Tuesday, December 24, 2024

Latest Posts

ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..

- Advertisement -

Shopping tips: ಬಟ್ಟೆ ಅಂದ್ರೆ ಬರೀ ಹೆಣ್ಣು ಮಕ್ಕಳಿಗಷ್ಟೇ ಅಲ್ಲ, ಪುರುಷರಿಗೂ ಇಷ್ಟವೇ. ಪುರುಷರೂ ಕೂಡ ಶಾಪಿಂಗ್‌ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಆದ್ರೆ ಅವರು ಬಜೆಟ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಹಾಗಾಗಿ ನಾವಿಂದು ಪುರುಷರು, ಮಹಿಳೆಯರು, ಮಕ್ಕಳಿಗೆ ಹೀಗೆ ಎಲ್ಲರಿಗೂ ಸೂಟ್ ಆಗು ಬಟ್ಟೆ ಕಡಿಮೆ ಬೆಲೆಗೆ ಸಿಗುವ ಅಂಗಡಿ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೆಂಕಟೇಶ್ವರ ಟೆಕ್ಸ್‌ಟೈಲ್ಸ್‌ನಲ್ಲಿ ಈ ರೀತಿ ರಾಶಿ ರಾಶಿ ಬಟ್ಟೆಗಳು ಕಡಿಮೆ ಬೆಲೆಗೆ ಸಿಗುತ್ತದೆ. ಇಲ್ಲಿ ಬರೀ ಬಟ್ಟೆಯಷ್ಟೇ ಅಲ್ಲ, ಬದಲಾಗಿ ಬ್ಯಾಗ್‌, ಚಪ್ಪಲಿ, ಶೂಟ್ ಎಲ್ಲವೂ ಸಿಗುತ್ತದೆ. ಮಕ್ಕಳ ಬಟ್ಟೆಯಂತೂ 30ರಿಂದ 40 ರೂಪಾಯಿ ಬೆಲೆಗೆ ಶುರುವಾಗುತ್ತದೆ. ಜೀನ್ಸ್, ಟೀ ಶರ್ಟ್ಸ್, ಫಾರ್ಮಲ್ ಶರ್ಟ್ಸ್, ಚೂಡಿದಾರ, ಟಾಪ್ಸ್, ಹೀಗೆ ಎಲ್ಲ ರೀತಿಯ ಬಟ್ಟೆ ಸಿಗುತ್ತದೆ.

ಗ್ರೌಂಡ್‌ ಫ್ಲೋರ್‌ನಲ್ಲಿ ಚಪ್ಪಲಿ, ಬ್ಯಾಗ್‌ಗಳ ಕಲೆಕ್ಷನ್ಸ್ ಇದೆ. ಉತ್ತಮ ಕ್ವಾಲಿಟಿಯ ಬ್ಯಾಗ್‌ಗಳು ಅತೀ ಕಡಿಮೆ ಬೆಲೆಗೆ ಸಿಗುತ್ತದೆ. ಬ್ಯಾಗ್‌ಪ್ಯಾಕ್, ವಾಲೆಟ್ಸ್, ವ್ಯಾನೆಟಿ ಬ್ಯಾಗ್, ಜೀನ್ಸ್ ಪ್ಯಾಂಟ್ ಕೂಡ ಇದೆ. ಫಸ್ಟ್ ಫ್ಲೋರ್‌ನಲ್ಲಿ ಲೇಡೀಸ್ ಬಟ್ಟೆಗಳು ಮತ್ತು ಸೆಕೆಂಡ್ ಫ್ಲೋರ್‌ನಲ್ಲಿ ಪುರುಷರ ಬಟ್ಟೆಗಳು ಲಭ್ಯವಿದೆ. ನೂರು ರೂಪಾಯಿಯಿಂದ ಶುರುವಾಗು ಬಟ್ಟೆಗಳು ಸಾವಿರ ರೂಪಾಯಿ ವರೆಗೂ ಸಿಗುತ್ತದೆ. ಅಲ್ಲದೇ ಇಲ್ಲಿ ಬರುವ ಜನ, ಕೆಜಿ ಲೆಕ್ಕದಲ್ಲೂ ಬಟ್ಟೆ ಖರೀದಿಸುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ರವೆ ಲಾಡು ರೆಸಿಪಿ: ವೀಡಿಯೋ ಸಮೇತ

ನಿಮ್ಮ ಮುಖ ಸುಂದರವಾಗಿ ಕಾಣಬೇಕು ಅಂದ್ರೆ ಈ ಸೇರಮ್ ಬಳಸಿ ನೋಡಿ..

ವಿವಾಹಿತೆಯರು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

- Advertisement -

Latest Posts

Don't Miss