ಈ ದೇವಸ್ಥಾನದಲ್ಲಿರುವ ದುರ್ಗಾದೇವಿಯನ್ನು ಎಂದಿಗೂ ಪೂಜಿಸುವುದಿಲ್ಲ.. ಯಾಕೆ ಗೊತ್ತಾ..?

Spiritual News: ಹಿಂದೂ ಸಂಪ್ರದಾಯದಲ್ಲಿ ದುರ್ಗಾದೇವಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ದುರ್ಗೆಯನ್ನು ಆರಾಧಿಸುವರಿಗೆ ಎಂದಿಗೂ ದುರ್ಗತಿ ಬರುವುದಿಲ್ಲವೆಂಬ ನಂಬಿಕೆ ಇದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ದುರ್ಗಾದೇವಿಯನ್ನು ಪೂಜಿಸುವುದಿಲ್ಲ. ಯಾಕೆ ಹೀಗೆ ಅಂತಾ ತಿಳಿಯೋಣ ಬನ್ನಿ..

ಮಧ್ಯಪ್ರದೇಶದ ದೇವಾಸ್ ಎಂಬಲ್ಲಿ ದುರ್ಗಾದೇವಿಯ ದೇವಸ್ಥಾನವಿದೆ. ಆದರೆ ಇಲ್ಲಿ ದುರ್ಗಾದೇವಿಯನ್ನ ಪೂಜಿಸುವುದಿಲ್ಲ. ಆಕೆಗೆ ಎಲ್ಲ ದೇವಸ್ಥಾನಗಳಲ್ಲಿ ದೇವಿಯರಿಗೆ ಪದ್ಧತಿ ಪ್ರಕಾರವಾಗಿ ಪೂಜೆ ಸಲ್ಲುವ ಹಾಗೆ, ಪೂಜೆ ಸಲ್ಲುವುದಿಲ್ಲ. ಇಲ್ಲಿ ಭಕ್ತಾದಿಗಳೇ ಬರುವುದಿಲ್ಲ. ಏಕೆಂದರೆ ಇದೊಂದು ಶಾಪಗ್ರಸ್ತ ದೇವಸ್ಥಾನವಾಗಿದೆ. ಇಲ್ಲಿ ಓರ್ವ ಸೇನಾಪತಿ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಹಾಗಾಗಿ ಜನ ಈ ದೇವಸ್ಥಾನಕ್ಕೆ ಹೋಗಲು ಹೆದರುತ್ತಾರೆ.

ಆ ಸೇನಾಪತಿ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಇಲ್ಲಿ ಪೂಜೆಯನ್ನ ಸ್ಥಗಿತಗೊಳಿಸಲಾಯಿತು. ಹಾಗಾಗಿ ಇದನ್ನು ಶಾಪಗ್ರಸ್ತ ದೇವಿ ದೇವಸ್ಥಾನವೆಂದೇ ಕರೆಯುತ್ತಾರೆ. ಹಾಗಾಗಿ ಜನ ಇಲ್ಲಿ ಬರಲು ಭಯಪಡುತ್ತಾರೆ. ಈ ದೇವಸ್ಥಾನದ ಎದುರಿನಿಂದ ಹೋಗುವವರು, ತಲೆ ತಗ್ಗಿಸಕೊಂಡು ಹೊರಟು ಹೋಗುತ್ತಾರೆ. ದೇವಾಸ್ ರಾಜನು ಹಲವು ವರ್ಷಗಳ ಹಿಂದೆ ಈ ದೇವಸ್ಥಾನವನ್ನು ಕಟ್ಟಿಸಿದ್ದ. ಇದು ಸರಿಯಾದ ಸಮಯದಲ್ಲಿ ಕಟ್ಟದ ಕಾರಣವೋ, ಅಥವಾ ದೇವಸ್ಥಾನ ಕಟ್ಟಿದ ಜಾಗ ಸರಿ ಇಲ್ಲದ ಕಾರಣವೋ, ಅಥವಾ ದೇವಿಯ ಪ್ರತಿಷ್ಠಾನ ಸರಿಯಾಗ ಆಗದ ಕಾರಣವೋ, ಈ ರೀತಿ ಯಾವುದೋ ಒಂದು ಲೋಪವಿತ್ತು. ಈ ಕಾರಣಕ್ಕಾಗಿ ದೇವಸ್ಥಾನ ನಿರ್ಮಾಣವಾದಾಗಿನಿಂದಲೂ, ರಾಜನ ಜೀವನದಲ್ಲಿ ಕೆಟ್ಟ ಘಟನೆಗಳು ನಡೆಯುತ್ತಲೇ ಇದ್ದವು.

ಅರಮನೆಯಲ್ಲಿ ಸಾವು ನೋವು ಸಂಭವಿಸುತ್ತಿದ್ದವು. ರಾಜನ ಮಗಳು ಸೇನಾಪತಿಯನ್ನು ಪ್ರೀತಿಸುತ್ತಿದ್ದಳು. ಈ ವಿಷಯ ರಾಜನಿಗೆ ತಿಳಿದ ಬಳಿಕ, ರಾಜ ಮಗಳನ್ನು ಮತ್ತು ಸೇನಾಪತಿಯನ್ನು ಬೇರೆ ಮಾಡಲು ನೋಡಿದ. ಮಗಳಿಗೆ ಬುದ್ಧಿ ಹೇಳಿದ. ಆದರೂ ಮಗಳು ಕೇಳದಿದ್ದಾಗ, ಮಗಳನ್ನ ಜೈಲಿಗಟ್ಟಿದ. ಸೇನಾಧಿಪತಿಯನ್ನು ಕೆಲಸದಿಂದ ಕಿತ್ತು ಹಾಕಿದ.

ಸೇನಾಪತಿಯನ್ನು ಬಿಟ್ಟಿರಲು ಸಾಧ್ಯವಾಗದೇ, ರಾಜನ ಮಗಳು ಜೈಲಿನಲ್ಲಿ ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ತನ್ನ ಪ್ರಿಯತಮೆ ಸತ್ತ ಸುದ್ದಿ ಕೇಳಿದ ಸೇನಾಧಿಪತಿ, ದೇವಿಯ ದೇವಸ್ಥಾನಕ್ಕೆ ಹೋಗಿ, ಅಲ್ಲಿ ಆತ್ಮಹತ್ಯೆ ಮಾಡಿಕೊಂಡ. ಅಂದಿನಿಂದ ದೇವಾಸ್‌ನ ದುರ್ಗಾದೇವಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ನಿಲ್ಲಿಸಲಾಯಿತು.

ಪೂಜೆ ಸಲ್ಲಿಕೆಯಾಗಲಿಲ್ಲವೆಂದು ದುರ್ಗೆ ಕೋಪ ಮಾಡುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ಇಲ್ಲ. ಏಕೆಂದರೆ, ಅಲ್ಲಿದ್ದ ದುರ್ಗಾದೇವಿ ಮೂರ್ತಿಯನ್ನು ಉಜ್ಜೇಯನಿಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ, ಪೂಜೆ ಸಲ್ಲಿಸಲಾಗುತ್ತಿದೆ.

ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ಮಹಾತ್ಮೆ..

ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಬಂದು ನೆಲೆಸಿದ್ದು ಹೇಗೆ..?

ಸೂರ್ಯನಾರಾಯಣ ದೇವಸ್ಥಾನದ ಮಣ್ಣಿನ ಹರಕೆಯ ಪ್ರಾಮುಖ್ಯತೆ ಏನು..?

About The Author