ಇದರ ಮೊದಲ ಭಾಗದಲ್ಲಿ ನಾವು, ಮಹಿಳೆಯವರು ಮನೆಯಲ್ಲೇ ಕುಳಿತು ಮಾಡಬಹುದಾದ 5 ಕೆಲಸಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಉದ್ಯಮಗಲ ಬಗ್ಗೆ ಹೇಳಲಿದ್ದೇವೆ.
ಆರನೇಯ ಕೆಲಸ ಟ್ಯೂಷನ್ ಕೊಡುವುದು. ನೀವು ಯಾವ ಮೀಡಿಯಂ ಸ್ಟೂಡೆಂಟ್ ಆಗಿರ್ತೀರೋ, ಅದರ ಮೇಲೆ , ಅಥವಾ ನೀವು ಯಾವ ವಿಷಯದಲ್ಲಿ ಎಕ್ಸಪರ್ಟ್ ಇದ್ದೀರೋ ಅದರ ಮೇಲೆ ಟ್ಯೂಷನ್ ತೆಗೆದುಕೊಳ್ಳಬಹುದು.
ಏಳನೇಯ ಕೆಲಸ ಕ್ಯಾಂಡಲ್ ಮೇಕಿಂಗ್ ಉದ್ಯಮ. ಕ್ಯಾಂಡಲ್ ಮಾಡಲು ಬೇಕಾಗಿರುವ ಕಚ್ಚಾ ವಸ್ತುವಿಗಾಗಿ ನೀವು ಬಂಡವಾಳ ಹಾಕಬೇಕು. ಅದು ಲಕ್ಷ ಲಕ್ಷವೇ ಬೇಕಂತಿಲ್ಲ. 10 ಸಾವಿರದ ಒಳಗೆ ಕ್ಯಾಂಡಲ್ ಮಾಡಬಹುದು. ನೀವು ಬೇಕಾದ್ರೆ ಇದಕ್ಕಾಗಿ ಕ್ಲಾಸಿಗೆ ಹೋಗಬಹುದು. ಹೀಗೆ ನೀವು ಕ್ಯಾಂಡಲ್ ಮೇಕಿಂಗ್‌ನಲ್ಲಿ ಪರ್ಫೆಕ್ಟ್ ಆಗಿದ್ರೆ, ವೆರೈಟಿ ಕ್ಯಾಂಡಲ್ ಮಾಡುವ ಕೆಪಾಸಿಟಿ ನಿಮಗಿದ್ದರೆ, ನೀವು ಆರಾಮವಾಗಿ ದುಡ್ಡು ಮಾಡಬಹುದು. ಆದ್ರೆ ನಿಮಗೆ ಅದೇ ರೀತಿ ಮಾರ್ಕೆಟಿಂಗ್ ಮಾಡುವ ಕಲೆಯೂ ಇರಬೇಕು.
ಎಂಟನೇಯ ಕೆಲಸ ಬ್ಯುಟಿಪಾರ್ಲರ್. ಬ್ಯೂಟಿಪಾರ್ಲರ್ ಕೋರ್ಸ್ ಮಾಡಿಯೇ, ಈ ಕೆಲಸಕ್ಕೆ ಇಳಿದರೆ ಉತ್ತಮ. ನೀವು ಮಾಡುವ ಕೆಲಸ ಪರ್ಫೆಕ್‌ಟ್ ಇದ್ದಾಗಲೇ, ನೀವು ಅದರಲ್ಲಿ ಸಾಧನೆ ಮಾಡೋಕ್ಕೆ ಸಾಧ್ಯ. ಹಾಗಾಗಿ ಈ ಬಗ್ಗೆ ಕೋರ್ಸ್ ಅಟೆಂಡ್ ಮಾಡಿ, ಒಂದಿಷ್ಟು ಬಂಡವಾಳ ಹಾಕಿ, ನೀವು ಮನೆಯಲ್ಲೇ ಬ್ಯೂಟಿ ಪಾರ್ಲರ್ ಓಪೆನ್ ಮಾಡಬಹುದು. ಬ್ರೈಡಲ್ ಮೇಕಪ್ ಕೂಡ ಮಾಡಬಹುದು.
ಒಂಭತ್ತನೇಯ ಕೆಲಸ ಯ್ಯೂಟೂಬರ್. ಈಗಂತೂ ಎಲ್ಲಾರೂ ಯ್ಯೂಟ್ಯೂಬ್ ಚಾನೆಲ್ ಮಾಡುವವರೇ. ಆದ್ರೆ ಕಂಟೆಂಟ್ ಉತ್ತಮವಾಗಿದ್ರೆ, ವೀಡಿಯೋ ಕ್ವಾಲಿಟಿ ಚೆನ್ನಾಗಿದ್ರೆ ಮಾತ್ರ, ಜನ ವೀಡಿಯೋ ನೋಡುವ ಮನಸ್ಸು ಮಾಡ್ತಾರೆ. ಹಾಗಾಗಿ ಉತ್ತಮ ಕ್ವಾಲಿಟಿಯ ಕಂಟೆಂಟ್ ಮತ್ತು ವೀಡಿಯೋ ಕೊಟ್ಟರೆ, ಉತ್ತಮ ರೆಸ್ಪಾನ್ಸ್ ಬರತ್ತೆ. ಅಡುಗೆ, ಬ್ಯೂಟಿ ಟಿಪ್ಸ್ ಸೇರಿ, ಇನ್ನೂ ಹಲವರು ಕಂಟೆಂಟ್ ಇಟ್ಕೊಂಡು ನೀವು ಯ್ಯೂಟ್ಯೂಬ್ ಶುರು ಮಾಡಬಹುದು.
ಹತ್ತನೇಯ ಕೆಲಸ ಕಂಟೆಂಟ್ ರೈಟರ್. ನಿಮ್ಮದೇ ಒಂದು ವೆಬ್‌ಸೈಟ್ ಶುರು ಮಾಡಿ, ನೀವು ಅದರಲ್ಲಿ ಸ್ಟೋರಿ ಬರೆಯಬಹುದು. ನ್ಯೂಸ್ ಹಾಕಬಹುದು. ಇದಕ್ಕಾಗಿ 20 ಸಾವಿರದ ತನಕ ನೀವು ಬಂಡವಾಳ ಹಾಕಬೇಕಾಗತ್ತೆ. ಇದರ ರೂಲ್ಸ್ ಫಾಲೋ ಮಾಡ್ಬೇಕಾಗತ್ತೆ.
Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 1
Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2
Women’s Day Special- 20 ಪ್ರಸಿದ್ಧ ಭಾರತೀಯ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಮೊದಲಿಗರು- ಭಾಗ 4