ಚಳಿಗಾಲದಲ್ಲಿ ಶೇಂಗಾ ಚಿಕ್ಕಿ ಸೇವನೆ ಮಾಡುವುದು ಎಷ್ಟು ಒಳ್ಳೆಯದು ಗೊತ್ತಾ..?

ಚಳಿಗಾಲ ಶುರುವಾಗಿದೆ. ಈ ಸಮಯದಲ್ಲಿ ಶೀತ ಶುರುವಾಗುವುದು, ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದೆಲ್ಲ ಆಗೋದು ಕಾಮನ್. ಹಾಗಾಗಿ ಈ ಸಮಯದಲ್ಲಿ ನಾವು ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ಅದರಲ್ಲೂ ಕೊಂಚ ಉಷ್ಣವಾಗಿರುವ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಆಹಾರವನ್ನೇ ತಿನ್ನಬೇಕು. ಅಂಥ ಆಹಾರಗಳಲ್ಲಿ ಶೇಂಗಾ ಚಿಕ್ಕಿ ಕೂಡ ಒಂದು. ಚಳಿಗಾಲದಲ್ಲಿ ಶೇಂಗಾವನ್ನ ರಾತ್ರಿ ನೆನೆ ಹಾಕಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಅಂತಾ ಹೇಳಲಾಗತ್ತೆ. ಇದರ ಬದಲು ನೀವು ಪ್ರತಿದಿನ ಒಂದು ಚಿಕ್ಕಿಯನ್ನ ಕೂಡ ತಿನ್ನಬಹುದು. ಹಾಗಾದ್ರೆ ಚಳಿಗಾಲದಲ್ಲಿ ಶೇಂಗಾ ಚಿಕ್ಕಿಯನ್ನ ತಿನ್ನುವುದರಿಂದ ಆಗುವ ಲಾಭವೇನು ಅೞತಾ ತಿಳಿಯೋಣ ಬನ್ನಿ..

ಊಟವಾದ ಬಳಿಕ ಸಿಹಿ ತಿನ್ನುವ ಪದ್ಧತಿ ಆರೋಗ್ಯಕ್ಕೆಷ್ಟು ಮಾರಕ ಗೊತ್ತಾ..?

ನೀವು ನಿಮ್ಮ ಮಕ್ಕಳಿಗೆ ಬಿಸ್ಕೀಟ್, ಚೊಕೋಲೆಟ್ಸ್, ಕೇಕ್, ಕುಕೀಸ್ ಕೊಡುವ ಬದಲು, ಒಂದು ಶೇಂಗಾ ಚಿಕ್ಕಿ ಕೊಡಿ. ಇದು ರುಚಿಕರವೂ ಆಗಿದೆ. ಆರೋಗ್ಯಕರವೂ ಆಗಿದೆ. ಇದರಲ್ಲಿ ಕಡಿಮೆ ಕ್ಯಾಲೋರೀಸ್‌ ಇದೆ. ಫೈಬರ್, ಪ್ರೋಟೀನ್ ಇದೆ. ಅಲ್ಲದೇ ಶಕ್ತಿಯುತ ಆಹಾರವಾಗಿದೆ. ಕ್ಯಾಲ್ಶಿಯಂ ಸತ್ವದಿಂದ ಕೂಡ ಶೇಂಗಾ ಚಿಕ್ಕಿ ಸೇವನೆಯಿಂದ ದೇಹದಲ್ಲಿ ಕಬ್ಬಿಣಾಂಶ ಹೆಚ್ಚುತ್ತದೆ.

ಕಬ್ಬಿಣಾಂಶ ಹೆಚ್ಚಿದಾಗ, ಆರೋಗ್ಯ ವೃದ್ಧಿಯಾಗತ್ತೆ. ಕೂದಲು ಉದುರುವ ಸಮಸ್ಯೆ ನಿಲ್ಲುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಿಮೋಗ್ಲೇಬಿನ್ ಪ್ರಮಾಣ ಹೆಚ್ಚುತ್ತದೆ. ರಕ್ತ ಶುದ್ಧಿಗೊಳಿಸುವುದರಲ್ಲಿ, ರಕ್ತದಸಂಚಾರ ಸರಾಗಗೊಳಿಸುವುದರಲ್ಲಿಯೂ ಇದು ಸಹಕಾರಿಯಾಗಿದೆ. ಹಾಗಾಗಿಯೇ ಗರ್ಭಿಣಿಯರು ಕೂಡ ಪ್ರತಿದಿನ ಒಂದು ಶೇಂಗಾ ಚಿಕ್ಕಿ ಸೇವನೆ ಮಾಡಬೇಕು ಅಂತಾ ಹೇಳೋದು.

ಪ್ರತಿದಿನ ರಾತ್ರಿ ಪಾದಕ್ಕೆ ಎಣ್ಣೆಯ ಮಸಾಜ್ ಮಾಡಿ, ಸಾಕಷ್ಟು ಆರೋಗ್ಯ ಲಾಭ ಪಡೆಯಿರಿ..

ಆದ್ರೆ ಒಂದು ಮುಖ್ಯವಾದ ವಿಷಯವನ್ನ ನೆನಪಿನಲ್ಲಿಡಿ. ನಿಮಗೆ ಹೊಟ್ಟೆ ನೋವಿನ ಸಮಸ್ಯೆ, ಪಿತ್ತದ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ, ಶೇಂಗಾ ಚಿಕ್ಕಿ ಸೇವನೆ ಮಾಡಲೇಬೇಡಿ.

About The Author