ಜೀವನದಲ್ಲಿ ಏನೇ ಆದರೂ, ಮನುಷ್ಯ ಖುಷಿ ಖುಷಿಯಾಗಿರುವುದು ಮುಖ್ಯ. ಏಕೆಂದರೆ, ಮನುಷ್ಯ ಖುಷಿಯಾಗಿದ್ದಾಗಲೇ, ಅವರು ಆರೋಗ್ಯವಂತನಾಗಿ ಇರುತ್ತಾನೆ. ನೀವು ಯಾವುದೊದರು ವಿಷಯದ ಬಗ್ಗೆ ಟೆನ್ಶನ್ ತೆಗೆದುಕೊಂಡಾಗಲೇ, ನಿಮ್ಮ ಆರೋಗ್ಯ ಹಾಳಾಗಲು ಶುರುವಾಗುತ್ತೆ. ಹಾಗಾಗಿ ನೀವು ಖುಷಿಯಾಗಿರಬೇಕು ಅಂದ್ರೆ, ವಿದುರನ ಈ ಮಾತು ಅನುಸರಿಸಬೇಕಂತೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಖುಷಿಯಾಗಿರಲು ಬೇಕಾದ ಮೊದಲನೇಯ ಗುಣ ಅಂದ್ರೆ, ಯಾರಿಂದಲೂ ಏನನ್ನೂ ಬಯಸದೇ ಇರುವುದು. ನೀವು ಖುಷಿಯಾಗಿರಬೇಕು ಅಂದ್ರೆ, ಯಾರನ್ನೂ ಹೆಚ್ಚು ಪ್ರೀತಿಸಬೇಡಿ. ಯಾರನ್ನೂ ಹೆಚ್ಚು ಹಚ್ಚಿಕೊಳ್ಳಬೇಡಿ. ಅದು ವ್ಯಕ್ತಿಯಾದರೂ ಸರಿ, ವಸ್ತುವಾದರೂ ಸರಿ. ನೀವು ಆ ವ್ಯಕ್ತಿಯನ್ನ ಅಥವಾ ಆ ವಸ್ತುವನ್ನ ಹೆಚ್ಚು ಪ್ರೀತಿಸಿಬಿಟ್ಟರೆ, ಅದು ಕಳೆದುಹೋದರೆ, ನಿಮಗೆ ತೀವ್ರ ಬೇಸರವಾಗುತ್ತದೆ. ಆದರೆ ನೀವು ಯಾರನ್ನೂ, ಯಾವುದನ್ನೂ ಹೆಚ್ಚು ಪ್ರೀತಿಸದಿದ್ದಲ್ಲಿ, ಅದು ಇದ್ದರೂ, ಹೋದರೂ ನಿಮಗೇನು ಬೇಸರವಾಗುವುದಿಲ್ಲ. ಅಂತೆಯೇ, ಯಾರಿಂದಲೂ ಕಾಳಜಿ, ಪ್ರೀತಿಯನ್ನು ಬಯಸಬೇಡಿ. ನಿಮಗೆ ಅವರು ಆ ಕಾಳಜಿ, ಪ್ರೀತಿ ತೋರಿಸದಿದ್ದಲ್ಲಿ, ನಿಮ್ಮ ಮನಸ್ಸಿಗೆ ದುಃಖವಾಗುತ್ತದೆ. ಹಾಗಾಗಿ ನೀವು ಖುಷಿಯಾಗಿರಬೇಕು ಅಂದ್ರೆ, ಯಾರಿಂದಲೂ ಪ್ರೀತಿಯನ್ನು ಬಯಸಬೇಡಿ, ಯಾರಿಗೂ ಹೆಚ್ಚು ಪ್ರೀತಿ ಮಾಡಬೇಡಿ.
ಖುಷಿಯಾಗಿರಲು ಬೇಕಾದ ಎರಡನೇಯ ಗುಣ, ದುರಾಸೆ ಇಲ್ಲದಿರುವುದು. ನಾವು ಜೀವನದಲ್ಲಿ ಆದಷ್ಟು ಸರಳತೆಯಿಂದ, ಅಥವಾ ಬಂದಿದ್ದಷ್ಟೇ ನನ್ನ ಪಾಲಿಂದು ಎಂದು ಬದುಕಿದರೆ, ನಮಗೆ ದುಃಖವಾಗುವುದಿಲ್ಲ. ಆದರೆ ನಮಗೆ ಹೆಚ್ಚು ಆಸೆ ಇದ್ದರೆ, ನಾವು ಅದಕ್ಕಾಗಿ ಹಾತೊರುಯುತ್ತೇವೆ. ಕೊನೆಗೆ ಹಾಗೆ ಆಸೆ ಪಟ್ಟಿದ್ದು ನಮಗೆ ಸಿಗದಿದ್ದಾಗ, ನೋವಾಗುತ್ತದೆ. ಹಾಗಾಗಿ ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ, ಸರಳವಾಗಿ ಬದುಕುವುದನ್ನು ಕಲಿಯಿರಿ.
ಖುಷಿಯಾಗಿರಲು ಬೇಕಾದ ಮೂರನೇಯ ಗುಣ ಅಂದ್ರೆ, ಜ್ಞಾನ. ಸಾಯುವವರೆಗೂ ಎಷ್ಟು ಜ್ಞಾನ ಸಿಗುತ್ತದೆಯೋ, ಅಷ್ಟು ಜ್ಞಾನವನ್ನು ನಾವು ಪಡೆಯಬೇಕು. ನಮಗೆ ಹೆಚ್ಚು ಜ್ಞಾನ ಇದ್ದಾಗ, ನಾವು ಬುದ್ಧಿವಂತರಂತೆ ವರ್ತಿಸುತ್ತೇವೆ. ಮಾತಿಗಿಂತ ಮೌನಕ್ಕೆ ಹೆಚ್ಚು ಬೆಲೆ ಎಂದು ಅರಿತುಕೊಳ್ಳುತ್ತೇವೆ. ಎಲ್ಲಿ ಹೇಗೆ ವರ್ತಿಸಬೇಕು. ಯಾರೊಂದಿಗೆ ಹೇಗಿರಬೇಕು ಎಂದು ಕಲಿಯುತ್ತೇವೆ. ಆಗ ನಮ್ಮ ಕಂಟ್ರೋಲಿನಲ್ಲಿ ನಾವಿರುತ್ತೇವೆ. ಆಗ ಖುಷಿಯೂ ನಮ್ಮ ಪಾಲಾಗುತ್ತದೆ. ಅಜ್ಞಾನಿಗಳು ಹೆಚ್ಚು ಚರ್ಚಿಸುತ್ತಾರೆ. ಅದನ್ನು ಮೊಂಡು ವಾದ ಎನ್ನಲಾಗುತ್ತದೆ. ಹಾಗೆ ಮೊಂಡು ವಾದ ಮಾಡಿದಾಗ, ನಮ್ಮ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಜ್ಞಾನ ಪಡೆದುಕೊಳ್ಳುವುದರ ಜೊತೆಗೆ, ಖುಷಿಯನ್ನೂ ಪಡೆಯಿರಿ.
ಖುಷಿಯಾಗಿರಲು ಬೇಕಾದ ನಾಲ್ಕನೇಯ ಗುಣ ಅಂದ್ರೆ, ಧೈರ್ಯ. ಜೀವನದಲ್ಲಿ ಏನಾದರೂ ಸರಿ ನಾನು ಎದುರಿಸಬಲ್ಲೆ ಎಂಬ ಧೈರ್ಯ ನಿಮ್ಮಲ್ಲಿದ್ದರೆ, ನೀವು ಖುಷಿಯಾಗಿರಲು ಸಾಧ್ಯ. ಹಾಗೆ ಧೈರ್ಯ ಬರಬೇಕು ಅಂದ್ರೆ, ನೀವು ಜೀವನದಲ್ಲಿ ನಿಯತ್ತಾಗಿರಬೇಕು. ನೀವು ನಿಯತ್ತಾಗಿದ್ದರೆ, ಬಂದಿದ್ದನ್ನು ಎದುರಿಸುವ ಸಾಮರ್ಥ್ಯ, ಧೈರ್ಯ ನಿಮಗೆ ಬರುತ್ತದೆ. ನೀವು ತಪ್ಪು ಮಾಡಿದ್ದರೆ, ಆ ತಪ್ಪು ಎಲ್ಲಿ , ಎಲ್ಲರಿಗೂ ಗೊತ್ತಾಗಿ ಬಿಡುತ್ತದೆಯೋ ಅನ್ನೋ ಹೆದರಿಕೆ ನಿಮಗಿರುತ್ತದೆ. ಆಗ ಧೈರ್ಯ ಕುಂದಿಹೋಗುತ್ತದೆ. ಹಾಗಾಗಿಜೀವನದಲ್ಲಿ ಧೈರ್ಯದಿಂದಿರಬೇಕು ಅಂದ್ರೆ ನಿಯತ್ತಾಗಿರಿ. ಆಗ ಖುಷಿ ನಿಮ್ಮ ಪಾಲಾಗುತ್ತದೆ.
ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..




