Friday, November 22, 2024

Latest Posts

ಹಬ್ಬ, ಶುಭಕಾರ್ಯದ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸದಿರಲು ಕಾರಣವೇನು..?

- Advertisement -

ನಾವು ಪಾರ್ಟಿ ಫಂಕ್ಷನ್‌ಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಿಯೇ, ಖಾದ್ಯಗಳನ್ನ ತಯಾರು ಮಾಡುತ್ತೇವೆ. ಆದ್ರೆ ಹಬ್ಬ, ಪೂಜೆ, ಮದುವೆ, ಮುಂಜಿ ಕಾರ್ಯಕ್ರಮಗಳಲ್ಲಿ ಹಲವರು, ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಹಾಗಾದ್ರೆ ಯಾಕೆ ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸನಾತನ ಧರ್ಮದ ಪ್ರಕಾರ, ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸುವಂತಿಲ್ಲ. ಮತ್ತು ದೇವರಿಗೆ ಈರುಳ್ಳಿ, ಬೆಳ್ಳುಳ್ಳಿ ಹಾಕಿ ತಯಾರಿಸಿದ ಖಾದ್ಯವನ್ನು ದೇವರಿಗೆ ನೈವೇದ್ಯವನ್ನಾಗಿ ಇಡುವಂತಿಲ್ಲ. ಯಾಕಂದ್ರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಅಂದ್ರೆ ರಾಹು ಕೇತು ಅಂತ ಅರ್ಥ. ಸಮುದ್ರ ಮಂಥನದ ಸಮಯದಲ್ಲಿ ದಾನವರು ಮತ್ತು ದೇವತೆಗಳು ಸೇರಿ, ಅಮೃತಕ್ಕಾಗಿ ಜಗಳವಾಡತೊಡಗಿದರು.

ಆಗ ಮೋಹಿನಿಯ ವೇಷ ಧರಿಸಿ ಬಂದ ಶ್ರೀ ವಿಷ್ಣು, ಮೊದಲು ದೇವತೆಗಳಿಗೆ ಅಮೃತವನ್ನು ನೀಡಿದ. ಈ ಬಗ್ಗೆ ಸಂಶಯ ಬಂದ ದಾನವನೋರ್ವ, ದೇವತೆಯ ವೇಷ ಧರಿಸಿ ಬಂದು, ದೇವತೆಗಳ ಮಧ್ಯೆ ಕುಳಿತುಕೊಂಡ. ಮೋಹಿನಿ ಆ ದಾನವನಿಗೆ ಅಮೃತ ನೀಡಿದ ಬಳಿಕ, ಅವನು ದಾನವನೆಂದು ಗೊತ್ತಾಯಿತು. ಆಗ ಮೋಹಿನಿ ರೂಪದಲ್ಲಿದ್ದ ವಿಷ್ಣು ತನ್ನ ಚಕ್ರದಿಂದ ಅವನ ತಲೆ ಕಡಿದ. ಆಗ ರುಂಡ ಮುಂಡ ಬೇರೆಯಾಗಿ, ರಾಹು ಕೇತುಗಳಾದರು.

ಈ ವೇಳೆ ನೆಲಕ್ಕೆ ಬಿದ್ದ ರಕ್ತದ ಕಣದಿಂದಲೇ ಈರುಳ್ಳಿ ಮತ್ತು ಬೆಳ್ಳುಳ್ಳಿ ಗಿಡ ಉದ್ಭವಿಸಿತು ಎಂದು ಹೇಳಲಾಗಿದೆ. ಈ ಕಾರಣಕ್ಕೆ ಈ ತರಕಾರಿಗಳಲ್ಲಿ ದಾನವರ ಅಂಶವಿದ್ದು, ಇದನ್ನ ದೇವರ ಪೂಜೆಯಲ್ಲಿ ಬಳಸುವುದು ನಿಷಿದ್ಧ ಎನ್ನಲಾಗಿದೆ. ಅಲ್ಲದೇ, ಪೂಜೆ, ಹೋಮ ಹವನ, ಮದುವೆ ಮುಂಜಿ ಇತ್ಯಾದಿ ಶುಭಕಾರ್ಯಗಳಲ್ಲಿ ಮಾಡುವ ಅಡುಗೆಯಲ್ಲಿ, ಈರುಳ್ಳಿ- ಬೆಳ್ಳುಳ್ಳಿಯನ್ನ ಸೇರಿಸಲಾಗುವುದಿಲ್ಲ.

- Advertisement -

Latest Posts

Don't Miss