Saturday, April 19, 2025

Latest Posts

ಕರ್ಮ ದೊಡ್ಡದೋ..? ಧರ್ಮ ದೊಡ್ಡದೋ..?

- Advertisement -

ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಅಂದರೆ ಧರ್ಮದ ಪಾಲನೆ ನಾವು ಮಾಡಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರ್ಥ. ಅದೇ ರೀತಿ ಉತ್ತಮ ಕರ್ಮ ಮಾಡಿದರೆ, ನೆಮ್ಮದಿಯಾಗಿ ಜೀವನ ಮಾಡಬಹುದು ಅಂತಾನೂ ಹೇಳಿದ್ದಾರೆ. ಹಾಗಾದ್ರೆ ಕರ್ಮ ದೊಡ್ಡದೋ, ಧರ್ಮ ದೊಡ್ಡದೋ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಕರ್ಮ ದೊಡ್ಡದೋ, ಧರ್ಮ ದೊಡ್ಡದೋ ಎಂಬ ಪ್ರಶ್ನೆಗೆ ಉತ್ತರ ಕರ್ಮ ಧರ್ಮ ಎರಡೂ ದೊಡ್ಡದು. ಆದರೆ ಧರ್ಮವನ್ನ ಪಾಲನೆ ಮಾಡಿದವನಷ್ಟೇ ಒಳ್ಳೆಯ ಕರ್ಮ ಮಾಡಲು ಸಾಧ್ಯ. ಕರ್ಮ ಎಂದರೆ ಕೆಲಸ ಎಂದರ್ಥ. ಧರ್ಮ ಪಾಲನೆ ಎಂದರೆ, ದೇವರಲ್ಲಿ ಭಕ್ತಿ ಶ್ರದ್ಧೆ ಇರುವುದು. ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಇರುವುದು. ಯಾವ ವ್ಯಕ್ತಿ ಧರ್ಮಕ್ಕೆ ಪ್ರಾಶಸ್ತ್ಯ ಕೊಡುವನೋ, ಅವನಿಗೆ ದೇವರ ಮೇಲೆ ನಂಬಿಕೆ ಇರುತ್ತದೆ. ಕೆಟ್ಟ ಕೆಲಸ ಮಾಡಲು ಭಯ ಇರುತ್ತದೆ. ತನ್ನ, ತನ್ನ ಮನೆಯವರ ಗೌರವ ಹಾಳಾಗಬಾರದು ಅನ್ನೋ ಮನೋಭಾವನೆ ಇರುತ್ತದೆ.

ಅಂಥವರು ಕೆಟ್ಟ ಕೆಲಸ ಮಾಡುವುದಿಲ್ಲ. ಹಾಗಾಗಿ ಕರ್ಮಕ್ಕಿಂತ ಮೊದಲು ನಾವು ನಮ್ಮ ಮನೆಯ ಮಕ್ಕಳಿಗೆ ಧರ್ಮದ ಬಗ್ಗೆ ಪಾಠ ಮಾಡಬೇಕು. ಅವರಿಗೆ ಒಳ್ಳೆಯದ್ದು, ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನ ಅರ್ಥ ಮಾಡಿಸಬೇಕು. ಆಗಲೇ ಅವರು ಒಳ್ಳೆಯ ವ್ಯಕ್ತಿಯಾಗೋಕ್ಕೆ ಸಾಧ್ಯ. ನೀವು ಯಾರಾದರೂ ಕೆಟ್ಟ ವ್ಯಕ್ತಿಯನ್ನ ಗಮನಿಸಿ. ಅವನಿಗೆ ದೇವರ ಮೇಲೆ ನಂಬಿಕೆ ಇರುವುದಿಲ್ಲ. ಸಂಸಾರದ ಬಗ್ಗೆ ಪ್ರೀತಿ, ಕಾಳಜಿ ಇರುವುದಿಲ್ಲ. ಅವನು ತನ್ನ ಮನೆಯ ಗುರು ಹಿರಿಯರಿಗೆ ಗೌರವ ಕೊಡುವುದಿಲ್ಲ. ಅವರ ಗೌರವ ಹಾಳಾಗಬಹುದು ಅನ್ನೋ ಚಿಂತೆಯೂ ಅವನಿಗೆ ಇರುವುದಿಲ್ಲ. ಹಾಗಾಗಿ ಧರ್ಮದ ತಿಳುವಳಿಕೆ ಇರುವ ವ್ಯಕ್ತಿ, ಎಂದಿಗೂ ಕೆಟ್ಟ ಕರ್ಮ ಮಾಡಲು ಸಾಧ್ಯವಾಗುವುದಿಲ್ಲ.

ಶ್ರೀಕೃಷ್ಣನಿಗೇಕೆ ಛಪ್ಪನ್ನಾರು ಭೋಜನವನ್ನ ನೈವೇದ್ಯ ಮಾಡಲಾಗತ್ತೆ..?

- Advertisement -

Latest Posts

Don't Miss