Saturday, June 21, 2025

Latest Posts

ಉತ್ತರ ಭಾರತದ ಸ್ನ್ಯಾಕ್ಸ್ ಮೇಥಿ ಮಟರಿ ರೆಸಿಪಿ..

- Advertisement -

ಬೇಕಾಗುವ ಸಾಮಗ್ರಿ: 4 ಸ್ಪೂನ್ ತುಪ್ಪ, ಒಂದು ಕಪ್ ಸಣ್ಣಗೆ ಹೆಚ್ಚಿದ ಮೆಂತ್ಯೆ, ಒಂದುವರೆ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ರವೆ, ಎರಡು ಸ್ಪೂನ್ ಕಾರ್ನ್ ಫ್ಲೋರ್, ತರಿ ತರಿಯಾಗಿ ಪುಡಿದ ಕಾಳುಮೆಣಸು, ಕಾಲು ಸ್ಪೂನ್ ಜೀರಿಗೆ, ಎಳ್ಳು, 1 ಸ್ಪೂನ್ ಸಕ್ಕರೆ ಪುಡಿ, ಉಪ್ಪು, ಕೊಂಚ ಹಿಂಗು, ಚಿಟಿಕೆ ಅರಿಶಿನ, ಅವಶ್ಯಕತೆ ಇದ್ದಷ್ಟು ಖಾರದ ಪುಡಿ, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ 2 ಸ್ಪೂನ್ ತುಪ್ಪ ಹಾಕಿ, ಮೆಂತ್ಯೆ ಸೊಪ್ಪು ಹುರಿಯಿರಿ. ಮೆಂತ್ಯೆ ಸೊಪ್ಪಿನ ಹಸಿ ವಾಸನೆ ಹೋಗಿ, ಅದರ ಕಹಿ ಕೂಡ ಕಡಿಮೆಯಾದಾಗ ಗ್ಯಾಸ್ ಆಫ್ ಮಾಡಿ. ಈಗ ಒಂದು ಮಿಕ್ಸಿಂಗ್ ಬೌಲ್‌ಗೆ ಗೋಧಿ ಹಿಟ್ಟು, ರವೆ, ಕಾರ್ನ್‌ ಫ್ಲೋರ್, ಕಾಳುಮೆಣಸು, ಜೀರಿಗೆ, ಎಳ್ಳು, ಸಕ್ಕರೆ ಪುಡಿ, ಹಿಂಗು, ಅರಿಶಿನ, ಖಾರದ ಪುಡಿ, ಉಪ್ಪು ಮತ್ತು ಮೊದಲೇ ಹುರಿದಿಟ್ಟುಕೊಂಡ ಮೆಂತ್ಯೆಯನ್ನ ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಈ ವೇಳೆ 2 ಸ್ಪೂನ್ ತುಪ್ಪ ಸೇರಿಸಿ.

ಈ ಹಿಟ್ಟನ್ನು 20 ನಿಮಿಷ ಮುಚ್ಚಿ ಬದಿಗಿರಿಸಿ. ನಂತರ ಚಪಾತಿ ಆಕಾರದಲ್ಲಿ ಲಟ್ಟಿಸಿ, ಚೌಕಾಕಾರ ಅಥವಾ ಗೋಲಾಕಾರದಲ್ಲಿ ಇದನ್ನ ಕತ್ತರಿಸಿ, ಎಣ್ಣೆಯಲ್ಲಿ ಕರೆದರೆ, ಮೇಥಿ ಮಟರಿ ರೆಡಿ.

ಬೆಳ್ಳುಳ್ಳಿಯನ್ನು ಯಾವ ರೀತಿ ಸೇವಿಸಿದರೆ ಉತ್ತಮ..?

ಹಲಸಿನ ಹಣ್ಣಿನ ಸೇವನೆಯಿಂದಾಗುವ ಲಾಭಗಳನ್ನು ಕೇಳಿದ್ರೆ ಆಶ್ಚರ್ಯಪಡ್ತೀರಾ..

- Advertisement -

Latest Posts

Don't Miss