Sunday, June 22, 2025

Latest Posts

ಬ್ರೇಕ್‌ಫಾಸ್ಟ್‌ಗೆ ತಯಾರಿಸಿ ಟೇಸ್ಟಿ ಮತ್ತು ಹೆಲ್ದಿ ಪಾಲಕ್ ಪಲಾವ್..

- Advertisement -

ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಇನ್ನು ಹಲವರಿಗೆ ಪಾಲಕ್ ಅಂದ್ರೆ ಇಷ್ಟಾ ಆಗಲ್ಲ. ಹಾಗಾಗಿ ನಾವಿಂದು ಪಾಲಕ್ ಇಷ್ಟಪಡವದರು, ಇಷ್ಟಪಟ್ಟೂ ತಿನ್ನೋ ರೀತಿ ಒಂದು ರೆಸಿಪಿ ಹೇಳಲಿದ್ದೇವೆ. ಅದೇ ಪಾಲಕ್ ಪಲಾವ್. ಹಾಗಾದ್ರೆ ಇದಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಕಪ್‌ ಪಾಲಕ್, ಕಾಲು ಕಪ್ ಪುದೀನಾ, ಮೂರು ಕಪ್ ರೈಸ್, ಶುಂಠಿ- ಬೆಳ್ಳುಳ್ಳು- ಹಸಿಮೆಣಸಿನಕಾಯಿ ಪೇಸ್ಟ್, ಅರಿಶಿನ ಪುಡಿ, ಎರಡು ಸ್ಪೂನ್ ಗರಂ ಮಸಾಲೆ ಪುಡಿ, ಕೊತ್ತೊಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಬೀನ್ಸ್, ಅರ್ಧ ಬೌಲ್ ನೆನೆಸಿದ ಬಟಾಣಿ, ನಾಲ್ಕು ಸ್ಪೂನ್ ತುಪ್ಪ, 2 ಪಲಾವ್ ಎಲೆ, ಕೊಂಚ ಕುಟ್ಟಿ ಪುಡಿ ಮಾಡಿದ, ಚಕ್ಕೆ, ಲವಂಗ, ಏಲಕ್ಕಿ, ಕಾಳು ಮೆಣಸು, ಜೀರಿಗೆ, ಸೋಂಪು, ಕೊಂಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಪಾಲಕ್ ಸೊಪ್ಪು, ಪುದೀನಾ, ಕೊತ್ತೊಂಬರಿ ಸೊಪ್ಪು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಕುಕ್ಕರ್‌ನಲ್ಲಿ ತುಪ್ಪ ಹಾಕಿ, ಕೊಂಚ ಬಿಸಿಯಾದ ಬಳಿಕ, ಪಲಾವ್ ಎಲೆ, ಕೊಂಚ ಕುಟ್ಟಿ ಪುಡಿ ಮಾಡಿದ, ಚಕ್ಕೆ, ಲವಂಗ, ಏಲಕ್ಕಿ, ಕಾಳು ಮೆಣಸು, ಜೀರಿಗೆ, ಸೋಂಪು ಹಾಕಿ ಹುರಿಯಿರಿ.

ನಂತರ ಇದಕ್ಕೆ ಈರುಳ್ಳಿ ಸೇರಿಸಿ ಹುರಿಯಿರಿ. ಇದಾದ ಬಳಿಕ, ಕ್ಯಾರೆಟ್, ಬೀನ್ಸ್, ಬಟಾಣಿ, ಶುಂಠಿ- ಬೆಳ್ಳುಳ್ಳಿ- ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಹುರಿಯಿರಿ. ಈಗ ಪಾಲಕ್ ಪೇಸ್ಟ್ ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ಹುರಿದುಕೊಳ್ಳಿ. ಇದಕ್ಕೆ ಅಕ್ಕಿ ಮಿಕ್ಸ್ ಮಾಡಿ. ಇದಕ್ಕೆ ಅರಿಶಿನ ಪುಡಿ, ಗರಂ ಮಸಾಲೆ ಪುಡಿ, ಸಕ್ಕರೆ- ಉಪ್ಪು, ನೀರು ಸೇರಿಸಿ ಮಿಕ್ಸ್ ಮಾಡಿ, ಮೂರು ವಿಶಲ್ ಹೊಡೆಸಿದ್ರೆ, ಪಲಾವ್ ರೆಡಿ.

- Advertisement -

Latest Posts

Don't Miss