ಇದರ ಮೊದಲ ಭಾಗದಲ್ಲಿ ನಾವು ಶ್ರೀರಾಮ ಮತ್ತು ಲಕ್ಷ್ಮಣ ಕಾಡಿಗೆ ಹೋದ ಬಗ್ಗೆ, ಅಲ್ಲಿ ಕಬಂಧ ಬಾಹು ಸಿಕ್ಕ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಯಾವ ರೀತಿ ಕಬಂಧ ರಾಕ್ಷಸ ಶ್ರೀರಾಮನಿಗೆ ಉಪಕಾರಮ ಮಾಡಿದ ಅನ್ನೋ ಬಗ್ಗೆ ತಿಳಿಯೋಣ..
ಸೀತೆಯನ್ನ ಹುಡುಕಿ ಹೊರಟ ರಾಮ ಲಕ್ಷ್ಮಣರಿಗೆ, ಕಬಂಧ ರಾಕ್ಷಸ ಸಿಕ್ಕುತ್ತಾನೆ. ಅವನು ರಾಮ ಲಕ್ಷ್ಮಣರನ್ನು ನೋಡಿ, ಯಾರೋ ಮಾನವರೆಂದು ತಿಳಿದು ಅವರಿಬ್ಬರನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ. ಆಗ ಇಬ್ಬರೂ ಉಪಾಯ ಮಾಡಿ, ಕಬಂಧನ ಎರಡೂ ಭುಜವನ್ನು ಕತ್ತರಿಸುತ್ತಾರೆ. ಆಗ ಕಬಂಧನಿಗೆ ಅವರಿಬ್ಬರೂ ರಾಮ, ಲಕ್ಷ್ಮಣರೆಂದು ತಿಳಿಯುತ್ತದೆ. ರಾಕ್ಷಸ ಅವರಿಬ್ಬರಿಗೂ ವಂದಿಸಿ, ವಿಷಯವನ್ನ ತಿಳಿಸುತ್ತಾನೆ.
ಆಗ ರಾಮ, ಲಕ್ಷ್ಮಣರು ಸೇರಿ ಕಬಂಧ ಬಾಹುವಿನ ಅಂತ್ಯಸಂಸ್ಕಾರ ಮಾಡುತ್ತಾರೆ. ಮತ್ತೆ ಆ ರಾಕ್ಷಸ, ಗಂಧರ್ವ ರಾಜ ಧನುವಾಗಿ ಪರಿವರ್ತಿತನಾಗುತ್ತಾನೆ. ಆಗ ಅವನು ರಾಮ ಲಕ್ಷ್ಮಣರು ಈ ಕಾಡಿಗೆ ಬರಲು ಕಾರಣ ಕೇಳುತ್ತಾರೆ. ಅದಕ್ಕೆ ರಾಮ ತಾನು ತನ್ನ ಸೀತೆಯನ್ನ ಹುಡುಕಿಕೊಂಡು ಬಂದಿರುವುದಾಗಿ ಹೇಳುತ್ತಾನೆ.
ಆಗ ಧನು, ನೀವು ಈ ಕೆಲಸಕ್ಕಾಗಿ ಸುಗ್ರೀವನ ಸಹಾಯ ತೆಗೆದುಕೊಳ್ಳಬೇಕು. ಅವನೊಬ್ಬನೇ ನಿಮಗೆ ಸೀತೆಯ ಬಳಿ ಹೋಗಲು ಸಹಾಯ ಮಾಡುತ್ತಾನೆ. ಅಲ್ಲದೇ, ಸುಗ್ರೀವ ಕಷ್ಟದಲ್ಲಿದ್ದಾನೆ. ಅವನ ಸಹೋದರ ವಾಲಿ, ಅವನೊಂದಿಗೆ ದುರ್ವ್ಯವಹಾರ ಮಾಡುತ್ತಿದ್ದಾನೆ. ಹಾಗಾಗಿ ಆ ಕಷ್ಟದಿಂದ ಅವನಿಗೆ ಮುಕ್ತಿ ಕೊಡಿಸಿ, ನೀವು ಸುಗ್ರೀವನ ಸ್ನೇಹ ಮಾಡಿ. ಸೀತೆಯನ್ನ ಹುಡುಕಲು ಸಹಾಯ ಕೇಳಬೇಕು ಎನ್ನುತ್ತಾನೆ.
ಆಗ ರಾಮ ಸುಗ್ರೀವನನ್ನು ಹುಡುಕಿ ಹೊರಡುತ್ತಾನೆ. ಸುಗ್ರೀವ ಸಿಕ್ಕ ಬಳಿಕ, ಹನುಮನೂ ಸಿಗುತ್ತಾನೆ. ಹೀಗೆ ಎಲ್ಲರೂ ಸೇರಿ, ರಾವಣನ ಸೇನೆಯೊಂದಿಗೆ ಯುದ್ಧ ಮಾಡಿ, ಸೀತೆಯನ್ನು ಪುನಃ ಅಯೋಧ್ಯೆಗೆ ಕರೆ ತರುತ್ತಾರೆ.