Friday, July 11, 2025

Latest Posts

ಈ ಭೂಮಿಯ ಮೇಲೆ ಮನುಷ್ಯ ಜನ್ಮ ತಾಳಿದ್ದು ಹೇಗೆ..?

- Advertisement -

ಈ ಭೂಮಿಯ ಮೇಲೆ ಮನುಷ್ಯ ಜನ್ಮ ತಾಳಿದ್ದು ಹೇಗೆ ಎಂಬ ಪ್ರಶ್ನೆಗೆ ಹಲವರು ಉತ್ತರ ಹುಡುಕುವ ಪ್ರಯತ್ನ ಮಾಡಿರುತ್ತಾರೆ. ಹಿಂದೂಗಳ ಪ್ರಕಾರ ದೇವರು ಮನು ಮತ್ತು ಶತರೂಪಾ ಎಂಬ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿದ. ಅವರಿಂದಲೇ ಮಾನವರು ಜನ್ಮ ತಾಳಿದರು ಎಂದು ಹೇಳುತ್ತಾರೆ. ಕ್ರೈಸ್ತರಲ್ಲಿ ಆ್ಯಡಮ್ ಮತ್ತು ಹೀವ್‌ನಿಂದ ಮನುಷ್ಯ ಜನ್ಮವಾಯಿತು ಎನ್ನುತ್ತಾರೆ. ಇನ್ನು ವಿಜ್ಞಾನದ ತರ್ಕ ಬೇರೆ ರೀತಿ ಇದೆ.

ಬ್ರಹ್ಮ, ವಿಷ್ಣು, ಮಹೇಶ್ವರರ ಜನ್ಮದ ಬಳಿಕ, ಈ ಲೋಕದಲ್ಲಿ ಉಳಿದವರ ಜನ್ಮವಾಯಿತು ಎಂದು ಹಿಂದೂ ಪುರಾಣದಲ್ಲಿ ಹೇಳಲಾಗಿದೆ. ಬ್ರಹ್ಮ ದೇವರು ಗಿಡ, ಮರ, ಪ್ರಾಣಿ, ಪಕ್ಷಿ, ಕೀಟ ಎಲ್ಲವನ್ನೂ ಸೃಷ್ಟಿಸಿದ. ಇದಾದ ಬಳಿಕ ಮನು ಮತ್ತು ಶತರೂಪಾ ಎಂಬ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿದ. ಅವರಿಬ್ಬರಿಗೂ ಮತ್ತೊಂದು ಜೀವವನ್ನು ಸೃಷ್ಟಿಸುವ ಬಗ್ಗೆ ಯೋಚನೆಯೇ ಇರಲಿಲ್ಲ. ಆದರೆ ಸರ್ಪವೊಂದು ಬಂದುಸ ಸಂತಾನೋತ್ಪತ್ತಿಯ ಗುಟ್ಟು ಹೇಳಿತು. ಇದರಿಂದ ಕೋಪಗೊಂಡ ದೇವರು ನಿನ್ನ ಕುಲದವರೆಲ್ಲರಿಗೂ ಬಾಯಿ ಬರದಿರಲಿ, ನೀನು ಮಾಡಿದ ತಪ್ಪಿಗೆ ನಿನ್ನ ಕುಲದವರೆಲ್ಲ ಕೈ ಕಾಲಲಿಲ್ಲದೇ, ತೆವಳಿಕೊಂಡಿರಲಿ ಎಂದು ಶಪಿಸಿದನಂತೆ.

ಇನ್ನು ಕೆಲವು ಧರ್ಮಗಳ ಪ್ರಕಾರ, ನೀರಿನಿಂದಲೇ ಎಲ್ಲ ರೀತಿಯ ಜೀವಿಗಳೂ ಹುಟ್ಟಿಕೊಂಡವು ಎಂದು. ಕೆಲ ವಿಜ್ಞಾನಿಗಳ ಪ್ರಕಾರ, ಕೊಳೆತ ವಸ್ತು, ಮಣ್ಣು, ಕೆಸರಿನಿಂದ ಹೇಗೆ ಕೀಟಗಳು ಉತ್ಪತ್ತಿಯಾಗುತ್ತದೆಯೋ, ಅದೇ ರೀತಿ ಮನುಷ್ಯನೂ ಉತ್ಪತ್ತಿಯಾಗಿರಬಹುದು ಎಂದು. ಅಲ್ಲದೇ ವಾನರ, ಚಿಂಪಾಂಜಿಗಳ ವಿಕಸಿತ ರೂಪವೇ ಮನುಷ್ಯನೆಂದು ಕೂಡ ಹೇಳಲಾಗುತ್ತದೆ.

ರೆಡಿಯೇಶನ್ ಎಫೆಕ್ಟ್ ಆಗಬಾರದು ಅಂದ್ರೆ ಮೊಬೈಲ್, ಲ್ಯಾಪ್ಟಾಪ್ ಹೇಗೆ ಬಳಸಬೇಕು..?

‘ಹೆಡ್‌ಬುಷ್ ಚಿತ್ರದ ವಿವಾದಕ್ಕೆ ತೆರೆ ಬಿದ್ದಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ’

- Advertisement -

Latest Posts

Don't Miss