Spiritual News: ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು, ಗಯಾಸುರನ ವಧೆ ಮಾಡುವಂತೆ ದೇವತೆಗಳು ಶ್ರೀವಿಷ್ಣುವಿನಲ್ಲಿ ಕೇಳಿಕೊಂಡ ಬಗ್ಗೆ ಹೇಳಿದ್ದೆವು. ಇದೀಗ, ವಿಷ್ಣು ಹೇಗೆ ಗಯಾಸುರನ ವಧೆ ಮಾಡಿದ. ಗಯಾ ಕ್ಷೇತ್ರದಲ್ಲಿ ಯಾಕೆ ಪಿಂಡ ಪ್ರಧಾನ ಮಾಡುತ್ತಾರೆಂಬ ಬಗ್ಗೆ ತಿಳಿಯೋಣ ಬನ್ನಿ..
ಗಯಾಸುರ ವಿಷ್ಣುವಿನ ಭಕ್ತನಾದ ಕಾರಣ, ವಿಷ್ಣು ಗಯಾಸುರನ ಎದುರಿಗೆ ಪ್ರತ್ಯಕ್ಷನಾದ. ಗಯಾಸುರನಿಗೆ ಆನಂದವಾಗಿ, ತನ್ನಿಂದೇನಾಗಬೇಕು ಹೇಳಿ ಎಂದು ಕೇಳಿದ. ಅದಕ್ಕೆ ವಿಷ್ಣು ನನಗೆ ಯಜ್ಞ ಮಾಡಲು ಪ್ರಾಶಸ್ತ್ಯವಾದ ಜಾಗ ಬೇಕಾಗಿದೆ. ಆದರೆ ಎಲ್ಲಿ ಹೋದರೂ, ಉತ್ತಮ ಜಾಗ ಸಿಗುತ್ತಿಲ್ಲವೆಂದು ಹೇಳಿದ. ಅದಕ್ಕೆ ಗಯಾಸುರ, ನನ್ನನ್ನು ನೋಡಿದ್ದಲ್ಲಿ, ಅವರ ಪಾಪಗಳೆಲ್ಲೂ ನಾಶವಾಗುತ್ತದೆ. ನನ್ನಂಥ ಪುಣ್ಯವಂತನಿಗಿಂತ ಬೇರೆ ಜಾಗವಿದೆಯೇ..? ನೀವು ನನ್ನ ಮೇಲೆಯೇ ಯಜ್ಞ ಮಾಡಿ ಎಂದು ಹೇಳುತ್ತಾನೆ. ಅದಕ್ಕೆ ವಿಷ್ಣು, ಆಗಲಿ ಎಂದು ಹೇಳಿ. ಗಯಾನ ದೇಹದ ಮೇಲೆ ಯಜ್ಞ ಮಾಡುತ್ತಾನೆ. ಆದರೂ ಗಯಾ ಸಾಯುವುದಿಲ್ಲ.
ಆಗ ಶ್ರೀವಿಷ್ಣು, ನಾನೇನು ಮಾಡಿದರೂ, ನೀನು ಸಾಯುತ್ತಿಲ್ಲ. ಆದರೆ, ನಿನ್ನ ದರ್ಶನ ಪಡೆದ ರಾಕ್ಷಸರು ಸ್ವರ್ಗಕ್ಕೆ ಬರುತ್ತಿದ್ದಾರೆ. ಇದರಿಂದ ದೇವತೆಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳುತ್ತಾನೆ. ಅದಕ್ಕೆ ಗಯಾಸುರ, ನನಗೆ ಎರಡು ವರಗಳನ್ನು ನೀಡಿದರೆ, ನಾನಾಗಿಯೇ ಪ್ರಾಣ ತ್ಯಾಗ ಮಾಡುತ್ತೇನೆಂದು ಹೇಳುತ್ತಾನೆ.
ಆಗ ವಿಷ್ಣು, ಆಗಲಿ. ನಿನ್ನ ವರವೇನೆಂದು ಕೇಳಿಕೋ ಎಂದು ಹೇಳುತ್ತಾನೆ. ಆಗ ಗಯಾಸುರ, ಈ ಕ್ಷೇತ್ರ ಗಯಾ ಎಂದು ಪ್ರಸಿದ್ಧವಾಗಬೇಕು. ಜನ ಈ ಸ್ಥಳಕ್ಕೆ ಬಂದು, ನನ್ನ ದರ್ಶನ ಮಾಡಿ, ತಮ್ಮ ಪೂರ್ವಜರಿಗೆ ಪಿಂಡ ಪ್ರಧಾನ ಮಾಡಬೇಕು. ಇಲ್ಲಿ ಬಂದು ಪಿಂಡ ಪ್ರಧಾನ ಮಾಡಲಾಗದಿದ್ದಲ್ಲಿ, ಇಲ್ಲಿ ಬಂದು, ನಮ್ಮ ಪೂರ್ವಜರಿಗೆ ಮುಕ್ತಿ ಕೊಡೆಂದು ಬೇಡಿಕೊಳ್ಳಬೇಕು.ಆಗ ಮಾತ್ರ ಅವರ ಪೂರ್ವಜನ ಆತ್ಮಕ್ಕೆ ಮುಕ್ತಿ ಸಿಗಬೇಕೆಂದು ಹೇಳುತ್ತಾನೆ. ವಿಷ್ಣು ವರ ಕೊಡುತ್ತಾನೆ. ಗಯಾ ಪ್ರಾಣ ತ್ಯಾಗ ಮಾಡುತ್ತಾನೆ. ಇದೇ ಕಾರಣಕ್ಕೆ ಗಯಾಗೆ ಬಂದ ಜನ, ತಮ್ಮ ಪೂರ್ವಜರ ಆತ್ಮಕ್ಕೆ ಮೋಕ್ಷ ಸಿಗಬೇಕೆಂದು, ಗಯಾಗೆ ಬಂದು ಪಿಂಡ ಪ್ರಧಾನ ಮಾಡುತ್ತಾರೆ.