ನಿಮ್ಮ ಮನೆಯ ವಿಚಾರವನ್ನು ಎಂದಿಗೂ ಯಾರ ಜತೆಯೂ ಶೇರ್ ಮಾಡಬೇಡಿ ಅಂತಾರೆ ಚಾಣಕ್ಯರು.. ಯಾಕೆ..?

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ನಾವು ನಮ್ಮ ಮನೆಯಲ್ಲಿ ನಡೆಯುವ ಕಲಹ, ಮಾತುಕತೆ ಎಲ್ಲವನ್ನೂ ನಾವು ಇತರರಿಗೆ ಹೇಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಹಾಗಾದ್ರೆ ಯಾಕೆ ನಾವು ನಮ್ಮ ಮನೆಯ ಗುಟ್ಟು ರಟ್ಟು ಮಾಡಬಾರದು ಎಂದು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ.

ನಿಮ್ಮ ಬಗ್ಗೆ ಇತರರ ಬಳಿ ಸುಳ್ಳು ವಿಷಯ ಸೇರಿಸಿ ಹೇಳುತ್ತಾರೆ: ನೀವು ನಿಮ್ಮ ಮನೆಯ ವಿಚಾರವನ್ನು ಇತರರಿಗೆ ಹೇಳಿದಾಗ, ಕೆಲವರು ನಿಮ್ಮ ಮಾತು ಕೇಳಿ ಸುಮ್ಮನಾಗಬಹುದು. ಹಾಗಂತ ಎಲ್ಲರೂ ಇದೇ ರೀತಿ ಮಾಡುತ್ತಾರೆ. ಅಥವಾ ನಿಮ್ಮ ಮೇಲೆ ಕರುಣೆ ತೋರಿಸುತ್ತಾರೆ ಎಂದು ತಿಳಿಯಬೇಡಿ. ಕೆಲವರು ನಿಮ್ಮ ಮನೆಯ ವಿಷಯಕ್ಕೆ ಉಪ್ಪು-ಖಾರ ಸೇರಿಸಿ, ಇತರರಿಗೆ ಸಂದೇಶ ರವಾನಿಸಿ, ತಮಾಷೆ ತೆಗೆದುಕ“ಳ್ಳುತ್ತಾರೆ. ಹಾಗಾಗಿ ಯಾರ ಸಿಂಪತಿ ಬಯಸದೇ, ನಿಮ್ಮ ಮನೆಯ ವಿಷಯವನ್ನು ನಿಮ್ಮಲ್ಲೇ ಇರಿಸಿಕ`ಳ್ಳಿ.

ತಿಳುವಳಿಕೆ ಇಲ್ಲದವರ ಬಳಿ ಹೇಳಬೇಡಿ: ತಿಳುವಳಿಕೆ ಇಲ್ಲದವರು, ತಮ್ಮ ಮನೆಯ ಜನರಿಗೇ ಗೌರವಿಸುವುದಿಲ್ಲ. ಅಂಥಾದ್ದರಲ್ಲಿ ನಿಮ್ಮ ಸಮಸ್ಯೆ ಕೇಳಿ, ಸಲಹೆ ನೀಡುತ್ತಾರೆ ಅಥವಾ ಸಿಂಪತಿ ತೋರಿಸುತ್ತಾರೆ ಎಂದು ಅನ್ನಿಸುತ್ತದೆಯೇ..? ಖಂಡಿತವಾಗಿಯೂ ಇಲ್ಲ. ಅವರು ನಿಮ್ಮ ಮನೆಯ ಜಗಳ ಬಗ್ಗೆ ಕೇಳಿ, ಮನಸ್ಸಿನಲ್ಲೇ ಖುಷಿ ಪಡುತ್ತಾರೆ.

ಸ್ವಾರ್ಥಿಗಳ ಬಳಿ, ಅಸೂಯೆ ಇರುವವರ ಬಳಿ ಹೇಳಬೇಡಿ: ಸ್ವಾರ್ಥಿಗಳು, ನಿಮ್ಮ ಜೀವನ ನೋಡಿ ಅಸೂಯೆ ಪಡುವವರು, ನಿಮ್ಮ ಮನೆಯ ಕಲಹದ ಸುದ್ದಿ ಕೇಳಿ ಸಮಾಧಾನ ಮಾಡಿಕ“ಳ್ಳುತ್ತಾರೆ. ತಮಾಷೆ ಮಾಡುತ್ತಾರೆ. ಖುಷಿ ಪಡುತ್ತಾರೆ. ಹಾಗಾಗಿ ಸ್ವಾರ್ಥ ಬುದ್ಧಿಯವರ ಬಳಿ ಮತ್ತು ಅಸೂಯೆ ಪಡುವವರ ಬಳಿ ಮನೆಯ ಕಲಹದ ವಿಷಯ ಹೇಳಬೇಡಿ.

ಅಹಂಕಾರಿಗಳ ಬಳಿ ಮನೆಯ ವಿಚಾರ ವಿವರಿಸಬೇಡಿ: ಅಂಹಾಾಕರಿಗಳ ಬಳಿ ನೀವು ನಿಮ್ಮ ಮನೆಯ ವಿಚಾರ ಹೇಳಿದಾಗ ಏನಾಗುತ್ತದೆ ಎಂದರೆ, ಅವರು ತಮ್ಮ ಮನೆಯ ಬಗ್ಗೆ ಗರ್ವ ಪಡುತ್ತಾರೆ. ಗರ್ವದ ಮಾತನ್ನಾಡಿ, ನಿಮ್ಮ ಮನಸ್ಸನ್ನೂ ಇನ್ನೂ ನೋಯಿಸುವ ಪ್ರಯತ್ನವೂ ಮಾಡಬಹುದು. ಹಾಗಾಗಿ ಮನೆಯ ನಾಲ್ಕು ಗೋಡೆಯ ಮಧ್ಯೆ ನಡೆಯುವ ವಿಷಯ ಮನೆಯಲ್ಲೇ ಇರುವಂತೆ ನೋಡಿಕ“ಳ್ಳಿ.

About The Author