ನಾವು ಈ ಮೊದಲು ಯಾವ 10 ಗುಣಗಳು ನಮ್ಮಲ್ಲಿದ್ದರೆ ನಾವು ಉದ್ಧಾರವಾಗಲು ಸಾಧ್ಯವಿಲ್ಲಾ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಭಾಗದಲ್ಲಿ 6 ಗುಣಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಗುಣಗಳ ಬಗ್ಗೆ ವಿವರಣೆ ನೋಡೋಣ..
ಏಳನೇಯ ಗುಣ. ನೀವು ಬೆಳಿಗ್ಗೆ ಎದ್ದ ತಕ್ಷಣ, ಟೀ, ಕಾಫಿ ಕುಡಿಯುವಾಗ ಅದಕ್ಕೆ ಸಕ್ಕರೆ ಬಳಸುವುದು. ಟೀ, ಕಾಫಿ ಸೇವನೆಯಿಂದ ನಿಮ್ಮ ನಿದ್ದೆ ಕಡಿಮೆಯಾಗಬಹುದು. ನಿಮಗೆ ನೆಮ್ಮದಿ ಎನ್ನಿಸಬಹುದು. ಕೆಲವರಿಗೆ ಟೀ- ಕಾಫಿ ಕುಡಿದ ಮೇಲೆಯೇ ಜೋಶ್ ಬರೋದು. ಆದ್ರೆ ಆ ನೆಮ್ಮದಿ ಮತ್ತು ಜೋಶ್ ಕೆಲ ಸಮಯದಲ್ಲೇ ಹೋಗಿಬಿಡುತ್ತದೆ. ಯಾಕಂದ್ರೆ ಅದರಲ್ಲಿ ಸಕ್ಕರೆ ಇರುತ್ತದೆ. ಅತಿಯಾದ ಮತ್ತು ಖಾಲಿ ಹೊಟ್ಟೆಯಲ್ಲಿ ಸಕ್ಕರೆ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಚೈತನ್ಯ ಕಡಿಮೆಯಾಗುತ್ತದೆ. ಮತ್ತು ಆರೋಗ್ಯ ಕ್ಷಿಣಿಸುತ್ತ ಹೋಗುತ್ತದೆ. ಹಾಗಾಗಿ ಬೆಳಿಗ್ಗೆ ಕಾಫಿ- ಟೀ ಕುಡಿಯುವಾಗ ಸಕ್ಕರೆ ಬಳಸಬೇಡಿ.
ಎಂಟನೆಯ ಗುಣ ತಿಂಡಿ ತಿನ್ನದಿರುವುದು. ಮನೆಗೆ ಫೌಂಡೇಶನ್ ಎಷ್ಟು ಮುಖ್ಯವೋ, ನಮ್ಮ ಆರೋಗ್ಯ ಉತ್ತಮವಾಗಿರಲು ನಮ್ಮ ದೇಹಕ್ಕೆ ಬೆಳಗ್ಗಿನ ತಿಂಡಿಯೇ ಫೌಂಡೇಶನ್. ಹಾಗಾಗಿ ಯಾವುದೇ ಕಾರಣಕ್ಕೂ ತಿಂಡಿ ಮಿಸ್ ಮಾಡಬೇಡಿ. ಹಾಗೆ ಮಿಸ್ ಮಾಡಿದ್ದೇ ಆದಲ್ಲಿ, ನಿಮ್ಮ ಆರೋಗ್ಯದಲ್ಲಿ ಏರುಪೇರುಂಟಾಗುತ್ತದೆ. ಹಾಗಾಗಿ ಬೆಳಗ್ಗಿನ ತಿಂಡಿಯನ್ನ ತಪ್ಪದೇ ತಿನ್ನಿ.
ಒಂಭತ್ತನೆಯ ಗುಣ. ತಲೆಯಲ್ಲಿ ಕೆಟ್ಟ ಯೋಚನೆ ತುಂಬಿಕೊಳ್ಳುವುದು. ಕೊಂಕು ಮಾತನಾಡುವುದು. ಹಂಗಿಸುವ ಬುದ್ಧಿ. ಇದೆಲ್ಲ ಇದ್ದಲ್ಲಿ ನೀವು ಉದ್ಧಾರವಾಗಲು ಖಂಡಿತ ಸಾಧ್ಯವಾಗುವುದಿಲ್ಲ. ಹಾಗಾಗಿ ಮಾತನಾಡುವಾಗ ಮಾತಿನಲ್ಲಿ ಸಾಫ್ಟ್‌ನೆಸ್ ಇರಲಿ. ಸಿಡುಕಿ ಮಾತನಾಡುವುದು, ಚುಚ್ಚಿ ಮಾತನಾಡುವ ಅಭ್ಯಾಸ ನಿಮಗಿದ್ದಲ್ಲಿ, ನಿಮ್ಮ ಸಹವಾಸ ಯಾರೂ ಮಾಡುವುದಿಲ್ಲ. ಮತ್ತು ಇಂಥವರೆಂದೂ ಯಶಸ್ಸು ಗಳಿಸಲು ಸಾಧ್ಯವಾಗುವುದಿಲ್ಲ.
ಹತ್ತನೆಯ ಗುಣ ನೀವು ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ಹೆದರುವುದು. ಜೀವನದಲ್ಲಿ ಎಂದಿಗೂ ಕಠಿಣ ಪರಿಸ್ಥಿತಿಯಿಂದ ದೂರ ಓಡಬೇಡಿ. ಬದಲಾಗಿ ಅದನ್ನು ಎದುರಿಸುವ ಶಕ್ತಿ ತಂದುಕೊಳ್ಳಿ. ನೀವು ಕಠಿಣ ಪರಿಸ್ಥಿತಿಯನ್ನು ಮೆಟ್ಟಿ ನಿಂತಾಗಲೇ ಯಶಸ್ವಿಯಾಗುವುದು. ಆಗಲೇ ನಿಮಗೆ ನಾನು ಯಾವ ಪರಿಸ್ಥಿತಿಯಲ್ಲೂ ಗೆದ್ದು ಬರುವೆ ಎಂಬ ಆತ್ಮ ವಿಶ್ವಾಸ ಹೆಚ್ಚುವುದು.




