ಶಿವ ಅರ್ಧ ನಾರೀಶ್ವರನ ರೂಪ ತಾಳಿ, ಹೆಣ್ಣು ಗಂಡು ಇಬ್ಬರೂ ಸಮಾನರು ಎಂದು ಸಾರಿದ. ಅಲ್ಲದೇ ಶಿವ ಅರ್ಧ ನಾರೀಶ್ವರನ ರೂಪ ತಾಳಿದಾಗಲೇ, ಮೊದಲ ಬಾರಿ ಲೋಕದಲ್ಲಿ ಹೆಣ್ಣಿನ ಸೃಷ್ಟಿಯಾಗಿದ್ದು. ಹಾಗಾದ್ರೆ ಯಾಕೆ ಶಿವ ಅರ್ಧ ನಾರೀಶ್ವರನ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಇಂಥ ಸ್ಥಿತಿಯಲ್ಲಿ ಯಾವಾಗಲೂ ಮೌನ ವಹಿಸಿ..
ಇಡೀ ಜಗತ್ತಿನಲ್ಲಿ ಮೊದಲು ಉದ್ಭವವಾದವನೇ ಶಿವ ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ. ನಂತರ ಶಿವ, ವಿಷ್ಣು ಮತ್ತು ಬ್ರಹ್ಮನನ್ನು ಸೃಷ್ಟಿಸಿದ. ಬ್ರಹ್ಮನಿಗೆ ಸೃಷ್ಟಿ ರಚಿಸುವ ಜವಾಬ್ದಾರಿ ವಹಿಸಿದ. ಆದರೆ ಬ್ರಹ್ಮನಿಗೆ ಚಿಂತೆ ಶುರುವಾಯಿತು. ನಾನು ಸೃಷ್ಟಿಸಿರುವ ಜೀವಿಗಳು ಕೆಲ ಸಮಯದಲ್ಲೇ ನಾಶವಾಗುತ್ತದೆ. ಅದನ್ನ ಪದೇ ಪದೇ ಸೃಷ್ಟಿಸಬೇಕು. ಇದೊಂದು ಸಮಸ್ಯೆಯಾಗಿದೆ. ಶಿವನ ಬಳಿಯೇ ಇದಕ್ಕೆ ಪರಿಹಾರ ಕೇಳಬೇಕು ಎಂದು ನಿರ್ಧರಿಸಿದರು.
ಶಿವನ ಬಳಿ ಬ್ರಹ್ಮದೇವರು, ಸೃಷ್ಟಿಯ ರಚನೆಯ ಬಳಿ ಕೇಳಿದಾಗ, ಶಿವ ಬ್ರಹ್ಮನ ಎದುರು ಅರ್ಧ ನಾರೀಶ್ವರನ ರೂಪ ತಾಳಿದ. ಶಿವನ ಅರ್ಧ ಭಾಗ ಪುರುಷ ರೂಪದಲ್ಲಿ ಇನ್ನರ್ಧ ಭಾಗ ನಾರಿಯ ರೂಪದಲ್ಲಿತ್ತು. ಇದನ್ನು ಕುರಿತು ಹೇಳಿದ ಶಿವ, ನನ್ನ ಅರ್ಧ ಭಾಗ ಪುರುಷನಿದ್ದಾನೆ. ಇನ್ನರ್ಧ ಭಾಗ ಶಕ್ತಿ ಇದ್ದಾಳೆ. ಇದೇ ರೀತಿ ಪುರುಷ ಮತ್ತು ಸ್ತ್ರೀ ಸೇರಿದಾಗ, ಸ್ತ್ರೀಯ ಗರ್ಭದಲ್ಲಿ ಶಿಶುವಿನ ಜನನವಾಗುತ್ತದೆ. ಇದೇ ರೀತಿ ಸೃಷ್ಟಿ ಮುಂದುವರಿಯುತ್ತದೆ ಎನ್ನುತ್ತಾನೆ.
ಈ ವಿಷಯವನ್ನ ಗಮನದಲ್ಲಿಟ್ಟುಕೊಂಡರೆ ನೀವು ಲೀಡರ್ ಆಗುವುದನ್ನ ಯಾರೂ ತಡೆಯಲಾಗುವುದಿಲ್ಲ..
ಶಿವನ ಅರ್ಧ ನಾರೀಶ್ವರ ರೂಪವನ್ನು ಶಿವ ಶಕ್ತಿ ಎಂದು ಕರೆಯಲಾಗುತ್ತದೆ. ಇವರನ್ನೇ ಇಂದು ಮಂಗಳಮುಖಿಯರು ಅಂತಾ ಕರಿಯುವುದು. ಓರ್ವ ಹೆಣ್ಣು ಗರ್ಭವತಿಯಾದಾಗ, ಮೂರು ತಿಂಗಳು ತುಂಬುವುದರೊಳಗಾಗಿ ಆಕೆ ಯಾವುದಾದರೂ ರೋಗಕ್ಕೆ ತುತ್ತಾದರೆ, ಅಥವಾ ಯಾವುದಾದರೂ ಮಾತ್ರೆಯನ್ನ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಅದರಿಂದ ಶಿಶುವಿನ ಹಾರ್ಮೋನಿನಲ್ಲಿ ವ್ಯತ್ಯಾಸವಾಗುತ್ತದೆ. ಅದೇ ಮಗು, ಹುಟ್ಟುತ್ತ ಒಂದು ಲಿಂಗವಾಗಿ ಹುಟ್ಟಿ, ಬೆಳೆದು ಇನ್ನೊಂದು ಲಿಂಗವಾಗಿ ಪರಿವರ್ತನೆಯಾಗುತ್ತದೆ. ಇದೇ ರೀತಿ ಮಂಗಳಮುಖಿಯರು ಹುಟ್ಟುತ್ತಾರೆ. ಇವರನ್ನ ಅರ್ಧನಾರೀಶ್ವರನ ರೂಪವೆಂದು ಹೇಳುತ್ತಾರೆ.