Spiritual: ಹಿಂದೂಗಳಲ್ಲಿ ಆಷಾಢ ಮಾಸಕ್ಕೆ ತುಂಬಾ ಮಹತ್ವವಿದೆ. ಆಷಾಢ ಶುಕ್ರವಾರ, ಆಷಾಢ ಸೋಮವಾರದ ದಿನ ಹೆಣ್ಣು ಮಕ್ಕಳು ವೃತ ಮಾಡಿ, ಒಳ್ಳೆ ಗಂಡ ಸಿಗಲಿ. ಗಂಡನ ಆಯಸ್ಸು ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗಾಗಿ ಆಷಾಢ ಮಾಸದ ಶುಕ್ರವಾರದಂದು ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಈ ಮಾಸದಲ್ಲಿ ಶುಭ ಕಾರ್ಯ ಮಾಡುವುದು ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಯಾಕಂದ್ರೆ ಈ ಮಾಸ ದೇವಿಯ ಪೂಜೆಗಾಗಿ ಮೀಸಲಿರುವ ಮಾಸ. ಇನ್ನು ಪತಿ- ಪತ್ನಿ ಕೂಡ ಒಟ್ಟಿಗೆ ಇರಬಾರದು ಅನ್ನೋ ನಿಯಮಮವಿದೆ. ಹಾಗಾದ್ರೆ ಯಾಕೆ ಈ ಪದ್ಧತಿ ಬಂದಿದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕೆಲವು ಕಡೆ ನವವಿವಾಹಿತರು ಆಷಾಢ ಮಾಸದಲ್ಲಿ ಒಟ್ಟಿಗೆ ಇರಬಾರದು ಅನ್ನೋ ಪದ್ಧತಿ ಇದೆ. ಹಾಗಾಗಿ ವಿವಾಹಿತೆಯ ಅಣ್ಣ- ತಮ್ಮ ಅಥವಾ ಅಪ್ಪ ಬಂದು, ಆಕೆಯನ್ನು ತವರು ಮನೆಗೆ ಕರೆದೊಯ್ಯುತ್ತಾರೆ. ಆಷಾಢ ಮುಗಿದು ಶ್ರಾವಣ ಶುರುವಾದಾಗ, ಪತಿ ಪತ್ನಿ ಮನೆಗೆ ಬಂದು ಆಕೆಯನ್ನ ಕರೆದೊಯ್ಯುತ್ತಾನೆ. ಕೆಲವು ಕಡೆ ಆಷಾಢದಲ್ಲಿ ಪತಿ ಪತ್ನಿ ಒಟ್ಟಿಗೆ ಇರಬಾರದು ಅಂತಾ ಇದೆ. ಇನ್ನು ಕೆಲವು ಕಡೆ ಆಷಾಢ ಮಾಸದಲ್ಲಿ ಅತ್ತೆ- ಸೊಸೆ ಜೊತೆಗಿದ್ದರೆ, ಜೀವನಪೂರ್ತಿ ಅವರ ಸಂಬಂಧ ಸರಿಯಾಗಿ ಇರುವುದಿಲ್ಲವೆನ್ನುತ್ತಾರೆ.
ಆದರೆ ಈ ಪದ್ಧತಿಯ ಹಿಂದೆ ವೈಜ್ಞಾನಿಕ ಕಾರಣವಿದೆ. ಆಷಾಢ ಮಾಸದಲ್ಲಿ ಪತಿ-ಪತ್ನಿ ಒಟ್ಟಿಗೆ ಸೇರಿದರೆ, ಚೈತ್ರ ಮಾಸದಲ್ಲಿ ಮಗುವಿಗೆ ಜನ್ಮ ನೀಡಬೇಕಾಗುತ್ತದೆ. ಚೈತ್ರ ಮಾಸ ಬೇಸಿಗೆಯಲ್ಲಿ ಬರುವುದರಿಂದ, ಈ ಸಮಯದಲ್ಲಿ ಬಿಸಿಲಿನ ಶಾಖ ಹೆಚ್ಚು ಇರುವುದರಿಂದ, ತಾಯಿ- ಮಗು ಇಬ್ಬರ ಆರೋಗ್ಯಕ್ಕೂ ಸಮಸ್ಯೆ ಬರುತ್ತದೆ. ಈ ಕಾರಣಕ್ಕೆ ಆಷಾಢ ಮಾಸದಲ್ಲಿ ನವವಿವಾಹಿತೆ ಪತಿಯ ಜೊತೆ ಇರಬಾರದು ಅಂತಾ ಪದ್ಧತಿ ಮಾಡಲಾಗಿದೆ.

