Monday, June 23, 2025

Latest Posts

ಈ ಪದಾರ್ಥಗಳನ್ನು ನೀವು ಸೇರಿಸಿ ತಿಂದಲ್ಲಿ, ನಿಮ್ಮ ದೇಹದ ಬೊಜ್ಜು ಹೆಚ್ಚಾಗುತ್ತದೆ..

- Advertisement -

Health tips: ನೀವು ತೂಕ ಇಳಿಸಲು ಬಯಸುವವರಾಗಿದ್ದರೆ, ನಿಮ್ಮ ಆಹಾರದಲ್ಲಿ ಕಂಟ್ರೋಲ್ ಇರಬೇಕು. ಆದರೆ ಕೆಲವೊಮ್ಮೆ ಡಯಟ್ ಮಾಡುವವರೂ ಕೂಡ, ಚೀಟಿಂಗ್ ಡೇ ಎಂದು ಕೆಲ ಜಂಕ್ ಫುಡ್ ಸೇವನೆ ಮಾಡುತ್ತಾರೆ. ಇಂದು ನಾವು ಯಾವ ಕಾಂಬಿನೇಷನ್ ಫುಡ್ ತಿಂದರೆ, ದೇಹದ ತೂಕ ಹೆಚ್ಚುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ..

ಚಹಾ ಮತ್ತು ಕುರುಕಲು ತಿಂಡಿ. ಬಿಸಿ ಬಿಸಿ ಚಹಾ ಜೊತೆ, ಬಜ್ಜಿ, ಕಚೋರಿ, ಸಮೋಸಾ ತಿಂದರೆ, ಬೆಸ್ಟ್ ಕಾಂಬಿನೇಷನ್. ಆದರೆ ಇದು ಬರೀ ರುಚಿಗೆ ಮಾತ್ರ. ನಿಮ್ಮ ತೂಕ ಹೆಚ್ಚಾಗಬಾರದು. ನೀವು ಫಿಟ್ ಆಗಿರಬೇಕು ಎಂದಲ್ಲಿ, ಇಂಥ ಕಾಂಬಿನೇಷನ್ ಫುಡ್ ತಿನ್ನಬಾರದು. ಇದರಿಂದ ಬೊಜ್ಜು ಬೆಳೆಯುತ್ತದೆ. ಹಾಗಾಗಿ ನಿಮಗೆ ಚಹಾ ಮತ್ತು ಕುರುಕಲು ತಿಂಡಿ ಇಷ್ಟವಿದ್ದಲ್ಲಿ, ವಾರಕ್ಕೆ ಒಂದು ಬಾರಿ ಮಾತ್ರ ಈ ರೀತಿ ತಿಂಡಿ ಸೇವಿಸಿ.

ಊಟವಾದ ಬಳಿಕ ಸಿಹಿ ತಿಂಡಿ ತಿನ್ನುವುದು. ಹಲವರಿಗೆ ಊಟವಾದ ಬಳಿಕ, ಸಿಹಿ ತಿಂಡಿ ತಿನ್ನುವುದು ಚಟವಾಗಿ ಹೋಗಿದೆ. ಇನ್ನು ಕೆಲವರಿಗೆ ಫ್ಯಾಷನ್ ಆಗಿದೆ. ಆದರೆ ಊಟವಾದ ಬಳಿಕ ಸಿಹಿ ತಿಂಡಿ ತಿನ್ನುವುದರಿಂದ ಬೊಜ್ಜು ಬೆಳೆಯುತ್ತದೆ. ಅದರಲ್ಲೂ ರಾತ್ರಿ ಹೊತ್ತು ಊಟವಾದ ಬಳಿಕ ಸಿಹಿ ತಿನ್ನುವುದು ಒಳ್ಳೆಯದಲ್ಲ. ನಿಮಗೆ ಊಟವಾದ ಬಳಿಕ ಸಿಹಿ ತಿನ್ನಲೇಬೇಕು ಎಂದಲ್ಲಿ ಬೆಲ್ಲ ಸೇವನೆ ಮಾಡಿ.

ಹಾಲು ಮತ್ತು ಬಾಳೆಹಣ್ಣಿನ ಸೇವನೆ. ಹಾಲು, ಸಕ್ಕರೆ, ಬಾಳೆಹಣ್ಣು, ಡ್ರೈಫ್ರೂಟ್ಸ್ ಸೇರಿಸಿ ತಿಂದ್ರೆ, ಸಖತ್ ರುಚಿಯಾಗಿರತ್ತೆ. ಆದರೆ ಇದರ ಸೇವನೆಯಿಂದ ದೇಹದ ತೂಕವೂ ಹೆಚ್ಚುತ್ತದೆ. ಏಕೆಂದರೆ ಇವೆರಡು ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಅದರಲ್ಲೂ ನೀವು ಊಟವಾದ ಬಳಿಕ, ಇದನ್ನು ಸೇವಿಸಿದರೆ, ತೂಕ ಹೆಚ್ಚೋದು ಗ್ಯಾರಂಟಿ.

ಅನ್ನ, ಸಕ್ಕರೆ, ಮೈದಾ ಸೇವನೆ ಹೆಚ್ಚಾದಾಗ. ಅನ್ನ, ಸಕ್ಕರೆ ಮತ್ತು ಮೈದಾದಲ್ಲಿ ಶುಗರ್ ಕಂಟೆಂಟ್ ಹೆಚ್ಚಾಗಿರುತ್ತದೆ. ಇದರಿಂದಲೇ ಬೊಜ್ಜು ಬೆಳೆಯುವುದು. ನೀವು ಪ್ರತಿದಿನ ಅನ್ನದ ಬದಲು ಕುಚಲಕ್ಕಿ ಗಂಜಿ, ಜೋಳದ ರೊಟ್ಟಿ, ರಾಗಿ ರೊಟ್ಟಿ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಕ್ಕರೆ ಬದಲು ಬೆಲ್ಲ ಬಳಸಿ. ಅಥವಾ ಕಲ್ಲು ಸಕ್ಕರೆ ಬಳಸಿ.  ಮೈದಾ ಬದಲು ಗೋಧಿ ಬಳಸಿ.

ಮೂಗುತಿ ಹಾಕುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?

- Advertisement -

Latest Posts

Don't Miss