2028ಕ್ಕೆ ಮತ್ತೆ Congress ಸರ್ಕಾರ ಬರುತ್ತಾ.? Siddaramaiah ಸರ್ಕಾರ 5 ವರ್ಷ ಇರಲ್ವಾ.?

ಖ್ಯಾತ ಜ್ಯೋತಿಷಿ ನಾರಾಯಣರೆಡ್ಡಿ, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದಿದ್ದು,  ಸಿದ್ದರಾಮಯ್ಯ ಸರ್ಕಾರ 5 ವರ್ಷ ಇರುತ್ತಾ ಇಲ್ಲವಾ ಅನ್ನೋ ಬಗ್ಗೆ ಹೇಳಿದ್ದಾರೆ.

ಸರಿಯಾಗಿ ಸರ್ಕಾರ ನಡೆಸಿಕೊಂಡು ಹೋದರೆ ಸಿದ್ದರಾಮಯ್ಯ ಸರ್ಕಾರ ಬರೀ 5 ಅಲ್ಲ. 10 ವರ್ಷಗಳ ಕಾಲ ಇರುತ್ತೆ. ಆದರೆ ಆಪ್ತ ವರ್ಗಗಳಿಂದಲೇ ಕೆಲ ಕುತಂತ್ರಗಳಾಗುವ ಸಾಧ್ಯತೆ ಇದ್ದು, ಇದರಿಂದ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಸ್ತ್ರೀ ಕುತಂತ್ರಗಳಿಂದ ಸಿದ್ದರಾಮಯ್ಯ ಸ್ಥಾನಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಘಳಿಗೆಯ ಪ್ರಕಾರ ಲೆಕ್ಕ ಹಾಕಿದರೆ, ಬೇಡವಾದ ಮಾತಿನಿಂದ ಸಿದ್ದರಾಮಯ್ಯ ಸರ್ಕಾರ ಮುಜುಗರ ಮತ್ತು ತೊಂದರೆಯನ್ನ ಅನುಭವಿಸಬೇಕಾಗುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಮತ್ತು ಬುದ್ಧಿವಂತಿಕೆಯಿಂದ ಸಿದ್ದರಾಮಯ್ಯ ಸರ್ಕಾರ ನಡೆದರೆ, 5 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇರುತ್ತದೆ.

ಜ್ಯೋತಿಷಿಗಳ ಪ್ರಕಾರ, ಯಾವುದೇ ಸಚಿವರು ಅಥವಾ ಶಾಸಕರು ಯೋಚಿಸಿ ಮಾತನಾಡಬೇಕು. ಏಕೆಂದರೆ ಮಾತಿಂದಲೇ ಸರ್ಕಾರ ಅಲುಗಾಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಆಪ್ತ ವರ್ಗಗಳಿಂದಲೇ ಕುತಂತ್ರ ನಡೆಯುವ ಸಾಧ್ಯತೆ ಇದ್ದು, ಅಂಥವರ ಬಳಿ ಎಚ್ಚರಿಕೆಯಿಂದ ಇರಬೇಕು ಎಂದು ಜ್ಯೋತಿಷಿಗಳು ಹೇಳಿದ್ದಾರೆ.

ಅಡುಗೆ ಮನೆಯಲ್ಲಿ ಇಂಥ ಕೆಲಸಗಳನ್ನು ಮಾಡಲೇಬೇಡಿ..

‘ಒಂದರಿಂದ ಒಂದೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ’

ರಸ್ತೆಯಲ್ಲಿ ದುಡ್ಡು ಸಿಕ್ಕರೆ ಅದನ್ನು ಏನು ಮಾಡಬೇಕು..?

About The Author