ಇವತ್ತು ನಾವು ಕ್ಯಾರೆಟ್ ಹಲ್ವಾ ಮಾಡೋದು ಹೇಗೆ ಅಂತಾ ತಿಳಿಸಿಕೊಡಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಕಪ್ ಕ್ಯಾರೆಟ್ ತುರಿ, ಒಂದು ಚಿಕ್ಕ ಕಪ್ ತುಪ್ಪ, ಬೇಕಾದಷ್ಟು ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿ, ಪಿಸ್ತಾ, 3 ಕಪ್ ಹಾಲು, ಕಾಲು ಕಪ್ ಸಕ್ಕರೆ, ಕೊಂಚ ಕುಟ್ಟಿ ಪುಡಿ ಮಾಡಿದ ಏಲಕ್ಕಿ, ಬೇಕಾದಲ್ಲಿ ಕೊಂಚ ಖೋವಾ ಬಳಸಬಹುದು.
ಮಾಡುವ ವಿಧಾನ: ಮೊದಲು ಗೋಡಂಬಿ, ಬಾದಾಮಿ ಮತ್ತು ಪಿಸ್ತಾವನ್ನು ಸಣ್ಣಗೆ ಕತ್ತರಿಸಿ, ತುಪ್ಪದಲ್ಲಿ ಹುರಿದು ಬದಿಗಿರಿಸಿಕೊಳ್ಳಿ. ನಂತರ ಅದೇ ಪ್ಯಾನ್ಗೆ ಮತ್ತೆ ಕೊಂಚ ತುಪ್ಪ ಹಾಕಿ, ತುರಿದ ಕ್ಯಾರೆಟ್ ಹುರಿದು ಕೊಳ್ಳಿ. 5 ನಿಮಿಷ ಕ್ಯಾರೆಟ್ ಹುರಿದ ಬಳಿಕ, ಅದರ ಕಲರ್ ಲೈಟ್ ಆಗುತ್ತದೆ. ಅದಕ್ಕೆ ಹಾಲು ಹಾಕಿ, 10 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ತಳ ತಾಗದಂತೆ ನೋಡಿಕೊಳ್ಳಿ.
ನಂತರ ಸಕ್ಕರೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ, ಮತ್ತೆ 5 ನಿಮಿಷ ಬೇಯಿಸಿ. ನಂತರ ಖೋವಾ, ಡ್ರೈಫ್ರೂಟ್ಸ್ ಮತ್ತು ಏಲಕ್ಕಿ ಪುಡಿ ಹಾಕಿದ್ರೆ, ಕ್ಯಾರೆಟ್ ಹಲ್ವಾ ರೆಡಿ..