Tuesday, August 5, 2025

Latest Posts

ಅತಿಯಾದ Exercise ಒಳ್ಳೇದಲ್ಲ ಯಾಕೆ!?

- Advertisement -

Health Tips: ಹೃದಯಾಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಟಿಪ್ಸ್‌ನ್ನು ವೈದ್ಯರು ಹೇಳಿದ್ದರು. ಇದೀಗ ಹೃದಯಾಘಾತ ಬಾರದಿರಲು ಏನೇನು ಮಾಡಬೇಕು..? ಹೆಚ್ಚು ವ್ಯಾಯಾಮ ಮಾಡಿದರೆ ಹಾರ್ಟ್ ಅಟ್ಯಾಕ್ ಬರತ್ತಾ..? ಹೀಗೆ ಹಲವು ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಿದ್ದಾರೆ.

ಹಾರ್ಟ್ ಅಟ್ಯಾಕ್‌ ಬರಬಾರದು ಅಂದ್ರೆ, ವ್ಯಾಯಾಮ, ಯೋಗ ಮಾಡುವುದು ತುಂಬಾ ಮುಖ್ಯ. ಅಲ್ಲದೇ, ಪರಿಸರ ಮಾಲಿನ್ಯದಿಂದ ಆದಷ್ಟು ದೂರವಿರುವುದು, ಹೃದಯದ ಆರೋಗ್ಯಕ್ಕೆ ಉತ್ತಮ. ಅಲ್ಲದೇ, ಬಿಪಿ, ಶುಗರ್‌, ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡಬೇಕು. 30ರಿಂದ 35 ವರ್ಷ ದಾಟಿದ ಬಳಿಕ, ಒಮ್ಮೆ ವೈದ್ಯರ ಬಳಿ ಹೋಗಿ, ಇಡೀ ದೇಹದ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ.

ವೈದ್ಯರು ಹೇಳುವ ಪ್ರಕಾರ, ನಾನು ವೆಜಿಟೇರಿಯನ್, ನಾನು ನಾನ್‌ ವೆಜ್ ತಿನ್ನುವುದಿಲ್ಲ. ನಾನು ಪ್ರತಿದಿನ ಆರೋಗ್ಯಕರವಾದ ಆಹಾರ ತಿನ್ನುತ್ತೇನೆ. ಯೋಗ ಮಾಡುತ್ತೇನೆ. ನನಗೆ ಯಾವ ರೋಗ ಬರಲೂ ಸಾಧ್ಯವಿಲ್ಲ ಅಂತಾ ನೀವು ಹೇಳಲು ಸಾಧ್ಯವಿಲ್ಲ. ಹಾಗಾಗಿ 35 ವರ್ಷ ದಾಟಿದ ಬಳಿಕ, ವೈದ್ಯರ ಬಳಿ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

ಇನ್ನು ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೃದಯಾಘಾತವಾಗಿದ್ದರೆ, ಗ್ಯಾಂಗ್ಲಿನ್, ಸ್ಟೋಕ್‌ನಂಥ ಸಮಸ್ಯೆ ಅನುಭವಿಸಿದ್ದರೆ, ಅಂಥವರು ಆದಷ್ಟು ಬೇಗ, ಹೆಲ್ತ್ ಚೆಕಪ್ ಮಾಡಿಸಿಕೊಳ್ಳಬೇಕು. ಏಕೆಂದರೆ, ಅನುವಂಶಿಕವಾಗಿ, ಅವರಿಗೂ ಈ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇನ್ನು ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಿ, ಉತ್ತಮ ಆಹಾರ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ವ್ಯಾಯಾಮ ಮಾಡುವಾಗ, ಹೇಗೆ ಮಾಡಬೇಕು ಅನ್ನುವುದನ್ನು ತಿಳಿದು ಮಾಡಬೇಕು. ಮತ್ತು ಮಿತವಾಗಿ ವ್ಯಾಯಾಮ ಮಾಡಬೇಕು. ಈ ಬಗ್‌ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಈ ವೀಡಿಯೋ ನೋಡಿ..

ಅರಿಶಿನ ಬಳಸುವುದರಿಂದ ಆಗುವ ಆರೋಗ್ಯಕಾರಿ ಲಾಭಗಳೇನು ಗೊತ್ತಾ..?

ಸಕ್ಕರೆ ಖಾಯಿಲೆ ಇದ್ದವರು ಈ 6 ಆಹಾರಗಳನ್ನು ಎಂದಿಗೂ ಸೇವಿಸಬಾರದು..

ಜೇನುಹುಳು ಕಚ್ಚಿದರೆ ಏನು ಮಾಡಬೇಕು..?

- Advertisement -

Latest Posts

Don't Miss