Saturday, November 15, 2025

Latest Posts

ಯೂರಿನ್ ಇನ್ಫೆಕ್ಷನ್ಗೆ ಮನೆಯಲ್ಲೇ ಮಾಡಿ ಮದ್ದು..

- Advertisement -

ಯಾವ ನೋವು, ತುರಿಕೆ, ಕಿರಿಕಿರಿಯನ್ನಾದರೂ ತಡೆದುಕೊಳ್ಳಬಹುದು. ಆದರೆ ಈ ಯೂರಿನ್ ಇನ್‌ಫೆಕ್ಷನ್ ಆದಾಗ ಮಾತ್ರ, ನರಕಯಾತನೆಯೇ ಅನುಭವಿಸಬೇಕಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಹಾಗಾಗಿ ನಾವಿಂದು ಯೂರಿನ್ ಸಮಸ್ಯೆ ಬರಬಾರದಂದ್ರೆ ನೀವು ಏನು ಮಾಡಬೇಕು. ಬಂದಾಗ, ಹೇಗೆ ಮನೆಮದ್ದು ಮಾಡಬೇಕು ಅಂತಾ ಹೇಳಲಿದ್ದೇವೆ.

ಯೂರಿನ್ ಇನ್‌ಫೆಕ್ಷನ್ ಬರಬಾರದು ಅಂದ್ರೆ, ನೀವು ಆ ಜಾಗವನ್ನ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ನೀವು ಧರಿಸುವ ಒಳಉಡುಪು ಕೂಡ ಸ್ವಚ್ಛವಾಗಿರಬೇಕು. ನಿಮಗೆ ಮೂತ್ರ ಬಂದಾಗ ಅದನ್ನ ತಡೆದಿಟ್ಟುಕೊಂಡರೂ ಯೂರಿನ್ ಇನ್‌ಫೆಕ್ಷನ್ ಆಗುತ್ತದೆ. ಹಾಗಾಗಿ ಮೂತ್ರ ಬಂದಾಗ, ತಡೆದಿಟ್ಟುಕೊಳ್ಳದೇ, ಮೂತ್ರ ವಿಸರ್ಜನೆ ಮಾಡಿ. ಇನ್ನು ಲೈಂಗಿಕ ಕ್ರಿಯೆಯಾದ ಬಳಿಕ, ಆ ಸ್ಥಳವನ್ನು ಕ್ಲೀನ್‌ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ, ಸೋಂಕು ತಗುಲುತ್ತದೆ. ಇವಿಷ್ಟು ಸರಿಯಾಗಿ ಮಾಡಿದರೆ, ನಿಮಗೆ ಯೂರಿನ್ ಇನ್‌ಫೆಕ್ಷನ್ ಆಗುವುದಿಲ್ಲ.

ಇನ್ನು ನಿಮಗೆ ಯೂರಿನ್ ಇನ್‌ಫೆಕ್ಷನ್ ಇದ್ದರೆ, ಯಾವ ಲಕ್ಷಣಗಳಿರುತ್ತದೆ ಎಂದರೆ, ಆ ಜಾಗದಲ್ಲಿ ಸಿಕ್ಕಾಪಟ್ಟೆ ತುರಿಕೆ ಇರುತ್ತದೆ. ಗುಳ್ಳೆಗಳಾಗುತ್ತದೆ. ಉರಿ ಇರುತ್ತದೆ. ಮೂತ್ರ ಮಾಡುವಾಗ, ಲೈಂಗಿಕ ಕ್ರಿಯೆ ಮಾಡುವಾಗ ಉರಿಯುತ್ತದೆ.

ಇದಕ್ಕೆ ಪರಿಹಾರವೆಂದರೆ, ಚೆನ್ನಾಗಿ ನೀರು, ಎಳನೀರು, ಮೊಸರು, ಮಜ್ಜಿಗೆ ಸೇವಿಸುವುದು. ಇದನ್ನೆಲ್ಲ ಸೇವಿಸುವಾಗ, ನಿಮ್ಮ ದೇಹ ತಂಪಾಗುತ್ತದೆ. ಇದರ ಜೊತೆಗೆ ಟೀ, ಕಾಫಿ, ಮಸಾಲೆ ಪದಾರ್ಥ, ಖಾರಾ ಪದಾರ್ಥಗಳ ಸೇವನೆ ಮಾಡಬಾರದು. ಕಿತ್ತಳೆ, ಬಾಳೆಹಣ್ಣು, ಮೊಸಂಬಿ ಹೀಗೆ ದೇಹಕ್ಕೆ ತಂಪು ನೀಡುವ ಹಣ್ಣುಗಳ ಸೇವನೆ ಮಾಡಿ. ದಾಸವಾಳ ಹೂವಿನ ಚಹಾ ಕುಡಿಯುವುದು ಈ ಸಮಸ್ಯೆಗೆ ಉತ್ತಮವಾದ ಪರಿಹಾರವಾಗಿದೆ.

ಇನ್ನು ಇವೆಲ್ಲವನ್ನೂ ಮಾಡಿದರೂ, ನಿಮಗೆ ಯೂರಿನ್ ಇನ್‌ಫೆಕ್ಷನ್‌ ಕಡಿಮೆಯಾಗಲಿಲ್ಲವೆಂದಲ್ಲಿ, ನೀವು ವೈದ್ಯರ ಬಳಿ ಈ ಬಗ್ಗೆ ವಿಚಾರಿಸಬೇಕು. ಯಾಕಂದ್ರೆ ಕಿಡ್ನಿ ಸಮಸ್ಯೆ ಇದ್ದಾಗಲೂ, ಈ ರೀತಿ ಇನ್‌ಫೆಕ್ಷನ್ ಆಗಬಹುದು. ಹಾಗಾಗಿ ಎರಡು ದಿನವಾದರೂ, ನಿಮ್ಮ ಆರೋಗ್ಯದಲ್ಲಿ ಸ್ವಲ್ಪವೂ ಅಭಿವೃದ್ಧಿಯಾಗದಿದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ.

ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ, ಸೌಂದರ್ಯಕ್ಕೆ ಬೇಕಾದ ಲಾಭ..

ಎಣ್ಣೆಸ್ನಾನ ಮುಖ್ಯ ಅಂತಾ ಹೇಳೋದ್ಯಾಕೆ ಗೊತ್ತಾ..?

ಸಕ್ಕರೆ ಬದಲು ಬೆಲ್ಲವನ್ನು ಬಳಸಿ, ಈ ಆರೋಗ್ಯಕರ ಲಾಭವನ್ನು ಪಡೆಯಿರಿ..

- Advertisement -

Latest Posts

Don't Miss