Health Tips: ಮೊದಲೆಲ್ಲ ಹಾರ್ಟ್ ಅಟ್ಯಾಕ್ ಅನ್ನೋದು, 50 ವರ್ಷ ಮೇಲ್ಪಟ್ಟವರಿಗಷ್ಟೇ ಬರುತ್ತಿತ್ತು. ಯಾಕಂದ್ರೆ ಅವರ ಜೀವನ ಜೀವನ ಶೈಲಿ ಅಷ್ಟು ಚೆನ್ನಾಗಿತ್ತು. ಆದರೆ ಇಂದಿನ ಕಾಲದ ತಿಂಡಿ ತಿನಿಸು, ಜೀವನ ಶೈಲಿಯಿಂದಲೇ, ಯುವ ಪೀಳಿಗೆಯವರಲ್ಲೇ ಹಾರ್ಟ್ ಅಟ್ಯಾಕ್ ಬರುತ್ತಿದೆ.
ಹಾಗಾದ್ರೆ ಇಷ್ಟು ಸಣ್ಣ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಬರಲು ಕಾರಣವೇನು ಅಂದ್ರೆ, ಕೊಲೆಸ್ಟ್ರಾಲ್ ಹೆಚ್ಚಾಗುವುದು. ಶುಗರ್, ಬಿಪಿ, ಸ್ಮೋಕಿಂಗ್. ಇವು ನಾಲ್ಕು ಕಾರಣಗಳಿಂದ ಹಾರ್ಟ್ ಅಟ್ಯಾಕ್ ಬರುತ್ತದೆ. ಬಿಡಿ, ಸಿಗರೇಟ್ ಪಾನ್ ಪರಾಗ್, ಗುಟ್ಕಾ ಇಂಥ ಚಟ ಇರುವವರಿಗೆ ಬೇಗ ಹೃದಯಾಘಾತವಾಗುತ್ತದೆ. ಅಲ್ಲದೇ, ಅತೀ ಹೆಚ್ಚು ಧೂಳು, ವಾಯು ಮಾಲಿನ್ಯವಿರುವ ಜಾಗದಲ್ಲಿ ಬದುಕುವುದರಿಂದಲೂ, ಹಾಾರ್ಟ್ ಅಟ್ಯಾಕ್ ಬರುತ್ತದೆ.
ತುಂಬಾ ದಪ್ಪ ಇರುವವರಿಗೆ, ವ್ಯಾಯಾಮ ಮಾಡದೇ, ಜಂಕ್ ಫುಡ್ ಹೆಚ್ಚಾಗಿ ತಿನ್ನುವವರಿಗೆ, ಅತೀ ಹೆಚ್ಚು ಟೆನ್ಶನ್ ತೆಗೆದುಕೊಳ್ಳುವವರಿಗೆ, ಹೆಚ್ಚು ಎಣ್ಣೆ ಪದಾರ್ಥವನ್ನು ತಿನ್ನುವರು, ಇಂಥವರಿಗೆ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಬರುತ್ತದೆ. ಅಲ್ಲದೇ, ಅನುವಂಶಿಕವಾಗಿ ಹೃದಯಾಘಾತ ಬರುವ ಸಾಧ್ಯತೆ ಇರುತ್ತದೆ. ತಂದೆ ತಾಯಿ, ಅಜ್ಜಾ ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ ಸೇರಿ ಕುಟುಂಬಸ್ಥರಲ್ಲಿ ಯಾರಿಗಾದರೂ, ಮೊದಲೇ ಹೃದಯಾಘಾತದ ಸಮಸ್ಯೆ ಇದ್ದಲ್ಲಿ, ಅಂಥವರಿಗೂ ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆ ಇರುತ್ತದೆ.
ವಿದೇಶಿಗರಲ್ಲಿ ವಯಸ್ಸು 50 ದಾಟಿದ ಬಳಿಕ ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ ಭಾರತೀಯರಲ್ಲಿ ವಯಸ್ಸು 40 ದಾಟಿದ ಮೇಲೆ ಹೃದಯಾಘಾತ ಬರಬಹುದು. ಏಕೆಂದರೆ, ಇಲ್ಲಿನ ಆಹಾರ ಸೇವನೆಯಲ್ಲಿ ಲಿಮಿಟ್ ಇಲ್ಲದಿದ್ದಲ್ಲಿ, ಇಂಥ ಸಮಸ್ಯೆ ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಯೋ ವೀಕ್ಷಿಸಿ.
ಹಾರ್ಟ್ ಅಟ್ಯಾಕ್ ಬರುವ ಮುನ್ನ ಏನು ಸೂಚನೆ ಸಿಗುತ್ತದೆ..? ಯಾವ ಕೆಲಸ ಮಾಡಬೇಕು..?