ಉತ್ತರ ಭಾರತದಲ್ಲಿ ತಯಾರಿಸಲಾಗುವ ಈ ಚಾಟ್ ಕರ್ನಾಟಕದಲ್ಲಿ ಸಿಗೋದು ಅಪರೂಪದಲ್ಲೇ ಅಪರೂಪ. ಆದ್ರೆ ಇದನ್ನ ತಯಾರಿಸೋದು ತುಂಬಾ ಈಸಿ. ಹಾಗಾಗಿ ನಾವಿಂದು ರಗ್ಡಾ ಪ್ಯಾಟ್ಟೀಸ್ ತಯಾರಿಸೋದು ಹೇಗೆ..? ಇದಕ್ಕೆ ಬೇಕಾಗುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ..
ರುಚಿಕರವೂ ಹೌದು, ಆರೋಗ್ಯಕರವೂ ಹೌದು ಈ ಪ್ರೋಟಿನ್ ಪಲಾವ್..
ಬೇಕಾಗುವ ಸಾಮಗ್ರಿ: ರಗ್ಡಾ ಮಾಡಲು, ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಎರಡು ಪಲಾವ್ ಎಲೆ, 2ಏಲಕ್ಕಿ-ಲವಂಗ- ಚಕ್ಕೆ, ಕಾಲು ಸ್ಪೂನ್ ಜೀರಿಗೆ, ಕಾಲು ಸ್ಪೂನ್ ಸೋಂಪು, ಒಂದು ಸ್ಪೂನ್ ಬೆಳ್ಳುಳ್ಳಿ- ಶುಂಠಿ- ಹಸಿಮೆಣಸಿನಕಾಯಿ ಪೇಸ್ಟ್, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ- ಧನಿಯಾಪುಡಿ, ಗರಂ ಮಸಾಲೆ ಪುಡಿ- ಜೀರಿಗೆ ಪುಡಿ- ಚಾಟ್ ಮಸಾಲೆ ಪುಡಿ, ಎರಡು ಬೇಯಿಸಿದ ಆಲೂಗಡ್ಡೆ, ಒಂದು ಕಪ್ ನೆನೆಸಿಟ್ಟ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು.
ಪೆಟ್ಟೀಸ್ ಮಾಡಲು, 3 ಬೇಯಿಸಿದ ಆಲೂಗಡ್ಡೆ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ- ಧನಿಯಾಪುಡಿ, ಗರಂ ಮಸಾಲೆ ಪುಡಿ- ಜೀರಿಗೆ ಪುಡಿ- ಚಾಟ್ ಮಸಾಲೆ ಪುಡಿ, ಕೊಂಚ ಬ್ರೆಡ್ ಕ್ರಂಬ್ಸ್, ಕರಿಯಲು ಅಥವಾ ತವ್ವಾ ಫ್ರೈ ಮಾಡಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಗಾರ್ನಿಶ್ ಮಾಡಲು: ಹುಳಿ ಚಟ್ನಿ, ಗ್ರೀನ್ ಚಟ್ನಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೋ, ಒಂದು ಕಪ್ ಸೇವ್, ಖಾರಾ ಬೂಂದಿ ಮತ್ತು ಖಾರಾ ಕಾರ್ನ್ ಫ್ಲೇಕ್ಸ್ ಮಿಕ್ಸ್.
ರೆಸ್ಟೋರೆಂಟ್ ರೀತಿಯ ಚೀಸ್ ಸ್ಯಾಂಡ್ವಿಚ್ ಮನೆಯಲ್ಲೇ ತಯಾರಿಸಿ..
ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ಕುಕ್ಕರ್ ಇಟ್ಟು, ಎಣ್ಣೆ ಅಥವಾ ತುಪ್ಪ ಹಾಕಿ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಸೋಂಪು, ಹಿಂಗು ಹಾಕಿ ಹುರಿಯಿರಿ. ನಂತರ ಈರುಳ್ಳಿ, ಶುಂಠಿ- ಬೆಳ್ಳುಳ್ಳಿ- ಹಸಿ ಮೆಣಸಿನ ಪೇಸ್ಟ್ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ, ಖಾರದಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಹುರಿದ ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ.
ಇದಕ್ಕೆ ನೆನೆಸಿಟ್ಟ ಬಟಾಣಿ ಸೇರಿಸಿ, ಅವಶ್ಯಕತೆ ಇದ್ದಷ್ಟು ನೀರು ಹಾಕಿ, 4 ವಿಶಿಲ್ ಬರಿಸಿ. ಈಗ ಇದಕ್ಕೆ ಮತ್ತೊಂದು ಕಪ್ ನೀರು , ಜೊತೆಗೆ ಮೊದಲನೇ ಬೇಯಿಸಿಟ್ಟುಕೊಂಡ ಎರಡು ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಹಾಕಿ, ಕೊಂಚ ಬೇಯಿಸಿ. ಇದನ್ನ ರಗ್ಡಾ ಅಂತಾರೆ. ಈಗ ಪ್ಯಾಟ್ಟೀಸ್ ತಯಾರಿಸಿ.
ಪಾನೀಪುರಿಗೆ ಬೇಕಾಗುವ ಜೀರಾಪಾನಿ ಟೇಸ್ಟಿಯಾಗಿರಬೇಕಾ..? ಹಾಗಾದ್ರೆ ಹೀಗೆ ತಯಾರಿಸಿ..
2ರಿಂದ 3 ಬೇಯಿಸಿದ ಆಲೂಗಡ್ಡೆ, ಒಂದು ಕಪ್ ನೆನೆಸಿಟ್ಟುಕೊಂಡ ಅವಲಕ್ಕಿ, ಉಪ್ಪು, ಅರಿಷಿನ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ ಹಾಕಿ ಮಿಕ್ಸ್ ಮಾಡಿ. ಈಗ ಎಣ್ಣೆ ಕಾಯಿಸಿ, ಪ್ಯಾಟ್ಟೀಸನ್ನು ಬ್ರೆಡ್ ಕ್ರಂಬ್ಸ್ನಲ್ಲಿ ಕವರ್ ಮಾಡಿ, ಫ್ರೈ ಮಾಡಿ. ಈಗ ವೆಜ್ ಕಬಾಬ್ನಂತಿರುವ ಪೆಟ್ಟೀಸ್ ರೆಡಿ.
ಒಂದು ಪ್ಲೇಟ್ಗೆ ಪೆಟ್ಟೀಸ್ ಹಾಕಿ, ಅದರ ಮೇಲೆ ರಗ್ಡಾ ಹಾಕಿ. ಇದರ ಮೇಲೆ ಗ್ರೀನ್ ಚಟ್ನಿ ಮತ್ತು ಹುಳಿ ಚಟ್ನಿ, ಈರುಳ್ಳಿ, ಟೊಮೆಟೋ, ಸೇವ್, ಖಾರಾ ಬೂಂದಿ, ಖಾರಾ ಕಾರ್ನ್ ಫ್ಲೇಕ್ಸ್ನಿಂದ ಗಾರ್ನಿಶ್ ಮಾಡಿ, ಸರ್ವ್ ಮಾಡಿ.