ಚಾಟ್ಸ್ ಮಾಡುವಾಗ, ರೊಟ್ಟಿ ಊಟ ಮಾಡುವಾಗ ಹಸಿ ಈರುಳ್ಳಿ ಇದ್ದರೇನೇ ಆ ತಿಂಡಿಯ ಟೇಸ್ಟ್ ಹೆಚ್ಚೋದು. ಅಲ್ಲದೇ ಹಸಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದರಲ್ಲೂ ನೀವು ಶೀತವಾದಾಗ, ಈರುಳ್ಳಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾಕೆ ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನಿಮಗೆ ಶೀತ-ಕೆಮ್ಮು ಬಂದಾಗ ಅಥವಾ ಜ್ವರ ಬಂದಾಗ, ಊಟದೊಂದಿಗೆ ಹಸಿ ಈರುಳ್ಳಿ ಸೇವಿಸಿ. ಇದರಿಂದ ಜ್ವರ ಕಂಟ್ರೋಲಿಗೆ ಬರುತ್ತದೆ. ಇದರ ಬದಲು ನೀರು ಈರುಳ್ಳಿ ರಸ ತೆಗೆದು, ಅದಕ್ಕೆ ನಿಂಬೆರಸ ಮತ್ತು ಜೆನುತುಪ್ಪ ಹಾಕಿಟ್ಟು, ದಿನಕ್ಕೆ ನಾಲ್ಕು ಬಾರಿ ಕೊಂಚ ಕೊಂಚ ಸೇವಿಸಿದರೂ, ಜ್ವರ ಕಡಿಮೆಯಾಗುತ್ತದೆ. ನಾಲ್ಕು ಸ್ಪೂನ್ ಈ ಔಷಧಿ ಮಾಡಿ ಸೇವಿಸಿದರೂ ಸಾಕು.
ನೀರುಳ್ಳಿ ಬಳಸಿ ನೀರು ಸ್ಟೀಮ್ ಕೂಡ ತೆಗೆದುಕೊಳ್ಳಬಹುದು. ಜ್ವರ ಬಂದಾಗ, ನೀರಿಗೆ ವಿಕ್ಸ್ ಹಾಕಿ ಸ್ಟೀಮ್ ತೆಗೆದುಕೊಳ್ಳುತ್ತಾರೆ. ಅದರ ಬದಲು ನೀವು ಈರುಳ್ಳಿಯನ್ನ ನೀರಿಗೆ ಸೇರಿಸಿ ಕುದಿಸಿ, ಅದರ ಸ್ಟೀಮ್ ಕೂಡ ತೆಗೆದುಕೊಳ್ಳಬಹುದು. ಅಥವಾ ಈರುಳ್ಳಿ ಜೊತೆ ಬೆಲ್ಲ ಸೇರಿಸಿ, ಚಪಾತಿ, ರೊಟ್ಟಿ ಜೊತೆ ಸೇವಿಸಿ. ಅಥವಾ ನೀವು ತೆಂಗಿನ ತುರಿ, ಈರುಳ್ಳಿ, ಅವಲಕ್ಕಿ ಸೇರಿಸಿ, ರುಚಿ ಮಾಡಿಕೊಂಡು ಕೂಡ, ಈರುಳ್ಳಿ ಸೇವನೆ ಮಾಡಬಹುದು. ಈರುಳ್ಳಿಯಲ್ಲಿ ದೇಹಕ್ಕೆ ರೋಗನಿರೋಧಕ ಶಕ್ತಿ ಕೊಡುವ ಗುಣವಿದೆ. ಹಾಗಾಗಿ ಹಳ್ಳಿ ಕಡೆ ಜನ ಹಸಿ ಈರುಳ್ಳಿಯೊಂದಿಗೆ ಊಟ ಮಾಡೋದು. ಹಾಗಾಗಿಯೇ ಅವರು ಅಷ್ಟು ಗಟ್ಟಿಮುಟ್ಟಾಗಿರೋದು.
ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 1
ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 2