ಭಾಗ ಒಂದು, ಎರಡು, ಮೂರು ಮತ್ತು ನಾಲ್ಕನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 16 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಐದನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಹದಿನೇಳನೇಯ ಅವತಾರ ಶ್ರೀಹರಿ ಅವತಾರ. ತ್ರಿಕೂಟ ಎಂಬ ಪರ್ವತದಲ್ಲಿ ಒಂದು ಆನೆ ತನ್ನ ಹೆಂಡತಿಯೊಂದಿಗೆ ವಾಸವಿತ್ತು. ಒಮ್ಮೆ ಅದು ಸ್ನಾನಕ್ಕಾಗಿ ನದಿಯ ಬಳಿ ಬಂದಿತ್ತು. ಆಗ ಒಂದು ಮೊಸಳೆ ಅದರ ಕಾಲನ್ನು ಹಿಡಿದು ತಿನ್ನಲು ಪ್ರಯತ್ನಿಸಿತು. ಹೀಗೆ ಒಂದು ಸಾವಿರ ದಿನಗಳವರೆಗೂ ಇವರ ಯುದ್ಧ ನಡೆದಿತ್ತು. ನಂತರ ಗಜೇಂದ್ರ ಅಸ್ವಸ್ಥನಾಗಿ ಶ್ರೀಹರಿಯನ್ನು ನೆನೆದ. ಆಗ ಪ್ರತ್ಯಕ್ಷನಾದ ಶ್ರೀ ಹರಿ, ತನ್ನ ಚಕ್ರದಿಂದ ಮೊಸಳೆಯ ವಧೆ ಮಾಡಿದ.
ಹದಿನೆಂಟನೇಯ ಅವತಾರ ಪರಶುರಾಮಾವತಾರ. ಕ್ಷತ್ರೀಯ ನಾಶಕ್ಕಾಗಿ ಜಮದಗ್ನಿಯ ಪುತ್ರನಾಗಿ ಜನಿಸಿದವನೇ ಪರಶುರಾಮ.
ಹತ್ತೊಂಭತ್ತನೇಯ ಅವತಾರ ಮಹರ್ಷಿ ವೇದವ್ಯಾಸ. ಮಹಾಭಾರತ ಗ್ರಂಥ ರಚನೆಯೊಂದಿಗೆ, ವೇದಗಳನ್ನು ರಚಿಸಿದವರೇ ಮಹರ್ಷಿ ವೇದವ್ಯಾಸರು. ಇವರು ಕಪ್ಪು ವರ್ಣದವರಾದ ಕಾರಣ ಇವರನ್ನು ಕೃಷ್ಣದ್ವಯಪಾಯನ ಎಂದು ಕೂಡ ಕರೆಯಲಾಗುತ್ತದೆ.
ಇಪ್ಪತ್ತನೇಯ ಅವತಾರ ರಾಮನ ಅವತಾರ. ಶ್ರೀರಾಮನೆಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ತ್ರೇತಾಯುಗದಲ್ಲಿ ದಶರಥ ರಾಜನ ಹಿರಿಯ ಮಗನಾಗಿ ಜನಿಸಿದವನೇ ಶ್ರೀ ರಾಮ. ಸೀತಾ ಮಾತೆಯ ಪತಿಯಾಗಿ ವನವಾಸವನ್ನು ಅನುಭವಿಸಿ, ರಾವಣನ ವಧೆ ಮಾಡಿದವನೇ ಶ್ರೀರಾಮ.
ಇವಿಷ್ಟು ಶ್ರೀ ವಿಷ್ಣುವಿನ 24 ಅವತಾರಗಳಲ್ಲಿ 20 ಅವತಾರಗಳ ಬಗೆಗಿನ ಮಾಹಿತಿ. ಮುಂದಿನ ಭಾಗದಲ್ಲಿ ಇನ್ನೂ ನಾಲ್ಕು ಅವತಾರಗಳ ಬಗ್ಗೆ ತಿಳಿಯೋಣ.




