Health Tips: ಮದ್ಯ ಸೇವನೆಯಿಂದ ನಮಗೆ ಏನೆಲ್ಲಾ ತೊಂದರೆಯಾಗುತ್ತದೆ ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಮದ್ಯ ಸೇವನೆಯಿಂದ ಆ ವೇಳೆ ಮಾತ್ರ ನಿಮಗೆ ಕೊಂಚ ಸಮಯದ ಖುಷಿ ಸಿಗಬಹುದು. ಆದರೆ ಅದರಿಂದ ಮಾನಸಿಕ ಖಾಯಿಲೆಗೆ ನೀವು ಒಳಾಗಾಗುತ್ತೀರಿ. ಹಾಗಾದ್ರೆ .ಯಾಕೆ ಮದ್ಯ ಸೇವನೆ ಚಟವಾಗಿ ಬದಲಾಗರಬಾರದು ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ ಪ್ರತಿದಿನ 30 ಎಂಎಲ್‌ಗಿಂತ ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವಿಸಿದರೆ, ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳೇನು ಆಗುವುದಿಲ್ಲ. ರೆಡ್ ವೈನ್ ನಮ್ಮ ದೇಹಕ್ಕೆ ಒಳ್ಳೆಯದು. ಆದರೆ 30 ಎಂಎಲ್‌ಗಿಂತ ಹೆಚ್ಚು ಮದ್ಯ ಸೇವನೆ ಮಾಡಿದರೆ, ಅದು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇದನ್ನೇ ಚಟ ಅಂತಾ ಹೇಳೋದು. ಅಗತ್ಯಕ್ಕೂ ಹೆಚ್ಚು ಮದ್ಯ ಸೇವನೆ ಮಾಡುವುದೇ, ಚಟವಾಗಿ ಬದಲಾಗೋದು.
ಇನ್ನು ಹೀಗೆ ಮದ್ಯ ಸೇವನೆ ಚಟವಾಗಿ ಬದಲಾದಾಗ, ಮನುಷ್ಯ ಅಗತ್ಯಕ್ಕಿಂತ ಹೆಚ್ಚು ಮದ್ಯ ಸೇವನೆ ಮಾಡುತ್ತಾನೆ. ಅಗತ್ಯಕ್ಕಿಂತ ಹೆಚ್ಚು ಮದ್ಯ ನಮ್ಮ ದೇಹ ಸೇರಿದಾಗ, ಅದರಿಂದಾಗುವ ದುಷ್ಪರಿಣಾಮಗಳು ಕೂಡ ಹೆಚ್ಚಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..