Monday, December 23, 2024

Latest Posts

ಪುಣ್ಯಕ್ಷೇತ್ರವಾದ ಗಯಾದಲ್ಲಿ ಜನ ಪಿತೃಗಳ ಪಿಂಡಪ್ರಧಾನ ಮಾಡುವುದೇಕೆ..? ಭಾಗ-1

- Advertisement -

Spiritual News: ಕರ್ನಾಟಕದಲ್ಲಿ ಪಿತೃಗಳ ಶ್ರಾದ್ಧಕಾರ್ಯ ಮಾಡುವುದಿದ್ದರೆ, ಹಲವರು ಗೋಕರ್ಣಕ್ಕೆ ಹೋಗುತ್ತಾರೆ. ಅದೇ ರೀತಿ ಉತ್ತರಭಾರತೀಯರು ತಮ್ಮ ಪಿತೃಗಳ ಶ್ರಾದ್ಧ ಕಾರ್ಯ ಮಾಡಲು, ಗಯಾಕ್ಕೆ ಹೋಗುತ್ತಾರೆ. ಹಾಗಾದ್ರೆ ಗಯಾದಲ್ಲೇ ಯಾಕೆ ಜನ ಪಿತೃಗಳ ಪಿಂಡಪ್ರಧಾನ ಮಾಡುತ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಇಂದು ಗಯಾ ಎನ್ನುವುದು ಒಂದು ಪವಿತ್ರ ಸ್ಥಳವಾಗಿದೆ. ಆದರೆ ಗಯಾ ಎಂದರೆ, ಓರ್ವ ರಾಜ. ಈತ ಒಮ್ಮೆ ಬೇಟೆಯಾಡಲು ಕಾಡಿಗೆ ಹೋದಾಗ, ಅಲ್ಲಿ ಒಂದು ಜಿಂಕೆಯನ್ನು ಬೇಟೆಯಾಡಬೇಕೆಂದುಕೊಂಡ. ಆದರೆ ಅವನು ಬಿಟ್ಟ ಬಾಣ ಓರ್ವ ಬ್ರಾಹ್ಮಣನ ಜೀವವನ್ನು ತೆಗೆಯಿತು. ಆ ಬ್ರಾಹ್ಮಣ ಸಾಯುವ ಹೊತ್ತಿಗೆ, ಬೇಟೆಯನ್ನು ನೋಡಲು ಗಯಾ ರಾಜ, ಆ ಸ್ಥಳಕ್ಕೆ ಹೋಗುತ್ತಾನೆ. ತನಗೆ ಬಾಣ ಬಿಟ್ಟು ಈ ರಾಜನೆಂದು ಅವನಿಗೆ ಗೊತ್ತಾದಾಗ, ಆ ಬ್ರಾಹ್ಮಣ, ನೀನೋರ್ವ ಕ್ರೂರ ರಾಜ. ಜನರ ಜೀವ ಉಳಿಸಬೇಕಾದ ನೀನು, ನನ್ನ ಜೀವ ತೆಗೆದಿದ್ದೀಯ. ನೀನು ಈ ಕ್ಷಣ ರಾಕ್ಷಸನಾಗು ಎಂದು ಶಾಪ ನೀಡುತ್ತಾನೆ.

ಬ್ರಾಹ್ಮಣನ ಶಾಪ ತಗುಲಿ ರಾಜ, ರಾಕ್ಷಸನಾಗಿ ಪರಿವರ್ತನೆಯಾಗುತ್ತಾನೆ. ಮತ್ತು ಗಯಾಸುರನೆನ್ನಿಸಿಕೊಳ್ಳುತ್ತಾನೆ. ಆದರೆ ಅವನು ನೋಡಲಷ್ಟೇ ರಾಕ್ಷಸನಾಗಿರುತ್ತಾನೆ. ಅವನಲ್ಲಿ ರಾಕ್ಷಸ ಪ್ರವೃತ್ತಿ ಇರುವುದಿಲ್ಲ. ಏಕೆಂದರೆ, ಅವನು ವಿಷ್ಣುವಿನ ಪರಮ ಭಕ್ತನಾಗಿರುತ್ತಾನೆ. ರಾಜನಿಂದ ರಾಕ್ಷಸನಾದಾಗ, ಜನರಿಗೆ ಮುಖ ತೋರಿಸಲು ಆಗದೇ, ಗಯಾ ಕಾಡಿಗೆ ಹೊರಟು ಹೋಗುತ್ತಾನೆ. ಮತ್ತು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ.

ಬ್ರಹ್ಮ ನಿನಗೇನು ವರ ಬೇಕು ಎಂದು ಕೇಳಿದಾಗ, ನನ್ನನ್ನು ಯಾರು ನೋಡುತ್ತಾರೋ, ಅವರ ಪಾಪಗಳೆಲ್ಲವೂ ಕಳೆದುಹೋಗಲಿ ಎಂದು ವರ ಬೇಡುತ್ತಾನೆ. ಬ್ರಹ್ಮ ತಥಾಸ್ತುವೆಂದು ವರ ನೀಡುತ್ತಾನೆ. ಇದಾದ ಬಳಿಕ ಹಲವು ರಾಕ್ಷಸರು, ಪಾಪಗಳನ್ನು ಮಾಡಿ, ಕೊನೆಗೆ ಗಯಾಸುರನ ದರ್ಶನ ಮಾಡುತ್ತಿದ್ದರು. ಹೀಗೆ ಅವರ ಪಾಪ ಕಳೆದು ಹೋಗುತ್ತಿತ್ತು.

ಆದರೆ ಪಾಪ ಕಳೆದು, ರಾಕ್ಷಸರೆಲ್ಲ ಸ್ವರ್ಗಕ್ಕೆ ಬರಲಾರಂಭಿಸಿದರು. ಇದರಿಂದ ದೇವತೆಗಳಿಗೆ ತೊಂದರೆಯಾಗುತ್ತಿತ್ತು. ದೇವತೆಗಳೆಲ್ಲ ಸೇರಿ, ವಿಷ್ಣುವಿನ ಬಳಿ ಹೋಗಿ, ತಮ್ಮ ತೊಂದರೆ ಹೇಳಿಕೊಂಡರು. ಗಯಾಸುರನ ವಧೆ ಮಾಡುವಂತೆ ಹೇಳಿದರು. ಹಾಗಾದರೆ ಶ್ರೀವಿಷ್ಣು ಯಾವ ರೀತಿ ಗಯಾಸುರನ ವಧೆ ಮಾಡುತ್ತಾನೆ. ಗಯಾಸುರನ ವಧೆಗೂ, ಗಯಾ ಕ್ಷೇತ್ರಕ್ಕೂ ಇರುವ ಸಂಬಂಧವೇನು ಅಂತಾ ಮುಂದಿನ ಭಾಗದಲ್ಲಿ ತಿಳಿಯೋಣ.

ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಮಹಾತ್ಮೆ..

ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಬಂದು ನೆಲೆಸಿದ್ದು ಹೇಗೆ..?

ಸೂರ್ಯನಾರಾಯಣ ದೇವಸ್ಥಾನದ ಮಣ್ಣಿನ ಹರಕೆಯ ಪ್ರಾಮುಖ್ಯತೆ ಏನು..?

- Advertisement -

Latest Posts

Don't Miss