Saturday, June 21, 2025

Latest Posts

ಸಿಸರಿನ್ ಆದ್ರೆ ಕಷ್ಟಾನಾ..? ನಾರ್ಮಲ್ ಡಿಲೆವರಿನೇ ಬೆಟರಾ..? ವೈದ್ಯರು ಏನ್ ಹೇಳ್ತಾರೆ..?

- Advertisement -

ಮೊದಲ ಬಾರಿ ಗರ್ಭಿಣಿಯಾದವರಿಗೆ, ಪ್ರಸವ ಹೇಗಾಗುತ್ತದೆ ಅನ್ನೋದೇ ಟೆನ್ಶನ್ ಆಗಿರುತ್ತದೆ. ಅಲ್ಲದೇ, ಹಲವರು ಸಿಸೆರಿನ್ ಆದ್ರೆ ಮುಂದೆ ತುಂಬಾ ಕಷ್ಟ ಆಗತ್ತೆ. ಆದಷ್ಟು ನಾರ್ಮಲ್ ಹೆರಿಗೆಗೆ ಪ್ರಯತ್ನ ಪಡು ಅಂತಾ ಹೇಳಿರ್ತಾರೆ. ಹಾಗಾಗಿ ವ್ಯಾಯಾಮ, ವಾಕಿಂಗ್, ಉತ್ತಮ ಆಹಾರ ಸೇವನೆ ಎಲ್ಲಾ ಮಾಡ್ತೀರಾ. ಆದ್ರೂ ನಿಮಗೆ ಸಿಸೆರಿನ್ ಆಗತ್ತೆ. ಆಗ ನೀವು ಬೈಕೋಳೋದು ವೈದ್ಯರನ್ನೇ. ಅವರು ಸರಿ ಇಲ್ಲ ಅಂತಾನೇ ಹೇಳೋದು. ಆದ್ರೆ ವೈದ್ಯರು ಸಿಸೆರಿನ್ ಮಾಡೋಕ್ಕೂ ಕಾರಣವಿರತ್ತೆ. ಆ ಕಾರಣ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವೈದ್ಯರು ಗರ್ಭಿಣಿಗೆ ಸಿಸರಿನ್ ಮಾಡುವುದಕ್ಕೂ ಒಂದು ಮುಖ್ಯವಾದ ಕಾರಣ ಇರತ್ತೆ. ಅವರು ಸುಮ್ಮ ಸುಮ್ಮನೆ ಸಿಸರಿನ್ ಮಾಡುವುದಿಲ್ಲ, ನಿಮ್ಮ ಮತ್ತು ನಿಮ್ಮ ಮಗುವಿನ ಜೀವಕ್ಕೆ ಪ್ರಾಣಾಪಾಯವಿದ್ದಾಗ ಮಾತ್ರ ಸಿಸರಿನ್ ಮಾಡುತ್ತಾರೆಂದು ಹೇಳುತ್ತಾರೆ, ಡಾ. ದೀಪ್ಶಿಕಾ ಝಾ. ಈ ಬಗ್ಗೆ ವೈದ್ಯರನ್ನ ದೂರಬೇಡಿ. ಯಾಕಂದ್ರೆ ಯಾವ ವೈದ್ಯೆಯೂ ಕಾರಣವಿಲ್ಲದೇ, ಈ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನೀವು ಮತ್ತು ನಿಮ್ಮ ಮಗು ಆರೋಗ್ಯವಾಗಿದ್ದರೆ, ವೈದ್ಯರು ನಾರ್ಮಲ್ ಡಿಲೆವರಿ ಮಾಡಿಸುತ್ತಾರೆ ಅನ್ನೋದು ಝಾ ಮಾತು.

ಇನ್ನು ಯಾವ ಸಮಯದಲ್ಲಿ ಸಿಸರಿನ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರೆ, ನಿಮ್ಮ ಮಗುವಿನ ತೂಕ ಹೆಚ್ಚಾಗಿದ್ದಲ್ಲಿ, ನಿಮ್ಮ ಹೈಟ್ ಚಿಕ್ಕದಿದ್ದಲ್ಲಿ, ಹೊಟ್ಟೆಯಲ್ಲಿ ನೀರಿನ ಚೀಲ ಖಾಲಿಯಾಗಿದ್ದಲ್ಲಿ, ಮಗು ಸರಿಯಾಗಿ ಟರ್ನ್ ಆಗದಿದ್ದಲ್ಲಿ, ಸಿಸರಿನ್ ಮಾಡಲಾಗುತ್ತದೆ. ಅಲ್ಲದೇ ಡಿಲೆವರಿಗೂ ಮುನ್ನ ಮಗುವಿನ ಹಾರ್ಟ್‌ಬೀಟ್ ಚೆಕ್ ಮಾಡಲಾಗುತ್ತದೆ. ಈ ವೇಳೆ ಮಗುವಿಗೆ ಸುಸ್ತಾಗಿದ್ದರೆ, ಮಗುವಿನ ಹಾರ್ಟ್‌ಬೀಟ್ ಕಮ್ಮಿಯಾಗಿರುತ್ತದೆ. ಈ ವೇಳೆ ಸಿಸರೀನ್ ಮಾಡಲೇಬೇಕಾಗುತ್ತದೆ.

ಅಲ್ಲದೇ ತಾಯಿಗೆ ಹೈ ಬಿಪಿ ಅಥವಾ ಹೈ ಶುಗರ್ ಇದ್ದಲ್ಲಿ, ಸಿಸರಿನ್ ಮಾಡಲಾಗುತ್ತದೆ. ಇನ್ನು ನೀವು ಮೊದಲಿನಿಂದ ಹಿಡಿದು ಡಿಲೆವರಿ ಆಗುವ ತನಕ ಒಂದೇ ವೈದ್ಯರ ಬಳಿ ಹೋಗುವುದು ಉತ್ತಮ. ಕೊನೆ ಕ್ಷಣಕ್ಕೆ ವೈದ್ಯರನ್ನ ಚೇಂಜ್ ಮಾಡುವುದು ಅಷ್ಟು ಉತ್ತಮವಲ್ಲ. ಇನ್ನು ಡೆಲಿವರಿ ಬಳಿಕ ಹೊಟ್ಟೆ ಮುಂದು ಬರೋಕ್ಕೆ ಕಾರಣ, ನಿಮ್ಮ ಆಲಸ್ಯ. ಆದ್ದರಿಂದ ಗರ್ಭಿಣಿ ಇದ್ದಾಗ, ಉತ್ತಮ ಆಹಾರ ಸೇವಿಸಿ. ಹಣ್ಣು ತರಕಾರಿ, ಜ್ಯೂಸ್, ಹಾಲು, ಮೊಸರು ತಿನ್ನಿ. ವಾಕಿಂಗ್ ಮತ್ತು ಕೆಲ ವ್ಯಾಯಾಮಗಳು ಖಂಡಿತ ಮಾಡಿ.

 

- Advertisement -

Latest Posts

Don't Miss