ಈ ಹಿಂದಿನ ಭಾಗದಲ್ಲಿ ನಾವು ಮನುಷ್ಯ ತನ್ನ ಜೀವನದಲ್ಲಿ ಬಿಡಬೇಕಾದ 17 ಚಟಗಳಲ್ಲಿ 12 ಚಟಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಇನ್ನು 5 ಚಟಗಳ ಬಗ್ಗೆ ಹೇಳಲಿದ್ದೇವೆ..
ಹದಿಮೂರನೇಯ ಚಟ ಕೇರ್ಲೆಸ್ ಆಗಿರುವುದು. ಕೆಲವರು ಯಾವುದೇ ಕೆಲಸ ಮಾಡುವುದಿದ್ದರೂ, ಅದರಿಂದ ಏನಾಗಬಹುದು, ನಷ್ಟವಾದರೆ ಏನು ಮಾಡಬಹುದು, ಇತ್ಯಾದಿ ವಿಷಯವನ್ನು ಯೋಚಿಸುತ್ತಾರೆ. ಆದ್ರೆ ಇನ್ನು ಕೆಲವರು ತಾವೇನು ಮಾಡುತ್ತಿದ್ದೆವೋ, ಅದರ ಬಗ್ಗೆ ಅರಿವಿಲ್ಲದೇ, ಏನಾಗತ್ತೋ ಆಗ್ಲಿ ಅನ್ನೋ ಸ್ವಭಾವದವರಿರ್ತಾರೆ. ಹಾಗೆ ಮಾಡುವುದೇ ಕೇರ್ಲೆಸ್ ಸ್ವಭಾವ. ಎಲ್ಲಾ ವಿಷಯವನ್ನು ಸಲೀಸಾಗಿ ತೆಗೆದುಕೊಂಡರೆ, ಜೀವನದಲ್ಲಿ ತೊಂದರೆಯುಂಟಾಗುತ್ತದೆ. ಹಾಗಾಗಿ ಎಲ್ಲ ವಿಷಯದಲ್ಲೂ ಕೇರ್ಲೆಸ್ ಆಗಿರಬೇಡಿ..
ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 3
ಹದಿನಾಲ್ಕನೇಯ ಚಟ ನಿಮಗಿಷ್ಟವಾಗದ ಕೆಲಸ ಮಾಡೋದು. ಕೆಲವರು ಯಾರದ್ದೋ ಒತ್ತಾಯದ ಮೇಲೆ, ತಮಗಿಷ್ಟವಿಲ್ಲದ ಕೆಲಸ ಮಾಡುತ್ತಾರೆ. ಅಥವಾ ಅಪ್ಪ ಅಮ್ಮನ ಒತ್ತಾಯದ ಮೇಲೆ ಆಸಕ್ತಿಯೇ ಇಲ್ಲದ ವಿದ್ಯೆ ಕಲಿಯುತ್ತಾರೆ. ಇದು ಸಮಯ ವ್ಯರ್ಥ ಮಾಡುವ ಕೆಲಸ. ಹಾಗಾಗಿ ನಿಮಗೇನು ಕೆಲಸ ಮಾಡಬೇಕೋ, ಅದನ್ನೇ ಮಾಡಿ ಹೊರತು. ಬೇರೆಯವರು ಹೇಳಿದ್ದಲ್ಲ.
ಹದಿನೈದನೇಯ ಚಟ ಶಾರ್ಟ್ಕಟ್ ದಾರಿ ಹಿಡಿಯುವುದು. ಉದಾಹರಣೆಗೆ ಒಂದು ಕೆಲಸವನ್ನು ಕಲಿಯಬೇಕೆಂದರೆ, ಅಥವಾ ವಿದ್ಯೆ ಕಲಿಯಬೇಕೆಂದರೆ ನೀವು ಒಂದು ವರ್ಷ ಕಷ್ಟ ಪಡಬೇಕಾಗುತ್ತದೆ. ಆದ್ರೆ ಒಂದು ವರ್ಷದ ತನಕ ಕಾಾಯುವ ತಾಳ್ಮೆ ನಿಮಗಿರುವುದಿಲ್ಲ. ಹಾಗಾಗಿ ನೀವು ಒಂದು ತಿಂಗಳಲ್ಲೇ ಕಲಿಯಲು ಶಾರ್ಟ್ಕಟ್ ದಾರಿ ಹುಡುಕುತ್ತೀರಿ. ಇದು ತಪ್ಪು ಯಾವುದನ್ನು ಎಷ್ಟು ಸಮಯದಲ್ಲಿ ಕಲಿಯಬೇಕೋ, ಅಷ್ಟೇ ಸಮಯ ಅದಕ್ಕೆ ಮೀಸಲಿಡಬೇಕು.
ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 2
ಹದಿನಾರನೇಯ ಚಟ ನೀವು ಪ್ರತಿಕ್ರಿಯಿಸುವ ರೀತಿಯನ್ನು ಬದಲಿಸುವುದು. ನಿಮ್ಮನ್ನು ಯಾರಾದರೂ ಮಾತನಾಡಿಸಿದರೆ, ನಿಮ್ಮ ಪ್ರತಿಕ್ರಿಯೆ ಸೌಮ್ಯವಾಗಿರಬೇಕು. ನಿಮ್ಮ ಪ್ರತಿಕ್ರಿಯೆ ಕಂಡು ಎದುರಿಗಿದ್ದವರು, ನೀವು ಎಷ್ಟು ಚೆನ್ನಾಗಿ ಮಾತನಾಡುತ್ತೀರಿ ಎನ್ನಬೇಕು. ಅದನ್ನು ಬಿಟ್ಟು, ಅನಾಗರಿಕರಂತೆ ಎಂದಿಗೂ ಮಾತನಾಡದಿರಿ. ಪ್ರತಿಕ್ರಿಯಿಸದಿರಿ. ಇದರಿಂದ ಇತರರಿಗೆ ನಿಮ್ಮ ಮೇಲಿರುವ ಗೌರವ ಕಡಿಮೆಯಾಗುತ್ತದೆ.
ಹದಿನೇಳನೇಯ ಚಟ ಮತ್ತು ಕೊನೆಯ ಕೆಟ್ಟ ಚಟ ಅಂದ್ರೆ, ಮದ್ಯಪಾನ, ಧೂಮಪಾನ, ಹೆಣ್ಣಿನ ಸಹವಾಸ, ಮೋಸ ಮಾಡುವುದು, ಸುಳ್ಳು ಹೇಳುವುದು, ದರೋಡೆ ಇತ್ಯಾದಿ. ಈ ಎಲ್ಲ ಕೆಟ್ಟ ಚಟದಿಂದ ನಿಮ್ಮ ಜೀವನವೇ ಹೇಳಾಗಬಹುದು.




