ಸಂಜೆಯಾದ ಬಳಿಕ ಟೀ, ಕಾಫಿ ಜೊತೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಎನ್ನಿಸಿದರೆ, ಹಲವರು ಬಜ್ಜಿ ಬೋಂಡಾ ಮಾಡಿ ತಿನ್ನೋದು ಕಾಮನ್. ಆದ್ರೆ ನೀವು ಪಾಪಡಿ ಚಾಟ್ ಮಾಡಿದ್ರೆ, ನಿಮ್ಮ ಮನೆಯವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದ್ರೆ ಪಾಪಡಿ ಚಾಟ್ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, 3 ಸ್ಪೂನ್ ಅಕ್ಕಿಹಿಟ್ಟು, 1 ಸ್ಪೂನ್ ಕಾರ್ನ್ ಫ್ಲೋರ್, ಕಾಲು ಕಪ್ ಕಡಲೆ ಹಿಟ್ಟು, 1 ಸ್ಪೂನ್ ಹಸಿಮೆಣಸು- ಶುಂಠಿ ಪೇಸ್ಟ್, 1 ಸ್ಪೂನ್ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, 2 ಸ್ಪೂನ್ ಎಣ್ಣೆ ಅಥವಾ ತುಪ್ಪ, ಉಪ್ಪು ಇವಿಷ್ಟು ಪಾಪಡಿ ಮಾಡಲು ಬೇಕಾಗುವ ಸಾಮಗ್ರಿ. ಚಾಟ್ ತಯಾರಿಸಲು, 2 ಸಣ್ಣಗೆ ಕತ್ತರಿಸಿದ ಈರುಳ್ಳಿ, 2 ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ. 1 ಕಪ್ ನೆನೆಸಿಟ್ಟುಕೊಂಡ ಹೆಸರು ಕಾಳು, 2 ಸ್ಪೂನ್ ಮೊಸರು, 2 ಸ್ಪೂನ್ ಗ್ರೀನ್ ಚಟ್ನಿ ಮತ್ತು ಸಿಹಿ ಚಟ್ನಿ, ಚಿಟಿಕೆ ಕಪ್ಪುಪ್ಪು, ಚಾಟ್ ಮಸಾಲೆ, ಜೀರಿಗೆ ಪುಡಿ, ಖಾರದ ಪುಡಿ, ಕೊಂಚ ಕೊತ್ತೊಂಬರಿ ಸೊಪ್ಪು.
ಮಾಡುವ ವಿಧಾನ: ಮೊದಲು ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಅದರಲ್ಲಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಕಡಲೆ ಹಿಟ್ಟು, ಕಾರ್ನ್ ಫ್ಲೋರ್, ಹಸಿಮೆಣಸು-ಶುಂಠಿ ಪೇಸ್ಟ್, ಕೊತ್ತೊಂಬರಿಸೊಪ್ಪು, ಉಪ್ಪು, 2 ಸ್ಪೂನ್ ಎಣ್ಣೆ ಹಾಕಿ, ಕೊಂಚ ಕೊಂಚ ನೀರು ಬೆರೆಸುತ್ತ, ಹಿಟ್ಟು ನಾದಿಟ್ಟುಕೊಳ್ಳಿ. 15 ನಿಮಿಷ ಬಿಟ್ಟು, ಆ ಹಿಟ್ಟಿನಿಂದ ಚಪಾತಿ ಲಟ್ಟಿಸಿ, ಪಾನೀಪುರಿ ಆಕಾರದಲ್ಲಿ ಪೂರಿಯನ್ನ ಕಟ್ ಮಾಡಿ. ನಂತರ ಅದಕ್ಕೆ ಫೋರ್ಕ್‌ನಿಂದ ಚುಚ್ಚಿ. ಇಲ್ಲವಾದಲ್ಲಿ ಅದು ಉಬ್ಬಿಕೊಳ್ಳುತ್ತದೆ. ಆಗ ಪಾಪ್ಡಿಯಾಗುವ ಬದಲು, ಪೂರಿಯಾಗುತ್ತದೆ. ಹಾಗಾಗಿ ನೀವು ಹಿಟ್ಟನ್ನು ಚಪಾತಿಯಾಕಾರದಲ್ಲಿ ಲಟ್ಟಿಸಿಕೊಂಡಾಗಲೇ, ಫೋರ್ಕ್‌ನಿಂದ ಚುಚ್ಚಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದರೆ, ಪಾಪ್ಡಿ ರೆಡಿ.
ಈಗ ಈ ಪಾಪ್ಡಿಯನ್ನು ಕೊಂಚವೇ ಪುಡಿ ಮಾಡಿ, ಪ್ಲೇಟ್‌ಗೆ ಹಾಕಿ. ಅದರ ಮೇಲೆ ಆಲೂಗಡ್ಡೆ, ಈರುಳ್ಳಿ, ಹೆಸರು ಕಾಳು, ಮೊಸರು, ಗ್ರೀನ್ ಚಟ್ನಿ ಮತ್ತು ಸಿಹಿ ಚಟ್ನಿ, ಚಿಟಿಕೆ ಕಪ್ಪುಪ್ಪು, ಚಾಟ್ ಮಸಾಲೆ, ಜೀರಿಗೆ ಪುಡಿ, ಖಾರದ ಪುಡಿ, ಕೊಂಚ ಕೊತ್ತೊಂಬರಿ ಸೊಪ್ಪು ಇವೆಲ್ಲವನ್ನೂ ಹಾಕಿದ್ರೆ, ಪಾಪಡಿ ಚಾಟ್ ರೆಡಿ.. ನೀವು ಮೊದಲೇ ಪಾಪಡಿ ಮಾಡಿಟ್ಟುಕೊಂಡರೆ, ತಕ್ಷಣ ಇದನ್ನ ಮಾಡಿ ತಿನ್ನಬಹುದು.
ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 2
ಕಿಡ್ನಿ ಆರೋಗ್ಯವಾಗಿಲ್ಲ ಎಂದಲ್ಲಿ ಇಂಥ ಲಕ್ಷಣಗಳು ಕಂಡುಬರುತ್ತದೆ.. ಭಾಗ 1