ನಾವು ನೀವೆಲ್ಲ ನಾರ್ಮಲ್ ಜೇನುತುಪ್ಪವನ್ನು ನೋಡಿದ್ದೇವೆ. ಸೇವಿಸಿದ್ದೇವೆ. ಆದ್ರೆ ನೀವು ಎಂದಾದರೂ ಬಿಳಿ ಜೇನುತುಪ್ಪವನ್ನು ನೋಡಿದ್ದೀರಾ..? ಅಥವಾ ಸೇವಿಸಿದ್ದೀರಾ..? ಹಲವರು ಈ ಬಗ್ಗೆ ಕೇಳಿರುವುದೇ ಇಲ್ಲ. ಹಾಗಾಗಿ ನಾವಿಂದು ಬಿಳಿ ಜೇನುತುಪ್ಪ ಎಲ್ಲಿ ಸಿಗುತ್ತದೆ. ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಬಿಳಿ ಜೇನುತುಪ್ಪವನ್ನು ಔಷಧಿಗಾಗಿ ಬಳಸಲಾಗುತ್ತದೆ. ಹಲವು ಕಂಪೆನಿಗಳು ಮಾತ್ರೆಗಳನ್ನು ತಯಾರಿಸುವಾಗ ಈ ಬಿಳಿ ಜೇನುತುಪ್ಪವನ್ನು ಬಳಸುತ್ತಾರೆ. ಗ್ರಾಮೀಣ ಭಾಗಗಲ್ಲಿ ನೀವು ಬಿಳಿ ಜೇನುತುಪ್ಪವನ್ನು ಪಡೆಯಬಹುದು.
ನಾನ್ ವೆಜ್ ತಿನ್ನದವರು ಇವುಗಳನ್ನು ತಿಂದರೆ ಪ್ರೊಟೀನ್ ಸಿಗುತ್ತದೆ…!
ಬಿಳಿ ಜೇನುತುಪ್ಪವನ್ನು ಸಣ್ಣ ಪ್ರಮಾಣದಲ್ಲಿ ಪ್ರತಿದಿನ ಸೇವಿಸಿದ್ದಲ್ಲಿ, ಅದು ನಿಮ್ಮ ದೇಹಕ್ಕೆ ಶಕ್ತಿ ಕೊಡುತ್ತದೆ. ನಿಮಗೆ ಪದೇ ಪದೇ ಸುಸ್ತಾಗುತ್ತಿದ್ದು, ಕೆಲಸ ಮಾಡಲು ಕೂಡ ಶಕ್ತಿ ಇಲ್ಲವೆಂದಲ್ಲಿ ನೀವು ಪ್ರತೀದಿನ ಕೊಂಚ ಕೊಂಚ ಬಿಳಿ ಜೇನುತುಪ್ಪ ಸೇವಿಸಿದ್ದಲ್ಲಿ, ನಿಮ್ಮ ದೇಹದಲ್ಲಿನ ನಿಶ್ಯಕ್ತಿ ಕಡಿಮೆಯಾಗುತ್ತದೆ.
ಎರಡನೇಯ ಪ್ರಯೋಜನವೆಂದರೆ, ನೀವು ಬಿಳಿ ಜೇನುತುಪ್ಪವನ್ನು ನಿಮ್ಮ ಮುಖಕ್ಕೆ ಹಚ್ಚಿ ಮಸಾಜ್ ಮಾಡಿದ್ದಲ್ಲಿ, ನಿಮ್ಮ ತ್ವಚೆಯ ಮೇಲಿರುವ ಕಲೆ, ಗುಳ್ಳೆಗಳು ಮಾಯವಾಗುತ್ತದೆ. ನಿಮ್ಮ ತ್ವಚೆ ಸಾಫ್ಟ್ ಆಗುತ್ತದೆ.
ಬೇಗ ಗರ್ಭಧಾರಣೆ ಮಾಡಬೇಕೆನ್ನುವವರು ಈ ಆಹಾರವನ್ನು ತಿನ್ನಿ..
ಮೂರನೇಯದಾಗಿ ಯಾರ ದೇಹದಲ್ಲಿ ರಕ್ತದ ಪ್ರಮಾಣ, ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಿರುತ್ತದೆಯೋ, ಅವರು ಕೊಂಚ ಈ ಜೇನುತುಪ್ಪವನ್ನು ತಿಂದರೆ, ಅವರ ದೇಹದಲ್ಲಿರುವ ರಕ್ತ ಶುದ್ಧವಾಗಿರುತ್ತದೆ. ಮತ್ತು ರಕ್ತದ ಪ್ರಮಾಣವೂ ಹೆಚ್ಚುತ್ತದೆ.
ನಾಲ್ಕನೇಯದಾಗಿ ಬಿಳಿ ಜೇನುತುಪ್ಪದ ಸೇವನೆಯಿಂದ ನಿಮ್ಮ ಕೂದಲು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತದೆ. ಕೂದಲ ಬುಡ ಗಟ್ಟಿಯಾಗುತ್ತದೆ. ಹೆಚ್ಚು ಕೂದಲು ಉದುರುವುದಿಲ್ಲ. ಅಲ್ಲದೇ ಕಣ್ಣಿನ ಆರೋಗ್ಯವೂ ಉತ್ತಮವಾಗಿರುತ್ತದೆ. ದೃಷ್ಟಿದೋಷ ಬರಬಾರದು. ನಿಮ್ಮ ಕಣ್ಣು ಸ್ಪಷ್ಟವಾಗಿ ಕಾಣಬೇಕು ಎಂದಲ್ಲಿ ನೀವು ದಿನವೂ ಕೊಂಚ ಕೊಂಚ ಬಿಳಿ ಜೇನುತುಪ್ಪ ತಿನ್ನಬೇಕು.