ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದನ್ನ ಹಲವರು ಹಲವು ರೀತಿ ಆಚರಿಸುತ್ತಾರೆ. ಆದ್ರೆ ಮದುವೆ, ಮುಂಜಿ, ಗೃಹಪ್ರವೇಶ, ಪೂಜೆ, ಇವೆಲ್ಲ ಸಂದರ್ಭದಲ್ಲೂ, ಪತಿ ಪತ್ನಿ ಒಟ್ಟಿಗೆ ಕೂತು ಪೂಜೆ ನೆರವೇರಿಸುವುದು ಮಾತ್ರ, ಎಲ್ಲ ಹಿಂದೂಗಳು ಪಾಲಿಸುವ ಪದ್ಧತಿಯಾಗಿದೆ. ಹಾಗಾದ್ರೆ ಧಾರ್ಮಿಕ ಪದ್ಧತಿ ಆಚರಣೆ ವೇಳೆ ಪತಿ- ಪತ್ನಿ ಒಟ್ಟಿಗೆ ಕೂರೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ವಿವಾಹಕ್ಕಿಂತ ಮುಂಚೆ ನೀವು ದೇವರ ದರ್ಶನ ಮಾಡಲು ಹೋದರೆ, ಅಥವಾ ಪೂಜೆ ಮಾಡಿದರೆ, ನಿಮಗೆ ಅದರ ಪೂರ್ಣ ಫಲ ಸಿಗುತ್ತದೆ. ಆದ್ರೆ ವಿವಾಹವಾದ ಮೇಲೂ ನೀವು ಒಬ್ಬರೆ ದೇವರ ದರ್ಶನಕ್ಕೆ ಹೋದರೆ, ಅಥವಾ ಪೂಜೆ ಮಾಡಿದರೆ, ಅದರ ಫಲ ನಿಮಗೆ ಲಭಿಸುವುದಿಲ್ಲ. ಯಾಕಂದ್ರೆ ನೀವು ಎರಡು ಜೀವ ಒಂದು ಪ್ರಾಣವಾಗಿರುತ್ತೀರಿ. ಹಾಗಾಗಿ ಇಬ್ಬರೂ ಸೇರಿ, ಪೂಜೆ ಮಾಡಿದಾಗಲೇ, ನಿಮಗೂ ನಿಮ್ಮ ಮನೆಯವರಿಗೂ ಒಳ್ಳೆಯದಾಗುತ್ತದೆ.
ಹಾಗಾಗಿಯೇ ವಿವಾಹದ ವೇಳೆ, ಪತಿ ಪತ್ನಿ ಕುಳಿತು ಕನ್ಯಾದಾನ, ಮಾಡಬೇಕು. ವರನ ಕಡೆಯಿಂದಲೂ ಪತಿ- ಪತ್ನಿ ಇಬ್ಬರೂ ಕುಳಿತು ವಿವಾಹ ಪದ್ಧತಿ ನೆರವೇರಿಸಿ ಕೊಡಬೇಕು. ವರನಿಗೆ ಅಥವಾ ವಧುವಿಗೆ ತಂದೆ ತಾಯಿ ಇಲ್ಲದಿದ್ದಲ್ಲಿ, ಚಿಕ್ಕಪ್ಪ ಚಿಕ್ಕಮ್ಮ ಅಥವಾ ದೊಡ್ಡಮ್ಮ ದೊಡ್ಡಪ್ಪ ಈ ಪದ್ಧತಿ ಮಾಡಬೇಕು ಅನ್ನೋ ನಿಯಮವಿದೆ. ಆಗಲೇ ಆ ಮದುವೆ ಪರಿಪೂರ್ಣವಾಗುತ್ತದೆ.
ಹಾಗಾದ್ರೆ ಯಾಕೆ ಪತಿ- ಪತ್ನಿ ಇಬ್ಬರೂ ಕುಳಿತು ಪೂಜೆ ಮಾಡಬೇಕು ಅನ್ನೋದು ಯಾಕೆ ಅಂದ್ರೆ, ಮದುವೆ ವೇಳೆ ಸಪ್ತಪದಿ ತುಳಿಯಲಾಗತ್ತೆ. ಈ ವೇಳೆ ಕೆಲ ಮಾತುಗಳನ್ನ ಕೊಡಲಾಗತ್ತೆ. 7 ಕೆಲಸಗಳನ್ನ ಪತಿ ಪತ್ನಿ ತಮ್ಮ ಕೊನೆಗಾಲದವರೆಗೂ ನಿಭಾಯಿಸುತ್ತಾರೆಂದು ಒಬ್ಬರಿಗೊಬ್ಬರು ಮಾತು ಕೊಡುತ್ತಾರೆ. ಆ 7 ಕೆಲಸಗಳಲ್ಲಿ ಧಾರ್ಮಿಕ ಕಾರ್ಯಗಳು ಕೂಡ ಒಂದು.
ಹಾಗಾಗಿ ಪೂಜೆ ಮಾಡುವ ವೇಳೆ, ದೇವರ ದರ್ಶನಕ್ಕೆ ಹೋಗುವ ವೇಳೆ, ಪತಿ- ಪತ್ನಿ ಇಬ್ಬರೂ ಇರಬೇಕು. ಇಲ್ಲವಾದಲ್ಲಿ, ಆ ಧಾರ್ಮಿಕ ಕಾರ್ಯದ ಪುಣ್ಯಫಲ ಅವರಿಗೆ ದೊರಕುವುದಿಲ್ಲ. ಆದರೆ ಇಬ್ಬರೂ ಸೇರಿ ಧಾರ್ಮಿಕ ಕಾರ್ಯ ಮಾಡಿದ್ರೆ, ಮನೆಯಲ್ಲಿ ನೆಮ್ಮದಿ ಇರತ್ತೆ. ಪತಿ- ಪತ್ನಿ ಇಬ್ಬರ ಮಧ್ಯೆಯೂ ಪ್ರೀತಿ, ಕಾಳಜಿ ಇರುತ್ತದೆ. ಅವರ ಮಕ್ಕಳಿಗೂ ಒಳ್ಳೆಯದಾಗುತ್ತದೆ ಅನ್ನೋ ನಂಬಿಕೆ ಇದೆ.
ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1