ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 2

ಕಳೆದ ಭಾಗದಲ್ಲಿ ನಾವು, ಯಾವ ಸಮಯದಲ್ಲಿ ಮೌನ ವಹಿಸಬಾರದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 4 ವಿಷಯಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದಿನ ಭಾಗವಾಗಿ, ಇನ್ನುಳಿದ 4 ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 1

ಐದನೇಯದಾಗಿ ನಿಮ್ಮ ತಂದೆ- ತಾಯಿಯ ಬಗ್ಗೆ ಯಾರಾದರೂ ಮನಸ್ಸಿಗೆ ಬಂದಂತೆ ಮಾತನಾಡಿದರೆ, ಅಲ್ಲೇ ಅವರಿಗೆ ಸರಿಯಾಗಿ ಬೈದು ಬುದ್ಧಿ ಕಲಿಸಬೇಕು. ಅದು ಯಾರೇ ಆಗಿರಲಿ, ನಿಮ್ಮ ಮಕ್ಕಳು, ನಿಮ್ಮ ಜೀವನ ಸಂಗಾತಿ, ಅಥವಾ ನಿಮ್ಮ ಸಂಬಂಧಿಕರು, ಸ್ನೇಹಿತರು ಯಾರೇ ಆಗಲಿ, ನಿಮ್ಮ ತಂದೆ ತಾಯಿಯ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಲ್ಲಿ, ಅಂಥವರಿಗೆ ಸರಿಯಾದ ಪಾಠ ಕಲಿಸಬೇಕು.

ಆರನೇಯದಾಗಿ ನಿಮ್ಮ ಗುರು ಮತ್ತು ನಿಮ್ಮ ಧರ್ಮವನ್ನು ಯಾರು ನಿಂದಿಸುತ್ತಾರೋ, ಅವರಿಗೆ ಎದುರಿನಿಂದಲೇ ತಿಳಿಹೇಳಬೇಕು. ನಿಮ್ಮ ಮಾತು ಕಠೋರವಾಗಿರದಿದ್ದರೂ, ಅದು ಇನ್ನೊಮ್ಮೆ ನಮ್ಮ ಧರ್ಮದ ಬಗ್ಗೆ ಮಾತನಾಡಬಾರದು ಅನ್ನೋ ರೀತಿ ಇರಬೇಕು. ಇಲ್ಲವಾದಲ್ಲಿ, ಅದುರಿನವರು ಸದರ ಸಿಕ್ಕ ರೀತಿ, ಬಾಯಿಗೆ ಬಂದಂತೆ ಮಾತನಾಡುತ್ತಾರೆ.

ನಮಗೆ ಪೂರ್ವ ಜನ್ಮದ ನೆನಪು ಯಾಕೆ ಇರೋದಿಲ್ಲಾ ಅಂತಾ ಗೊತ್ತಾ..?

ಏಳನೇಯದಾಗಿ ನಿಮ್ಮ ಶತ್ರು ನಿಮಗೆ ಸಂಕಟ ತಂದೊಡ್ಡಿದಾಗ. ನಿಮಗೆ ಶತ್ರುವಿದ್ದು, ಅವನು ತನ್ನಷ್ಟಕ್ಕೆ ತಾನಿದ್ದರೆ ಉತ್ತಮ. ಆದರೆ ನಿಮಗೆ ಪದೇ ಪದೇ ಕಷ್ಟ ಕೊಡುತ್ತಿದ್ದಲ್ಲಿ, ನೀವು ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕಾಗುತ್ತದೆ. ಇಲ್ಲವಾದಲ್ಲಿ, ನೀವು ಪಶ್ಚಾತಾಪ ಪಡಬೇಕಾಗುತ್ತದೆ.

ಎಂಟನೇಯದಾಗಿ ನಿಮ್ಮ ಮಕ್ಕಳು ಅಡ್ಡ ದಾರಿ ಹಿಡಯುತ್ತಿದ್ದಾರೆ, ಅಥವಾ ನಿಮ್ಮ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ನಿಮಗೆ ಗೊತ್ತಾಗಿದ್ದಲ್ಲಿ, ನೀವು ಅವರಿಗೆ ಕಠಿಣ ಶಿಕ್ಷೆ ಕೊಡಲೇಬೇಕಾಗುತ್ತದೆ. ಮಕ್ಕಳು, ಚಿಕ್ಕವರು, ಬುದ್ಧಿ ಇಲ್ಲದವರು ಎಂದು ತಿಳಿದು, ನೀವು ಸುಮ್ಮನಾದರೆ, ಮುಂದೆ ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಇಂಥ ಮಕ್ಕಳು ಹೆತ್ತ ಅಪ್ಪ ಅಮ್ಮನಿಗೆ ಗೌರವಿಸುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳು ತಪ್ಪು ಮಾಡುವ ಮುನ್ನವೇ ಅವರನ್ನು ತಡೆಯುವ ಪ್ರಯತ್ನ ಮಾಡಿ.

About The Author