ ಬೇರೆ ಬೇರೆ ರಾಜ್ಯ, ದೇಶ ಸುತ್ತಿ, ಅದರ ರೀಲ್ಸ್ ಮಾಡಿ ಅಪ್ಲೋಡು ಮಾಡೋದು. ಚಿಕ್ಕ ಪುಟ್ಟ ಜಗಳವಾಗಿಬಿಟ್ಟರೆ, ಡಿವೋರ್ಸ್ ತೆಗೆದುಕೊಳ್ಳುವುದು. ಇಷ್ಟೇ ವೈವಾಹಿಕ ಜೀವನದಂತಾಗಿದೆ.

ಇಂಥ ಕೇಸ್ ಹೆಚ್ಚಾಗುತ್ತಿರುವ ಬಗ್ಗೆ ಮನೋಶಾಸ್ತ್ರಜ್ಞೆ ಡಾ.ರೂಪ ರಾವ್ ಅವರು ವಿವರಿಸಿದ್ದಾಾರೆ. ಅವರ ಬಳಿಯೇ ಓರ್ವ ಯುವಕ ಬಂದಿದ್ದು, 20 ವರ್ಷಗಳಿಂದ ಅವರ ಅಪ್ಪ ಅಮ್ಮ ಜಗಳ ಮಾಡಿಕೊಂಡು ಬರುತ್ತಿದ್ದು, ಭಿನ್ನಾಭಿಪ್ರಾಯಗಳು ಹೆಚ್ಚಾಗಿದೆ ಎಂದು ಹೇಳಿದ್ದ. ಅಲ್ಲದೇ ಮಕ್ಕಳಿಗಾಗಿ ಮಾತ್ರ ಅವರಿಬ್ಬರು ಒಟ್ಟಿಗೆ ಇದ್ದರು. ಇದೀಗ ನಮಗೂ ಜವಾಬ್ದಾರಿ ಬಂದಿದ್ದು, ನಾವು ಅವರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ, ಅವರ ಜೀವನವನ್ನು ಸರಿಪಡಿಸಬೇಕಿದೆ ಎಂದಿದ್ದ. ಇದೇ ರೀತಿ ಸಾಕಷ್ಟು ಕೇಸ್‌ಗಳು ಮನೋವೈದ್ಯರ ಬಳಿ ಬರುತ್ತಲೇ ಇರುತ್ತದೆ.

ವೈದ್ಯರು ಹೇಳುವ ಪ್ರಕಾರ, ಕಪಲ್ಸ್ ಯಾವುದು ಮಾತುಕತೆಯಿಂದಲೇ ಆರಾಮವಾಗಿ ಪರಿಹರಿಸಬಹುದೋ, ಅಂಥ ಸಮಸ್ಯೆಯನ್ನು ಜಗಳದವರೆಗೆ ಕೊಂಡೊಯ್ದು, ಕೆಲವೊಮ್ಮೆ ಕ್ರೌರ್ಯದವರೆಗೂ ಕೊಂಡೊಯ್ದು ಮಾಡಬಾರದ್ದನ್ನು ಮಾಡಿಕೊಳ್ಳುತ್ತಾರೆ. ಕೇಳಿದರೆ, ಹೊಂದಾಣಿಕೆಯಾಾಗುತ್ತಿಲ್ಲ ಅನ್ನೋದೇ ಅವರ ಉತ್ತರವಾಗಿರುತ್ತದೆ. ಪರಸ್ಪರ ಈಗೋ ಇರುವುದೇ ಇದಕ್ಕೆ ಕಾರಣವಾಗಿರುತ್ತದೆ. ಈ ಈಗೋ ಬಿಟ್ಟರೆ, ಎಲ್ಲ ಸಮಸ್ಯೆಗೂ ಮುಕ್ತಿ ಸಿಗುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss