ತಲೆ ಕೂದಲು ಉದುರುವ ಸಮಸ್ಯೆ ಈಗ ಕಾಮನ್ ಆಗಿ ಬಿಟ್ಟಿದೆ. ಅದಕ್ಕೆ ಪರಿಹಾರ ಕೂಡ ಇದೆ. ಆದ್ರೆ ಇಂದಿನ ಗಡಿಬಿಡಿ ಜಗತ್ತಿನಲ್ಲಿ ಯಾರೂ ಆ ಪರಿಹಾರವನ್ನು ಕಂಡುಕೊಳ್ಳಲು ಹೋಗೋದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿ, ಈ ಸಮಸ್ಯೆಯನ್ನು ಇನ್ನೂ ಹೆಚ್ಚು ಮಾಡಿಕೊಂಡು, ಕೊರಗುತ್ತಾರೆ. ಅಂಥವರಿಗಾಗಿ ನಾವಿಂದು ಕೇವಲ 3 ವಸ್ತು ಬಳಸಿ, ತಯಾರಿಸಬಹುದಾದ ಎಣ್ಣೆ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..
ಒಂದು ಬಾಟಲಿ ತೆಂಗಿನ ಎಣ್ಣೆ, 4 ಟೆಬಲ್ ಸ್ಪೂನ್ ಮೆಂತ್ಯೆ ಕಾಳು, 4 ಟೇಬಲ್ ಸ್ಪೂನ್ ಕಲೋಂಜಿ. ಈ ಮೂರನ್ನೂ ಬಳಸಿ, ಒಂದು ಎಣ್ಣೆ ತಯಾರಿಸಬೇಕು. ಮೊದಲು ಕಲೋಂಜಿ ಮ್ತು ಮೆಂತ್ಯೆ ಬಳಸಿ, ಗ್ರೈಂಡ್ ಮಾಡಿ, ಪುಡಿ ಮಾಡಿ. ಈ ತರಿತರಿಯಾದ ಪುಡಿಯನ್ನು ಒಂದು ಗಾಜಿನ ಬಾಟಲಿಗೆ ಹಾಕಿ. ಇದರಲ್ಲಿ ತೆಂಗಿನ ಎಣ್ಣೆ ತುಂಬಿಸಿ. ಇದನ್ನು 20 ದಿನವಾದರೂ ಬಿಸಿಲಿಗೆ ಇಡಿ. ಮೊದಲನೇಯ ದಿನಕ್ಕಿಂತ 20ನೇಯ ದಿನಕ್ಕೆ ಎಣ್ಣೆ ಎಲ್ಲ ಅಂಶವನ್ನು ಹೀರಿಕೊಂಡು, ತನ್ನ ಬಣ್ಣ ಬದಲಾಯಿಸಿರುತ್ತದೆ.
ಈ ಸಾತ್ವಿಕ ಜ್ಯೂಸ್ಗಳನ್ನು ನೀವೂ ಒಮ್ಮೆ ತಯಾರಿಸಿ ನೋಡಿ..
ಇದು ಬೇಗ ಉತ್ತಮ ರಿಸಲ್ಟ್ ನೀಡುವ ಎಣ್ಣೆ. ನಿಮಗೆ ಇಷ್ಟು ದಿನ ಕಾಯುವ ತಾಳ್ಮೆ ಇಲ್ಲದಿದ್ದಲ್ಲಿ, ನೀವು ಈ ಮೂರು ವಸ್ತುವನ್ನು ಸೇರಿಸಿ, ಕುದಿಸಿ, ಆರಿಸಿ, ಪ್ರತಿದಿನ ಬಳಸಬಹುದು. ಆದ್ರೆ ಬಿಸಿಲಿನಲ್ಲಿ ಕಾದ ಎಣ್ಣೆ ಹೆಚ್ಚು ಎಫೆಕ್ಟಿವ್ ಆಗಿರುತ್ತದೆ. ಈ ಎಣ್ಣೆಯನ್ನು ರಾತ್ರಿ ತಲೆಗೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ, ಬೆಳಿಗ್ಗೆ ಕೆಮಿಕಲ್ ಇಲ್ಲದ ಶ್ಯಾಂಪೂ ಬಳಸಿ, ತಲೆ ಸ್ನಾನ ಮಾಡಿ. ವಾರಕ್ಕೆ 2ರಿಂದ 3 ಬಾರಿ ಹೀಗೆ ಮಾಡಿದ್ರೆ ಉತ್ತಮ.