www.karnatakatv.net.ಆಹಸ್,ಡೆನ್ಮಾರ್ಕ್: ಥಾಮಸ್ ಕಪ್ ಫೈನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡವು ಗೆಲಿವಿನ ಶುಭಾರಂಭ ಮಾಡಿದೆ . ಭಾನುವಾರ ನಡೆದಂತಹ ಪಂದ್ಯದಲ್ಲಿ ನದರ್ಲೆಂಡ್ಸ್ ತಂಡವನ್ನು 5-0 ಪಾಯಿಂಟ್ಸ್ ಗಳಿಂದ ಸೋಲಿಸಿದೆ.
ಮೊದಲ ಸುತ್ತಿನಲ್ಲಿ ಕಣಕ್ಕಿಳಿದ ಭಾರತದ ಕಿದಂಬಿ ಶ್ರೀಕಾಂತ್ 21-12 , 21-14 ರಿಂದ ಜೊರಾನ್ ಕ್ವಿಕೆಲ್ ಅವರ ಸವಾಲು ಮೀರಿದರು , ನಂತರ ಡಬಲ್ಸ್ ವಿಭಾಗದ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ – ಚಿರಾಗ್ ಶೆಟ್ಟಿ ಕೂಡ ಉತ್ತಮ ಪ್ರದರ್ಶನದಿಂದ ಜಯದಾಖಲಿಸಿದರು , ನೆದರ್ಲೆಂಡ್ಸ್ ನ ರುಬಿನ್ ಬೆಲ್ – ಟಿಯೆಸ್ ವ್ಯಾನ್ ಡರ್‌ಲೆಕ್ ಅವರನ್ನು 21-19 21-12 ರಿಂದ ಮಣಿಸಿದರು.
ಎದುರಾಳಿ ತಂಡದ ವಿರುದ್ದ 2-0 ಯಿಂದ ಮುನ್ನಡೆಗಳಿಸಿದ ಭಾರತ ಅದೇ ಛಲದೊಂದಿಗೆ ಮುನ್ನುಗ್ಗಿತು .
ಎರಡನೇ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಕಣಕ್ಕಿಳಿದ ಕಂಚಿನ ಪದಕ ವಿಜೆತ ಬಿ.ಸಾಯಿ ಪ್ರಣೀತ್ ಅವರು 21-4 21-12 ರಿಂದ ರಾಬಿನ್ ಮೆಸ್ಮನ್ ಅವರನ್ನು ಸೋಲಿಸಿದರು .
ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಎಂಆರ್ ಅರ್ಜುನ್ ಧ್ರುವ ಕಪಿಲಾ ಜೋಡಿಯೂ ಪಾರಮ್ಮ ಮೆರೆಯಿತು . ಇವರಿಬ್ಬರು 21-12 . 21-13 ರಿಂದ ಆ್ಯಂಡಿ ಜೈಜಕ್ ಬ್ರಯಾನ್‌ವಾಸಿಂಕ್ ಅವರನ್ನು ಮಣಿಸಿ ಭಾರತ ತಂಡಕ್ಕೆ 4-0 ಪಾಯಿಂಟ್ಸ್ ನೊಂದಿಗೆ ಮುನ್ನಡೆ ಗೊಳಿಸಿದರು . ಸಿಂಗಲ್ಸ್ ಕೊನೆಯ ಹಣಾಹಣಿಯಲ್ಲಿ ಸಮೀರ್ ವರ್ಮಾ ಕೂಡ ಅಬ್ಬರಿಸಿದರು . ಸಮೀರ್ 21-6, 21-11 ರಿಂದ ಗಿಜ್ ಡ್ಯೂಜ್ ವಿರುದ್ದ ಮೇಲುಗೈ ಪಡೆದರು . ಭಾರತದ ಪುರುಶರ ತಂಡವು ಮುಂದಿನ ಪಂದ್ಯದಲ್ಲಿ ತನಗಿಂತ ದುರ್ಬಲ ಎನಿಸಿರುವ ತಾಹಿತಿ ಎದುರು ಆಡಲಿದೆ. ಮಂಗಳವಾರ ಈ ಪಂದ್ಯ ನಿಗಧಿಯಾಗಿದೆ, ಮಹಿಳಾ ತಂಡವು ‘ಬಿ’ ಗುಂಪಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.
ಸಂಪತ್ ಶೈವ,ನ್ಯೂಸ್ ಡೆಸ್ಕ್ , ಕರ್ನಾಟಕ ಟಿವಿ




