ಮಕ್ಕಳಿಗೆ ಮನೆಯಲ್ಲೇ ಈ ರುಚಿಕರ ಕುರುಕಲು ತಿಂಡಿ ಮಾಡಿಕೊಡಬಹುದು..

ನೀವು ಯಾವಾಗಲೂ ಚಕ್ಕಲಿ, ನಿಪ್ಪಟ್ಟು, ಕೊಡುಬಳೆ ಮಾಡಿಕೊಟ್ರೆ. ಮಕ್ಕಳಿಗೆ ಅದನ್ನ ತಿಂದು ತಿಂದು ಬೋರ್ ಬರಬಹುದು. ಹಾಗಾಗಿ ನಾವಿಂದು ಕೆಲವೇ ಕೆಲವು ಸಾಮಗ್ರಿ ಬಳಸಿ, ಬೇಗ ತಯಾರಿಸಬಹುದಾದ, ಆಲೂ ಸ್ನ್ಯಾಕ್ಸ್ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: 2 ಬೇಯಿಸಿದ ಆಲೂಗಡ್ಡೆ, ಕೊಂಚ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಚೀಸ್, ಅರ್ಧ ಸ್ಪೂನ್ ಗಾರ್ಲಿಕ್ ಪೌಡರ್, ಖಾರದ ಪುಡಿ, ಅರ್ಧ ಕಪ್ ಕಾರ್ನ್ ಪುಡಿ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಆಲೂಗಡ್ಡೆಯನ್ನು ಮ್ಯಾಶ್ ಮಾಡಿಕೊಳ್ಳಿ. ಇದಕ್ಕೆ ಕೊತ್ತೊಂಬರಿ ಸೊಪ್ಪು, ಚೀಸ್, ಗಾರ್ಲಿಕ್ ಪೌಡರ್, ಖಾರದ ಪುಡಿ, ಉಪ್ಪು ಹಾಕಿ, ಮಿಕ್ಸ್ ಮಾಡಿ. ನಂತರ ಕಾರ್ನ್ ಪುಡಿ, ಉಪ್ಪು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ. ನಂತರ ಇದಕ್ಕೆ ಚೌಕಾಕಾರದ ಶೇಪ್ ಕೊಟ್ಟು ಕಾದ ಎಣ್ಣೆಯಲ್ಲಿ ಕರಿಯಿರಿ. ಸಾಸ್ ಜೊತೆ ಇದು ಚೆನ್ನಾಗಿರತ್ತೆ.

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

ತರಕಾರಿಯಿಂದ ಪೋಷಕಾಂಶಗಳನ್ನ ಹೀಗೆ ಪಡೆಯಿರಿ..

ಸಕ್ಕರೆ ಬದಲು ನೀವು ಈ 5 ವಸ್ತುಗಳನ್ನ ಬಳಸಬಹುದು..

About The Author