ಈ ದೇವಸ್ಥಾನದಲ್ಲಿ ರಾಜವಂಶಸ್ಥರಿಗೇ ಪ್ರವೇಶವಿಲ್ಲ.. ಕಾರಣವೇನು..?

Spiritual News: ಓರ್ವ ರಾಜ್ಯದ ರಾಜನಿಗೆ, ಆ ರಾಜ್ಯದಲ್ಲಿರುವ ಎಲ್ಲ ಸಾರ್ವಜನಿಕ ಆಸ್ತಿ ಬಳಸುವ, ಪ್ರವೇಶ ಮಾಡುವ ಹಕ್ಕಿರುತ್ತದೆ. ಆದರೆ ಇಲ್ಲೊಂದು ರಾಜ್ಯದಲ್ಲಿ ರಾಜನಿಗೆ ಅಲ್ಲಿನ ದೇವಸ್ಥಾನವೊಂದಕ್ಕೆ ಪ್ರವೇಶವಿಲ್ಲ. ಹಾಗಾದ್ರೆ ಇದು ಯಾವ ಸ್ಥಳ..? ಯಾವ ದೇವಸ್ಥಾನ..? ಯಾಕೆ ಇಲ್ಲಿನ ರಾಜವಂಶಸ್ಥರಿಗೆ ಈ ದೇವಸ್ಥಾನಕ್ಕೆ ಪ್ರವೇಶವಿಲ್ಲ ಅಂತಾ ತಿಳಿಯೋಣ ಬನ್ನಿ..

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಬುದ್ಧ ನೀಲಕಂಠ ದೇವಸ್ಥಾನಕ್ಕೆ ರಾಜಮನೆತನದವರಿಗೆ ಪ್ರವೇಶವಿಲ್ಲ. ಕಠ್ಮಂಡುವಿನ ಶಿವಪುರಿ ಬೆಟ್ಟದ ತಪ್ಪಲಿನಲ್ಲಿ ಈ ದೇವಸ್ಥಾನವಿದೆ. ಬುದ್ಧ ನೀಲಕಂಠ ದೇವಸ್ತಾನದಲ್ಲಿ ವಾಸುಕಿಯ ಮೇಲೆ ಮಲಗಿರುವ ವಿಷ್ಣುವನ್ನ ಪೂಜಿಸಲಾಗುತ್ತದೆ. ಇಲ್ಲಿ ಯಾಕೆ ರಾಜಮನೆತನದವರಿಗೆ ಪ್ರವೇಶವಿಲ್ಲ ಎಂಬ ಪ್ರಶ್ನೆಗೆ ಉತ್ತರ, ಇವರಿಗೆ ಶಾಪ ತಟ್ಟಿದ ಕಾರಣ, ಈ ದೇವಸ್ಥಾನಕ್ಕೆ ರಾಜವಂಶಸ್ಥರಿಗೆ ಪ್ರವೇಶವಿಲ್ಲ.

ಅಪ್ಪಿತಪ್ಪಿ ಏನಾದರೂ ಇಲ್ಲಿನ ರಾಜವಂಶಸ್ಥರು ಈ ದೇವಸ್ಥಾನಕ್ಕೆ ಒತ್ತಾಯ ಪೂರ್ವಕವಾಗಿ ಹೋಗಿ, ದೇವರ ದರ್ಶನ ಮಾಡಿದ್ದಲ್ಲಿ, ಆ ರಾಜವಂಶಸ್ಥ ಸಾವನ್ನಪ್ಪುತ್ತಾನೆ ಅಂತಾ ಹೇಳಲಾಗುತ್ತದೆ.  ಇದೇ ರಾಜವಂಶಸ್ಥನಾಗಿದ್ದ ಪ್ರತಾಪಮಲ್ಲ, ಜನರು ಈ ಶಾಪ ನೀಡಿದ ಬಳಿಕ, ಕೆಲ ದಿನಗಳಲ್ಲೇ ರಾಜ ಪ್ರತಾಪಮಲ್ಲ ಈ ವಿಗ್ರಹ ದರ್ಶನ ಮಾಡಿದ ಬಳಿಕ ಸಾವನ್ನಪ್ಪಿದ. ಅಂದಿನಿಂದ ರಾಜಮನೆತನದವರು ಬುದ್ಧ ನೀಲಕಂಠನ ದರ್ಶನ ಮಾಡಲು ಹೆದರುತ್ತಾರೆ.

ವಿಚಿತ್ರ ವಿಷಯ ಏನಂದ್ರೆ, ಈ ರಾಜಮನೆತನದವರಿಗೆ ಈ ದೇವರ ದರ್ಶನದ ಭಾಗ್ಯವಿಲ್ಲದಿದ್ದರೂ, ಅವರು ಮನೆಯಲ್ಲಿ ಇದೇ ದೇವರನ್ನು ಪೂಜಿಸುತ್ತಾರೆ.  ವಿಷ್ಣುವನ್ನ ಜನ ಬುದ್ಧ ನೀಲಕಂಠನ ಹೆಸರಿನಿಂದೇಕೆ ಕರೆಯುತ್ತಾರೆ ಎಂಬ ಕಾರಣಕ್ಕೆ ಉತ್ತರ, ಇಲ್ಲಿ ವಿಷ್ಣುವಿನೊಂದಿಗೆ, ಶಿವ ನೆಲೆಸಿದ್ದಾನೆಂಬ ನಂಬಿಕೆ ಇದೆ. ಹಾಗಾಗಿ ಬುದ್ಧನ ರೂಪದಲ್ಲಿರುವ ವಿಷ್ಣುವನ್ನು ಬುದ್ಧ ನೀಲಕಂಠ ದೇವರೆಂದು ಪೂಜಿಸಲಾಗುತ್ತದೆ.

ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಮಹಾತ್ಮೆ..

ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಬಂದು ನೆಲೆಸಿದ್ದು ಹೇಗೆ..?

ಸೂರ್ಯನಾರಾಯಣ ದೇವಸ್ಥಾನದ ಮಣ್ಣಿನ ಹರಕೆಯ ಪ್ರಾಮುಖ್ಯತೆ ಏನು..?

About The Author