Friday, June 20, 2025

Latest Posts

ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟವೇನು..?

- Advertisement -

ಡ್ರೈಫ್ರೂಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಅದರಲ್ಲೂ ಗೋಡಂಬಿ ದ್ರಾಕ್ಷಿ ಅಂದ್ರೆ ಇನ್ನೂ ಹೆಚ್ಚು ಪ್ರೀತಿ. ಪಾಯಸ, ಸಿಹಿ ತಿಂಡಿಗಳಲ್ಲಿ ಸಿಗುವ ಗೋಡಂಬಿಯನ್ನ ಹೆಕ್ಕಿ ತಿನ್ನುವವರೇ ಜಾಸ್ತಿ. ಹಾಗಾದ್ರೆ ಗೋಡಂಬಿ ತಿಂದ್ರೆ ಆರೋಗ್ಯಕ್ಕೆ ಲಾಭವೋ ನಷ್ಟವೋ..? ಗೋಡಂಬಿಯನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು..? ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಎಷ್ಟು ಲಾಭ ಉಂಟು ಗೊತ್ತಾ..?

ತೂಕ ಕಡಿಮೆ ಮಾಡಿಕೊಳ್ಳಲು ಇಚ್ಚಿಸುವವರು, ಪ್ರತಿದಿನ 4ರಿಂದ 5 ಗೋಡಂಬಿಯನ್ನು ತಿನ್ನಬೇಕು. ಗೋಡಂಬಿ ತಿನ್ನುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಲ್ಲದೇ, ಹಸಿವು ಕೂಡ ಕಡಿಮೆಯಾಗುತ್ತದೆ. ಹಾಗಾಗಿ ಇದು ತೂಕ ಇಳಿಸಲು ಸಹಾಯಕವಾಗಿದೆ.

ಗೋಡಂಬಿ ಸಮಸ್ಯೆಯಿಂದ ಹೃದಯ ಸ್ವಾಸ್ಥ್ಯದಿಂದ ಇರುತ್ತದೆ. ಹೃದಯ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಹಾಗಾಗಿ ಪ್ರತಿದಿನ 4 ಗೋಡಂಬಿಯನ್ನು ತಿನ್ನಬೇಕು.

ಇಸಬಗೋಲನ್ನು ಹೇಗೆ ಸೇವಿಸಬೇಕು..? ಇದನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು..?

ಗೋಡಂಬಿಯನ್ನು ಮಿತವಾಗಿ ತಿಂದ್ರೆ, ಮೂಳೆ ಗಟ್ಟಿಯಾಗಿರುತ್ತದೆ. ಕೈ ಕಾಲು ನೋವು ಬರುವುದಿಲ್ಲ. ಯಾಕಂದ್ರೆ ಗೋಡಂಬಿಯಲ್ಲಿ ಕಾಪರ್ ಅಂಶವಿದ್ದು, ಇದು ಮೂಳೆಯ ಆರೋಗ್ಯವನ್ನು ಚೆನ್ನಾಗಿ ಇಟ್ಟಿರುತ್ತದೆ.

ಇನ್ನು ಅಗತ್ಯಕ್ಕಿಂತ ಹೆಚ್ಚು ಗೋೠಂಬಿ ತಿನ್ನುವುದರಿಂದ ಹೆಣ್ಣು ಮಕ್ಕಳಿಗೆ ಬಿಳಿ ಪದರ ಸಮಸ್ಯೆ ಉಂಟಾಗುತ್ತದೆ. ಹೊಟ್ಟೆ ನೋವು ಬರಬಹುದು. ಪಿತ್ತ ಸಮಸ್ಯೆಯೂ ಉಂಟಾಗುತ್ತದೆ. ಹಾಗಾಗಿ ಪ್ರತಿದಿನ 4ರಿಂದ 5 ಗೋಡಂಬಿ ತಿನ್ನುವುದೇ ಹೆಚ್ಚು. ಅದಕ್ಕಿಂತ ಹೆಚ್ಚಿನ ಗೋಡಂಬಿ ಸೇವನೆ ಬೇಡ. ಇನ್ನು ನಿಮಗೆ ಗೋಡಂಬಿ ತಿಂದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.

- Advertisement -

Latest Posts

Don't Miss