ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕಾಲಿಟ್ಟಿದ್ದ ಘಳಿಗೆಯೋ ಏನೋ ದಿನದಿಂದ ದಿನಕ್ಕೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಾನೆ ಇದ್ದಾರೆ. ಸದ್ಯ ರಶ್ಮಿಕಾ ಘಟಾನುಘಟಿ ತಾರೆಯನ್ನೂ ಹಿಂದಿಕ್ಕಿ ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
ಹೌದು, ರಾಕಿಂಗ್ ಸ್ಟಾರ್ ಯಶ್, ಸಮಂತಾ, ಪ್ರಭಾಸ್, ವಿಜಯ್ ದೇವರಕೊಂಡ ಸೇರಿದಂತೆ ಮುಂತಾದ ಸ್ಟಾರ್ ನಟರನ್ನು ಸರಿಗಟ್ಟಿರೋ ಈ ಕಿರಿಕ್ ಬೆಡಗಿ, ಫೋರ್ಬ್ಸ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಫೋರ್ಬ್ಸ್ ನಿಯತಕಾಲಿಕೆ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಪ್ರಭಾವಿ ಎನಿಸಿಕೊಂಡಿರುವ ದಕ್ಷಿಣ ಭಾರತದ ಸೆಲೆಬ್ರಿಗಳ ಪಟ್ಟಿಯನ್ನು ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿದೆ. ಅದರಲ್ಲಿ ರಶ್ಮಿಕಾ ನಂಬರ್ 1 ಸ್ಥಾನ ಪಡೆದಿದ್ದಾರೆ.
ಇನ್ನು ರಶ್ಮಿಕಾ, ಸಂಭಾವನೆ, ಖ್ಯಾತಿ ಸೋಶಿಯಲ್ ಮೀಡಿಯಾ ಫಾಲೋಯರ್ಸ್ , ಸಿನಿಮಾ ಆಫರ್ ಹೀಗೆ ಎಲ್ಲಾ ಎಲ್ಲ ವಿಚಾರದಲ್ಲೂ ರಶ್ಮಿಕಾ ನಂಬರ್ ಒನ್ ಪಟ್ಟದಲ್ಲಿ ಮಿಂಚುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಾಡುವ ಪ್ರತಿಯೊಂದೂ ಪೋಸ್ಟ್ ಕೂಡ ಕೋಟ್ಯಂತರ ಮಂದಿಯನ್ನು ತಲುಪುತ್ತಿದೆ. ಹೀಗಾಗಿ 10ಕ್ಕೆ 9.88ರಷ್ಟು ರೇಟಿಂಗ್ ಪಡೆಯುವ ಮೂಲಕ ನಂ.1 ಆಗಿದ್ದಾರೆ.
ಇನ್ನು ರಶ್ಮಿಕಾ ನಂತರದ ಸ್ಥಾನದಲ್ಲಿ 9.67ರಷ್ಟು ರೇಟಿಂಗ್ ಪಡೆದಿರುವ ವಿಜಯ್ ದೇವರಕೊಂಡ 2ನೇ ಸ್ಥಾನದಲ್ಲಿದ್ದಾರೆ.
ಹಾಗೆಯೇ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್’ ಮೂಲಕ ಅತಿ ಹೆಚ್ಚು ಜನಪ್ರಿಯರಾಗಿರೋ ರಾಕಿಂಗ್ ಸ್ಟಾರ್ ಯಶ್ 9.54ರಷ್ಟು ರೇಟಿಂಗ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ನಟಿ ಸಮಂತಾ 9.49ರಷ್ಟು ರೇಟಿಂಗ್ ಗಳಿಸೋ ಮೂಲಕ 4ನೇ ಸ್ಥಾನದಲ್ಲಿದ್ದಾರೆ. ತದ ನಂತರದ ಸ್ಥಾನವನ್ನ ಕ್ರಮಬದ್ಧವಾಗಿ ಅಲ್ಲು ಅರ್ಜುನ್, ದುಲ್ಖರ್ ಸಲ್ಮಾನ್ , ಪೂಜಾ ಹೆಗ್ಡೆ, ಪ್ರಭಾಸ್, ಸೂರ್ಯ, ತಮನ್ನಾ ಭಾಟಿಯಾ ಪಡೆದುಕೊಂಡಿದ್ದಾರೆ.
ಇನ್ನು ಫೋರ್ಬ್ಸ್ ನ ಈ ಪಟ್ಟಿ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರರಂಗದ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಆಧರಿಸಿ ತಯಾರಾಗಿದೆ. ಇನ್ನು ಒಂದಿಲ್ಲೊಂದು ವಿಚಾರಕ್ಕೆ ಈ ಹಿಂದೆಲ್ಲಾ ಸದಾ ಟ್ರಾಲಿಗರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ರಶ್ಮಿಕಾ ಸದ್ಯ ಫೋರ್ಬ್ಸ್ ನ ಪ್ರಭಾವಿ ಸೆಲೆಬ್ರಿಟಿಯ ಪೈಕಿ ನಂ.1 ಆಗಿ ಹೊರಹೊಮ್ಮಿದ್ದು, ಕಿರಿಕ್ ಬೆಡಗಿಯ ಫ್ಯಾನ್ಸ್ ಹಿರಿಹಿರಿ ಹಿಗ್ಗುವಂತೆ ಮಾಡಿದೆ.
ಫಿಲಂ ಬ್ಯೂರೋ, ಕರ್ನಾಟಕ ಟಿವಿ