ಈ ದೇವರಿಗೆ ಮದ್ಯಪಾನವನ್ನು ನೈವೇದ್ಯವಾಗಿ ನೀಡಲಾಗುತ್ತದೆ..

ಹಿಂದೂ ಧರ್ಮದಲ್ಲಿ ದೇವರಿಗೆ ಹಣ್ಣು ಹಂಪಲು, ಅನ್ನ, ಸಿಹಿ ತಿಂಡಿ, ಹೀಗೆ ಹಲವು ರೀತಿಯ ಅಡುಗೆಗಳನ್ನ ನೈವೇದ್ಯವನ್ನಾಗಿ ಇಡಲಾಗುತ್ತದೆ. ಕೆಲವೊಮ್ಮೆ ಸಕ್ಕರೆ, ಹಾಲು, ಜೇನುತುಪ್ಪ ಹೀಗೆ ಸಣ್ಣ ಸಣ್ಣ ಪದಾರ್ಥವನ್ನ ಸಹ ನೈವೇದ್ಯಕ್ಕಿಡಲಾಗುತ್ತದೆ. ಆದ್ರೆ ಭಾರತದ ಒಂದು ದೇವಸ್ಥಾನದಲ್ಲಿ ದೇವರಿಗೆ ಮದ್ಯವನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ. ಯಾವುದು ಆ ದೇವಸ್ಥಾನ, ಯಾಕೆ ಆ ದೇವಸ್ಥಾನದಲ್ಲಿ ದೇವರಿಗೆ ಮದ್ಯವನ್ನು ಅರ್ಪಿಸಲಾಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ಪವನಪುತ್ರ ಹನುಮಾನ್ ಬಳಿ ಗಧೆ ಹೇಗೆ ಬಂತು..? ಅದನ್ನು ಕೊಟ್ಟಿದ್ದು ಯಾರು…?

ಉತ್ತರ ಭಾರತದಲ್ಲಿರುವ ಕಾಲ ಭೈರವನಿಗೆ ಮದ್ಯದ ನೈವೇದ್ಯ ಮಾಡಲಾಗುತ್ತದೆ. ಮಧ್ಯ ಪ್ರದೇಶದ ಉಜ್ಜೇಯಿನಿಯಲ್ಲಿರುವ ಕಾಲ ಭೈರವ ದೇವಸ್ಥಾನದಲ್ಲಿ, ಮದ್ಯ ನೈವೇದ್ಯ ಮಾಡಲಾಗುತ್ತದೆ. ಯಾಕೆ ಇಲ್ಲಿ ಮದ್ಯ ನೈವೇದ್ಯ ಮಾಡಲಾಗುತ್ತದೆ ಎಂದರೆ, ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ನಾಶ ಮಾಡುವ ಸಲುವಾಗಿ ಈ ನೈವೇದ್ಯ ಮಾಡಲಾಗುತ್ತದೆ.

ಕೆಲವರು ಕುಡಿತದ ಚಟ ಬಿಡಿಸುವುದಕ್ಕೆ, ಕಾಲ ಭೈರವನಿಗೆ ಮದ್ಯವನ್ನು ನೈವೇದ್ಯ ಮಾಡುತ್ತಾರೆ. ಇಲ್ಲಿಗೆ ಬರುವ ಭಕ್ತಾದಿಗಳು, ಹಣ್ಣು- ಕಾಯಿ, ಹೂವಿನೊಂದಿಗೆ ಮದ್ಯವನ್ನ ಕೂಡ ತರುತ್ತಾರೆ. ನಾವು ನೀವು ಕೆಲವು ದೇವಸ್ಥಾನಗಳ ಹೊರಗೆ ದೇವರಿಗೆ ನೈವೇದ್ಯ ಮಾಡಲು ತೆಂಗಿನಕಾಯಿ, ಹೂವು ಹಣ್ಣು ಇಟ್ಟಿರುವುದನ್ನು ನೋಡಿರುತ್ತೇವೆ.

ಅಪ್ಪ ಅಮ್ಮನಿಗಿಂತ ಮಿಗಿಲಾದ ದೇವರಿಲ್ಲ ಅಂತಾ ಹೇಳೋದ್ಯಾಕೆ ಗೊತ್ತಾ..?

ಅದೇ ರೀತಿ ಈ ದೇವಸ್ಥಾನದಲ್ಲಿ ಕಾಲ ಭೈರವನ ದೇವಸ್ಥಾನದಲ್ಲಿ ನೈವೇದ್ಯ ಮಾಡಲೆಂದೇ, ಹೊರಗೆ ತರಹೇವಾರಿ ಮದ್ಯ ಮಾರಾಟ ಮಳಿಗೆ ಹಾಕಲಾಗಿದೆ. ಇನ್ನು ಮದ್ಯವನ್ನು ಚಿಕ್ಕ ಪ್ಲೇಟ್‌ನಲ್ಲಿ ಹಾಕಿ, ದೇವರ ಬಾಯಿಗೆ ಇಟ್ಟು ಮದ್ಯವನ್ನು ದೇವರಿಗೆ ಕುಡಿಸಲಾಗತ್ತೆ. ಹಾಗೆ ಕುಡಿಸಿದ ಮದ್ಯ ಎಲ್ಲಿ ಹೋಗುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ.

About The Author