Saturday, August 9, 2025

Latest Posts

ಹೆಚ್ಚು ಚಿಂತೆ ಮಾಡುವುದರಿಂದಲೂ ಶುರುವಾಗುತ್ತದೆ ಹೊಟ್ಟೆಯ ಸಮಸ್ಯೆ..

- Advertisement -

Health Tips: ಇಂದಿನ ಕಾಲದ ಬ್ಯುಸಿ ಲೈಫ್‌ನಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡುವುದು ಮರೆತು ಹೋಗುತ್ತದೆ. ಹಸಿವಾದರೂ ಎದ್ದು ಹೋಗಿ ಊಟ ಮಾಡಲು ಕೂಡ ಉದಾಸೀನ. ಕೂತಲ್ಲೇ ಜಂಕ್ ಫುಡ್ ತರಿಸಿ ತಿನ್ನುತ್ತಾರೆ. ಇದರಿಂದ ಹೊಟ್ಟೆಯ ಸಮಸ್ಯೆ ಎದುರಿಸಬೇಕಾಗುತ್ತದೆ.  ಆದರೆ ಬರೀ ಊಟದ ಸಮಸ್ಯೆಯಿಂದ ಮಾತ್ರ ಹೊಟ್ಟೆ ನೋವು ಬರುವುದಿಲ್ಲ. ಬದಲಾಗಿ, ಚಿಂತೆ ಮಾಡುವುದರಿಂದ ಕೂಡ ಹೊಟ್ಟೆ ನೋವಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮನೆಯಲ್ಲಿ, ಶಾಲೆಯಲ್ಲಿ, ಆಫೀಸಿನಲ್ಲಿ ಜಗಳವಾದಾಗ, ಅಥವಾ ಯಾರಾದರೂ ಕೊಂಕು ಮಾತನಾಡಿದಾಗ, ಮನಸ್ಸಿಗೆ ಬೇಸರವಾಗುವಂತೆ ನಡೆದುಕೊಂಡಾಗಲೂ ಹೊಟ್ಟೆ ನೋವಿನ ಸಮಸ್ಯೆ ಬರುತ್ತದೆ ಎಂದರೆ ನೀವು ನಂಬಲೇಬೇಕು. ಈ ವೇಳೆ ನಮ್ಮ ತಲೆಯಲ್ಲಿ ಬರುವ ಯೋಚನೆಗಳಿಂದ ಹೊಟ್ಟೆ ಸಮಸ್ಯೆ ಶುರುವಾಗಿ, ಊಟವೂ ಸೇರುವುದಿಲ್ಲ. ಹಾಗಾಗಿ ಹೆಚ್ಚು ಚಿಂತೆ ಮಾಡದೇ, ಖುಷಿಯಾಗಿರುವುದನ್ನು ಕಲಿಯಿರಿ. ಖುಷಿಯಾಗಿರುವುದು ಹೇಗೆ ಎಂದರೆ, ತಾಳ್ಮೆ ಮೈಗೂಡಿಸಿಕೊಂಡಾಗ, ಖುಷಿ ಸಿಗುತ್ತದೆ.

ಇನ್ನು ಎರಡನೇಯದಾಗಿ ಚಹಾ ಸೇವನೆ ಹೆಚ್ಚಾದಾಗಲೂ ಹೊಟ್ಟೆ ನೋವಿನ ಸಮಸ್ಯೆ ಕಾಡುತ್ತದೆ. ಅದರಲ್ಲೂ ಬೆಡ್ ಟೀ, ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸವಿದ್ದವರಿಗೆ, ಹೊಟ್ಟೆ ನೋವಿನ ಸಮಸ್ಯೆ ಹೆಚ್ಚು. ಗ್ಯಾಸ್ಟಿಕ್ ಸಮಸ್ಯೆ ಹೆಚ್ಚು. ಹಾಗಾಗಿ ಬೆಡ್ ಟೀ ಮತ್ತು ಬೆಳಿಗ್ಗೆ ಎದ್ದ ತಕ್ಷಣ, ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಚಟವನ್ನ ಬಿಟ್ಟುಬಿಡಿ.

ಮೂರನೇಯ ಕಾರಣ, ಊಟವಾದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆ ಆರೋಗ್ಯ ಹಾಳಾಗುತ್ತದೆ. ಊಟ ಮಾಡುವ ಅರ್ಧ ಗಂಟೆ ಮುನ್ನ ಮತ್ತು ಊಟವಾದ ಅರ್ಧಗಂಟೆ ಬಳಿಕ ನೀವು ನೀರಿನ ಸೇವನೆ ಮಾಡಬೇಕು. ಇದು ನಿಮ್ಮಆರೋಗ್ಯವನ್ನು ಅತ್ಯುತ್ತಮವಾಗಿ ಇರಿಸುವಲ್ಲಿ ಸಹಾಯ ಮಾಡುತ್ತದೆ. ಆದರೆ ಊಟಕ್ಕೂ ಮುನ್ನ ಮತ್ತು ಊಟವಾದ ತಕ್ಷಣ ನೀರು ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಆರೋಗ್ಯ ಹದಗೆಡುತ್ತದೆ. ಇನ್ನು ಊಟದ ಮಧ್ಯೆ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ.

ಹೊಟ್ಟೆ ಹಾಳಾಗಲು ಇರುವ ನಾಲ್ಕನೇಯ ಕಾರಣವೇನೆಂದರೆ, ಹೊತ್ತಿಗೆ ಸರಿಯಾಗಿ ಊಟ ಮಾಡದೇ ಇರುವುದು. ಕೆಲಸದ ಭರಾಟೆಯಲ್ಲಿ, ತಮಗೆ ಸಮಯ ಸಿಕ್ಕಾಗ ಊಟ ಮಾಡುವವರಿಗೆ, ಹೊಟ್ಟೆಯ ಸಮಸ್ಯೆ ಹೆಚ್ಚಾಗಿರುತ್ತದೆ. ಬೊಜ್ಜು, ಗ್ಯಾಸ್ಟಿಕ್‌ ಸಮಸ್ಯೆಗಳೆಲ್ಲ ಕಾಡುತ್ತದೆ. ಹಾಗಾಗಿ ನೀವು ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುವ ಟೈಮನ್ನು ಫಿಕ್ಸ್ ಮಾಡಿಕೊಳ್ಳಿ. ಎಂಥ ಕೆಲಸವಿದ್ದರೂ, ಅದೇ ಸಮಯಕ್ಕೆ ಊಟ ಮಾಡಿ. ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಅಂಜೂರ ಖೀರು ರೆಸಿಪಿ

ನಿಮ್ಮ ತ್ವಚೆ ನ್ಯಾಚುರಲ್ ಆಗಿ ಗ್ಲೋ ಆಗಲು ಏನು ಮಾಡಬೇಕು..?

ಕೂದಲಿನ ಆರೈಕೆ ಮಾಡಿಕೊಳ್ಳುವ ಸರಿಯಾದ ವಿಧಾನ..

- Advertisement -

Latest Posts

Don't Miss