ಟೀ, ಕಾಫಿ ಚಟ ಬಿಡಿಸಲು ಇದನ್ನು ಸೇವಿಸಿ..

Health Tips: ಟೀ, ಕಾಫಿ ಚಟದ ಬಗ್ಗೆ ನಾವು ಈಗಾಗಲೇ ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಚಹಾ ಅಥವಾ ಕಾಫಿ ಸೇವನೆ ಮಾಡುವವರಿಗೆ ಅದನ್ನು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದರಲ್ಲಿರುವ ಕೆಫಿನ್ ಅಂಶ, ನಾವು ಟೀ, ಕಾಫಿ ಕುಡಿಯುವಂತೆ ಮಾಡುತ್ತದೆ. ಟೀ, ಕಾಫಿ ಸೇವನೆ ಮಾಡಿಲ್ಲವೆಂದರೆ, ತಲೆ ನೋವು ಶುರುವಾಗುತ್ತಿದೆ ಅಂತಾ ಅನ್ನಿಸೋಕ್ಕೆ ಶುರುವಾಗುತ್ತದೆ. ಇಂದು ನಾವು ಟೀ, ಕಾಫಿ ಸೇವನೆಯ ಚಟ ಬಿಡಿಸಲು ಏನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..

ಟೀ ಕುಡಿಯಲೇಬೇಕು ಎನ್ನಿಸಿದ್ದಲ್ಲಿ, ನೀವು ಆಯುರ್ವೇದಿಕ್ ಟೀ, ಗ್ರೀನ್ ಟೀ ಕುಡಿಯಬಹುದು. ಗ್ರೀನ್ ಟೀ ಕುಡಿಯುವುದರಿಂದ ತೂಕ ಇಳಿಯುತ್ತದೆ. ನಿಮ್ಮ ಬಳಿ ಲೆಮನ್ ಗ್ರಾಸ್ ಇದ್ದಲ್ಲಿ, ಇದರಿಂದ ನೀವು ಆಯುರ್ವೇದಿಕ್ ಟೀ ಮಾಡಿ ಕುಡಿಯಬಹುದು. ಇದು ಕೆಲ ದಿನಗಳವರೆಗೆ ನಿಮಗೆ ವಾಕರಿಕೆ ತರಿಸಬಹುದು. ಆದರೆ ಇದು ಪ್ರಾಕ್ಟೀಸ್ ಆದರೆ, ನೀವು ಕುಡಿಯುವ ನಾರ್ಮಲ್ ಟೀ ನಿಮಗೆ ಬೇಡವೆನ್ನಿಸುತ್ತದೆ.

ಕಾಫಿ ಸೇವನೆ ಮಾಡಲೇಬೇಕು ಎನ್ನಿಸುವವರು ಚಕೋರಿ ಪುಡಿ ಬಳಸಿ, ಕಾಫಿ ತಯಾರಿಸಬಹುದು. ಏಕೆಂದರೆ, ಚಕೋರಿ ಪುಡಿ, ಬೇರಿನಿಂದ ಮಾಡಿದ ಪುಡಿಯಾಗಿರುತ್ತದೆ. ಇದು ಥೇಟ್ ಕಾಫಿಯ ಟೇಸ್ಟ್ ಕೊಡುತ್ತದೆ ಹೊರತು, ಕಾಫಿ ಪುಡಿಯಾಗಿರುವುದಿಲ್ಲ. ಇದನ್ನು ಸೇವಿಸುವುದರ ಮೂಲಕ ನೀವು, ಕಾಫಿ ಸೇವನೆಯ ಚಟದಿಂದ ದೂರವಿರಬಹುದು.

ನುಗ್ಗೆಕಾಯಿ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು..

ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?

ಮಿಕ್ಸ್ಡ್ ಫ್ರೂಟ್ಸ್ ರಾಯ್ತಾ ರೆಸಿಪಿ

About The Author